ಈ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಅಧಿಕ ಮದ್ಯಪಾನ ಮಾಡ್ತಾರಂತೆ! ಎಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ | Alcohol

dk - 2025-06-16T190259.275
Published on

Alcohol: ಮದ್ಯಪಾನ ಮಾಡುವುದು ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅದು ಮಹಿಳೆಯರ ಜೀವನಶೈಲಿಯ ಭಾಗವೂ ಆಗಿದೆ. ಭಾರತದ ಕೆಲವು ರಾಜ್ಯಗಳಲ್ಲಿ ಮಹಿಳೆಯರು ಹೆಚ್ಚು ಮದ್ಯಪಾನ ಮಾಡುತ್ತಾರೆ. ಇದೀಗ ಕೆಲವೆಡೆ ಪುರುಷರುಗಿಂತ ಮಹಿಳೆಯರು ಅಧಿಕ ಮದ್ಯಪಾನ ಮಾಡುವ ವರದಿಗಳು ದಾಖಲಾಗಿವೆ.

ಹೌದು, ಬಡಕಟ್ಟು ಪ್ರದೇಶಗಳಲ್ಲಿ ಮದ್ಯಪಾನ ಮಾಡುವುದು ದಿನಚರಿ ಆಗಿಬಿಟ್ಟದೆ. ಇದು ಕೇವಲ ಅಲ್ಲಿ ಸೀಮಿತವಾಗಿಲ್ಲ. ನಗರಗಳಲ್ಲಿಯೂ ಒತ್ತಡದ ಕಾರಣದಿಂದಾಗಿ ಮಹಿಳೆಯಲ್ಲಿ ಮದ್ಯಪಾನ ಅಧಿಕ ಪ್ರಮಾಣ ಹೆಚ್ಚುತ್ತಿದೆ.

2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಮಾಹಿತಿಯ ಪ್ರಕಾರ, ಮಹಿಳೆಯರಲ್ಲಿ ಮದ್ಯ ಸೇವನೆಯ ಹೆಚ್ಚಳಕ್ಕೆ ಸ್ಥಳೀಯ ಸಂಪ್ರದಾಯಗಳು, ಬದಲಾಗುತ್ತಿರುವ ಜೀವನಶೈಲಿ ಮತ್ತು ಸಾಮಾಜಿಕ ಸ್ವೀಕಾರದಂತಹ ಹಲವು ಕಾರಣಗಳಿವೆ ಎಂದು ವಿವಿಧ ಕಾರಣಗಳನ್ನು ಉಲ್ಲೇಖಿಸಿದೆ.

ಯಾವ ರಾಜ್ಯಗಳಲ್ಲಿ ಮದ್ಯಪಾನ ಅಧಿಕ..

ವರದಿ ಪ್ರಕಾರ ಅರುಣಾಚಲ ಪ್ರದೇಶ ದೇಶದ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಮಹಿಳೆಯರಲ್ಲಿ ಮದ್ಯಪಾನದ ಪ್ರಮಾಣ 24.2% ರಷ್ಟಿದೆ. ಅತಿಥಿಗಳಿಗೆ ಅಪೊಂಗ್ ಅಂದರೆ ಅಕ್ಕಿ ಬಿಯರ್ ಬಡಿಸುವುದು ಇಲ್ಲಿನ ಸಂಪ್ರದಾಯದ ಒಂದು ಭಾಗವಾಗಿದೆ.

ಇನ್ನು ನಂತರದ ಸ್ಥಾನದಲ್ಲಿ ಸಿಕ್ಕಿಂ ರಾಜ್ಯ ಇದೆ. ಇಲ್ಲಿ ಶೇ.16.2 ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಚಾಂಗ್ ಎಂಬ ಜನಪ್ರಿಯ ಸ್ಥಳೀಯ ಬಿಯರ್ ಅನ್ನು ಇಲ್ಲಿ ತಯಾರಿಸಲಾಗುತ್ತದೆ, ಇದನ್ನು ರಾಗಿಯಿಂದ ತಯಾರಿಸಲಾಗುತ್ತದೆ.

ಮೂರನೇ ಸ್ಥಾನ ಅಸ್ಸಾಂ ರಾಜ್ಯ ಪಡೆದಿದೆ. ಇಲ್ಲಿ 7.3% ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ವಿಸ್ಕಿ ಹೆಚ್ಚು ಜನಪ್ರಿಯವಾಗಿದೆ.

ತೆಲಂಗಾಣ ನಾಲ್ಕನೇ ಸ್ಥಾನ ಪಡೆದಿದೆ. ತೆಲಂಗಾಣದಲ್ಲಿ ಶೇ. 6.7 ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇಲ್ಲಿ ನಗರಗಳಿಗಿಂತ ಹಳ್ಳಿಗಳಲ್ಲಿ ಮಹಿಳೆಯರು ಹೆಚ್ಚು ಮದ್ಯಪಾನ ಮಾಡುತ್ತಾರೆ.

ಜಾರ್ಖಂಡ್‌ನಲ್ಲಿ ಶೇ. 6.1 ರಷ್ಟು ಮಹಿಳೆಯರು ಮದ್ಯ ಸೇವಿಸುತ್ತಾರೆ. ಅನೇಕ ಬುಡಕಟ್ಟು ಪ್ರದೇಶಗಳಲ್ಲಿ, ಮದ್ಯವು ಸಾಂಸ್ಕೃತಿಕ ಆಚರಣೆಗಳ ಒಂದು ಭಾಗವಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net