

ಇಸ್ಲಾಮಾಬಾದ್: ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ಅವರು ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ ಅವರನ್ನು ಸ್ವಯಂ ನಿಘಾ ಘಟಕದಲ್ಲಿರಿಸಲಾಗಿದೆ. ಪಾಕ್ ಪ್ರಧಾನಿಯ ವಿಶೇಷ ಆರೋಗ್ಯಾಧಿಕಾರಿ ಪೈಸಲ್ ಸುಲ್ತಾನ್ ಅವರು ಈ ವಿಷಯವನ್ನು ಟ್ವಿಟ್ಟರ್ನಲ್ಲಿ ಪ್ರಟಿಸಿದ್ದಾರೆ. ಆದರೆ, ಅವರು ಹೆಚ್ಚಿನ ಮಾಹಿತಿ ನೀಡಿಲ್ಲ.
ವಿಶೇಷವೆಂದರೆ ಇಮ್ರಾನ್ ಖಾನ್ ಅವರು ನಿನ್ನೆಯಷ್ಟೇ Sinopharm ಎಂಬ ಚೀನಾದಲ್ಲಿ ತಯಾರಾದ ಲಸಿಕೆಯನ್ನು ಪಡೆದಿದ್ದರು. ಸದ್ಯ ಪಾಕಿಸ್ತಾನದಲ್ಲಿ ಇದೊಂದೆ ಲಸಿಕೆ ಲಭ್ಯವಿದೆ. 5 ಲಕ್ಷ Sinopharm ಡೋಸ್ಗಳನ್ನು ಚೀನಾ ಪಾಕಿಸ್ತಾನಕ್ಕೆ ಕಳುಹಿಸಿ ಕೊಟ್ಟಿದೆ.
ಪಾಕಿಸ್ತಾನದಲ್ಲೂ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇದುವರೆಗೆ ಅಲ್ಲಿ 6.15 ಲಕ್ಷ ಜನರಿಗೆ ಮಾರಕ ಸೋಂಕು ತಗುಲಿದೆ. 14 ಸಾವಿರ ಜನ ಮೃತಪಟ್ಟಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲೇ ಅಧಿಕ ಪ್ರಕರಣಗಳು ವರದಿಯಾಗಿದ್ದು, ಅಲ್ಲಿ ಲಾಕ್ಡೌನ್ ಹೇರುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. (ಏಜೇನ್ಸಿಸ್).