More

  ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​

  ಹೈದರಾಬಾದ್​: ಟಾಲಿವುಡ್​ ಸೂಪರ್​ಸ್ಟಾರ್​ ನಾಗಚೈತನ್ಯ ಕ್ಷಮೆ ಕೋರಿದ್ದರ ಬಗ್ಗೆ ಯುವ ನಟಿ ದಕ್ಷಾ ನಗರ್ಕರ್​ ಅವರು ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಆಡಿರುವ ಮಾತು ಜಾಲತಾಣದಲ್ಲಿ ವೈರಲ್ ಆಗಿದೆ.

  ಟಾಲಿವುಡ್​ನ ಪ್ರಮುಖ ನಟರಲ್ಲಿ ಒಬ್ಬರು
  ತೆಲುಗು ಚಿತ್ರರಂಗದ ಪ್ರಮುಖ ನಟರುಗಳಲ್ಲಿ ನಾಗಚೈತನ್ಯ ಕೂಡ ಒಬ್ಬರು. ಅದರಲ್ಲೂ ತೆಲುಗು ಸೂಪರ್​ಸ್ಟಾರ್​ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ. 2009ರಲ್ಲಿ ತೆರೆಕಂಡ ಜೋಶ್​ ಸಿನಿಮಾ ಮೂಲಕ ಸಿನಿರಂಗಕ್ಕೆ ನಾಗಚೈತನ್ಯ ಪದಾರ್ಪಣೆ ಮಾಡಿದರು. ಸಾಕಷ್ಟು ಹಿಟ್​ ಸಿನಿಮಾಗಳ ಮೂಲಕ ಪ್ರಮುಖ ನಟರ ಸಾಲಿಗೆ ಅವರು ಕೂಡ ಸೇರಿಕೊಂಡಿದ್ದಾರೆ.

  ಇದನ್ನೂ ಓದಿ: ಒಂದು ಕಡೆ ಸಫಾರಿ ಇನ್ನೊಂದು ಕಡೆ ಸುಪಾರಿ! ಇದು ಬಿಜೆಪಿಯ (ಭರ)ವರಸೆ ಎಂದು ಎಚ್​ಡಿಕೆ ಆಕ್ರೋಶ

  ವೈಯಕ್ತಿಕ ವಿಚಾರದಿಂದಲೂ ಭಾರೀ ಸುದ್ದಿ
  ನಾಗಚೈತನ್ಯ ವೈಯಕ್ತಿಕ ವಿಚಾರಕ್ಕೂ ಸುದ್ದಿಯಾದವರು. ಸಮಂತಾರನ್ನು ಪ್ರೀತಿಸಿ 2017ರಲ್ಲಿ ಮದುವೆಯಾದರು. ಆದರೆ, ಕೆಲವೇ ವರ್ಷಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಇಬ್ಬರು 2021ರ ಅಕ್ಟೋಬರ್​ನಲ್ಲಿ ಡಿವೋರ್ಸ್​ ಪಡೆದುಕೊಂಡರು. ಈ ಸುದ್ದಿ ಅಭಿಮಾನಿಗಳಿಗೆ ಮಾತ್ರ ಚಿತ್ರರಂಗದವರಿಗೂ ಶಾಕ್​ ನೀಡಿತು. ಇಬ್ಬರು ತಮ್ಮ ತಮ್ಮ ಸಂಬಂಧಗಳನ್ನು ಕಡಿದುಕೊಂಡು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

  ಸಿನಿಮಾದಲ್ಲಿ ಬಿಜಿ
  ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಾಂಕುತಲಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತ ನಾಗಚೈತನ್ಯ ಅವರ ಕಸ್ಟಡಿ ಸಿನಿಮಾ ಕೂಡ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾವನ್ನು ಮಂಗಾತ ಮತ್ತು ಮಾನಾಡು ಖ್ಯಾತಿಯ ವೆಂಕಟ್​ ಪ್ರಭು ನಿರ್ದೇಶಿಸಿದ್ದಾರೆ.

  ಬಂಗಾರರಾಜು ಚಿತ್ರದಲ್ಲಿ ದಕ್ಷಾ
  ಇತ್ತೀಚೆಗೆ ಸಿನಿಮಾ ಸಂದರ್ಶನದಲ್ಲಿ ನಟಿ ದಕ್ಷಾ ನಗರ್ಕರ್​ ಅವರು ನಾಗಚೈತನ್ಯ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಾ ಅವರು ಅತ್ಯಂತ ಜನಪ್ರಿಯ ನಟಿ. ಆಕೆ ಮಾಡೆಲ್​ ಕೂಡ ಹೌದು. ಅವರು 2014 ರಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಅನೇಕ ಚಿತ್ರಗಳಲ್ಲಿ ನಟಿಸಿದರು. ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದಾರೆ. ನಾಗಚೈತನ್ಯ ಅಭಿನಯದ 2022ರಲ್ಲಿ ತೆರೆಕಂಡ ಬಂಗಾರರಾಜು ಚಿತ್ರದಲ್ಲಿ ಹೆಂದ ಚಕ್ಕಕುಂದಿರೋ ಎಂಬ ಹಾಡಿಗೆ ನಾಗಚೈತನ್ಯ ಜತೆ ಸೊಂಟ ಬಳುಕಿಸಿದ್ದರು.

  ಇದನ್ನೂ ಓದಿ: ಹಳ್ಳಿಗಳಲ್ಲಿ ಮತ ಬಹಿಷ್ಕಾರ ಟ್ರೆಂಡ್; 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬಾಯ್ಕಾಟ್ ಬೆದರಿಕೆ | ಜಿಲ್ಲಾಡಳಿತ, ಪಕ್ಷಗಳಿಗೆ ತಲೆನೋವು

  ತುಂಬಾ ಕಾಳಜಿ ವಹಿಸುತ್ತಾರೆ
  ನಾನು ನಾಗಚೈತನ್ಯ ಜತೆ ನಟಿಸಿದ್ದೇನೆ. ಅವರೊಬ್ಬ ಸರಳ ವ್ಯಕ್ತಿ. ಮಹಿಳೆಯರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಕಿಸ್​ ಮಾಡುವ ಮತ್ತು ತಬ್ಬಿಕೊಳ್ಳುವ ದೃಶ್ಯಗಳಲ್ಲಿ ನಟಿಸುವಾಗ ಅವರು ಕ್ಷಮೆಯನ್ನು ಕೇಳುತ್ತಾರೆ. ಅವರದು ಒಳ್ಳೆಯ ವ್ಯಕ್ತಿತ್ವ ಎಂದು ದಕ್ಷಾ ಗುಣಗಾನ ಮಾಡಿದ್ದಾರೆ. (ಏಜೆನ್ಸೀಸ್​)

  ಕೊನೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿ KKRಗೆ ಜಯ ತಂದುಕೊಟ್ಟ ರಿಂಕು ಸಿಂಗ್​ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ….​

  ಧಾರ್ಮಿಕ ಆಚರಣೆ ವೇಳೆ ದೇವಸ್ಥಾನದ ಟಿನ್​ ಶೆಡ್​ ಮೇಲೆ ಮರ ಬಿದ್ದು 7 ಮಂದಿ ದುರಂತ ಸಾವು

  ಬೆಂಗಳೂರಲ್ಲಿ ಅಮಾನವೀಯ ಘಟನೆ: ಕಳ್ಳತನ ಮಾಡಿದನೆಂದು 1 ವಾರ ಕೂಡಿಟ್ಟು ಹಲ್ಲೆ, ನರಳಿ ನರಳಿ ವ್ಯಕ್ತಿ ಸಾವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts