More

    World cup 2023: ವಿಶ್ವಕಪ್​ ಆಡಲು ಪಾಕಿಸ್ತಾನಕ್ಕೆ ಭಾರತದ ಈ 2 ನಗರಗಳು ಮಾತ್ರ ಸುರಕ್ಷಿತವಂತೆ!

    ನವದೆಹಲಿ: ಐಪಿಎಲ್​ ಮುಗಿಯುತ್ತಿದ್ದಂತೆ ಏಕದಿನ ವಿಶ್ವಕಪ್​ ಕ್ರೇಜ್​ ಕ್ರೀಡಾಭಿಮಾನಿಗಳನ್ನು ಆವರಿಸಲಿದೆ. ಈ ಬಾರಿ ಭಾರತದಲ್ಲಿ ವಿಶ್ವಕಪ್​ ಟೂರ್ನಿ ನಡೆಯುತ್ತಿರುವುದು ಮತ್ತೊಂದು ವಿಶೇಷತೆ. ಭಾರತದಲ್ಲಿ ಅಂದಮೇಲೆ ಪಾಕಿಸ್ತಾನ ವಿಷಯ ಪ್ರಸ್ತಾಪ ಆಗಲೇಬೇಕು. ಏಕೆಂದರೆ, ಭಾರತದ ನೆಲದಲ್ಲಿ ಪಾಕ್​ ತಂಡಕ್ಕೆ ನಿರ್ಬಂಧವಿದೆ. ಆದರೆ, ಐಸಿಸಿಯ ಮಹತ್ವದ ಟೂರ್ನಿಯಾದ್ದರಿಂದ ವಿಶ್ವಕಪ್​ಗೆ ನಿರ್ಬಂಧ ಸಡಿಲವಾಗಲಿದೆ. ಆದರೆ, ದೇಶಿ ಟೂರ್ನಿಗಳಲ್ಲಿ ಪಾಕ್​ ತಂಡಕ್ಕೆ ಅವಕಾಶ ಇಲ್ಲವೇ ಇಲ್ಲ. ಇದೀಗ ಪಾಕಿಸ್ತಾನ ಭಾರತದ ಈ ಎರಡು ನಗರಗಳಲ್ಲಿ ವಿಶ್ವಕಪ್​ ಪಂದ್ಯಗಳನ್ನಾಡಲು ಆದ್ಯತೆ ನೀಡಿದೆ.

    ಸುರಕ್ಷಿತವೆಂದು ಭಾವಿಸಿದ ಸ್ಥಳಗಳು
    ಯಾವುದು ಆ ಎರಡು ನಗರಗಳು ಅಂದರೆ ಒಂದು ಚೆನ್ನೈ, ಮತ್ತೊಂದು ಕೋಲ್ಕತಾ. ಐಸಿಸಿ ಮೂಲಗಳ ಪ್ರಕಾರ, ಪಾಕ್​ ತಂಡವು ತನ್ನ ಹಿಂದಿನ ಪ್ರವಾಸಗಳಲ್ಲಿ ಸುರಕ್ಷಿತವೆಂದು ಭಾವಿಸಿದ ಎರಡು ಸ್ಥಳಗಳು ಇದಾಗಿವೆ.

    ಇದನ್ನೂ ಓದಿ: ಗೋಮೂತ್ರ ಮಾನವ ಬಳಕೆಗೆ ಅನರ್ಹ; ಹಾನಿಕಾರಕ ಬ್ಯಾಕ್ಟೀರಿಯಾ ಎಂದ ತಜ್ಞರು

    ಅ. 5ರಿಂದ ಕ್ರಿಕೆಟ್​ ಹಬ್ಬ
    ಅಂದಹಾಗೆ ವಿಶ್ವಕಪ್​ ಅ.5 ರಿಂದ ಆರಂಭವಾಗಲಿದೆ. ಫೈನಲ್​ ಸೇರಿದಂತೆ ಒಟ್ಟು 45 ಪಂದ್ಯಗಳು ನಡೆಯಲಿದೆ. ಗುಜರಾತಿನ ಅಹಮದಾಬಾದ್ ಮತ್ತು ರಾಜ್​ಕೋಟ್​​, ಉತ್ತರ ಪ್ರದೇಶದ ಲಖನೌ, ಮಹರಾಷ್ಟ್ರದ ಮುಂಬೈ, ಕರ್ನಾಟಕದ ಬೆಂಗಳೂರು, ದೆಹಲಿ, ಮಧ್ಯಪ್ರದೇಶದ ಇಂದೋರ್​, ಪಂಜಾಬ್​ನ ಮೊಹಾಲಿ, ಅಸ್ಸಾಂನ ಗುವಾಹಟಿ ಮತ್ತು ತೆಲಂಗಾಣದ ಹೈದರಾಬಾದ್​ ಸೇರಿದಂತೆ ಭಾರತದ ಒಟ್ಟು 12 ನಗರಗಳ ಕ್ರೀಡಾಂಗಣಗಳಲ್ಲಿ ವಿಶ್ವಕಪ್​ ಪಂದ್ಯಗಳು ನಡೆಯಲಿವೆ.

    ಚರ್ಚೆ ಸೂಕ್ಷ್ಮವಾಗಿ ಉಳಿದಿದೆ
    ಎಲ್ಲಿ ಆಡಬೇಕೆಂಬುದರ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಪ್ರಮುಖರು ಉನ್ನತ ಮಟ್ಟದ ಐಸಿಸಿ ಕಾರ್ಯನಿರ್ವಾಹಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಐಸಿಸಿ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಆದರೆ, ಈ ಚರ್ಚೆ ಇನ್ನೂ ಸೂಕ್ಷ್ಮವಾಗಿಯೇ ಉಳಿದಿದೆ.

    ಇದನ್ನೂ ಓದಿ: ಹೂಡಿಕೆದಾರರ ಸಂಪತ್ತು 12.56 ಲಕ್ಷ ಕೋಟಿ ರೂ. ವೃದ್ಧಿ; 60 ಸಾವಿರ ರೂ. ಮೀರಿದ ಚಿನ್ನದ ದರ

    ಬಿಸಿಸಿಐ ತೀರ್ಮಾನವೇ ಅಂತಿಮ
    ಅಂದಹಾಗೆ ಪಾಕಿಸ್ತಾನ ಎಲ್ಲಿ ಆಡಬೇಕು ಎಂಬುದು ಬಿಸಿಸಿಐ ಮತ್ತು ಭಾರತ ಸರ್ಕಾರ ಏನು ನಿರ್ಧರಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಆಯ್ಕೆಯನ್ನು ನೀಡಿದರೆ, ಪಾಕಿಸ್ತಾನವು ತನ್ನ ಹೆಚ್ಚಿನ ವಿಶ್ವಕಪ್ ಪಂದ್ಯಗಳನ್ನು ಕೋಲ್ಕತಾ ಮತ್ತು ಚೆನ್ನೈನಲ್ಲಿ ಆಡಲು ಬಯಸುತ್ತದೆ. ಕೊಲ್ಕತ್ತಾದಲ್ಲಿ, ಪಾಕಿಸ್ತಾನವು 2016 ರಲ್ಲಿ ಭಾರತದ ವಿರುದ್ಧ T20 ವಿಶ್ವಕಪ್ ಪಂದ್ಯವನ್ನು ಆಡಿತು ಮತ್ತು ಆಟಗಾರರು ಭದ್ರತೆಯಿಂದ ತುಂಬಾ ಸಂತೋಷಪಟ್ಟಿದ್ದರು. ಅದೇ ರೀತಿ, ಚೆನ್ನೈ ಒಂದು ಸ್ಥಳವಾಗಿ ಪಾಕಿಸ್ತಾನಕ್ಕೆ ಸ್ಮರಣೀಯವಾಗಿ ಉಳಿದಿದೆ. ಈ ನಿರ್ದಿಷ್ಟ ಸ್ಥಳಗಳಲ್ಲಿ ಸುರಕ್ಷಿತ ಎಂಬ ಭಾವನೆ ಅವರಲ್ಲಿದೆ ಎಂದು ಐಸಿಸಿ ಬೋರ್ಡ್‌ಗೆ ಹತ್ತಿರವಿರುವ ಮೂಲವೊಂದು ಮಾಧ್ಯಮಕ್ಕೆ ತಿಳಿಸಿದೆ. (ಏಜೆನ್ಸೀಸ್​)

    ಸಾಧಕರ ದಾರಿ | ಒಂಭತ್ತು ತಿಂಗಳ ತುಂಬು ಗರ್ಭಿಣಿ ಭಾರತದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್​ ಕಂಡುಹಿಡಿದರು!

    ಹಲೋ ಡಾಕ್ಟರ್ | ಕಳಚಲಿ ಮೌಢ್ಯದ ಜಾಡ್ಯ

    ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts