ಯುವರತ್ನ ಟ್ರೈಲರ್ ರಿಲೀಸ್: ಯೂ ಟ್ಯೂಬ್​​ನಲ್ಲಿ ಧೂಳೆಬ್ಬಿಸಿದ ಪುನೀತ್!

Yuvaratna
Published on

ಬೆಂಗಳೂರು: ಕನ್ನಡದ ಬಹು ನಿರೀಕ್ಷಿತ ಪವರ್​ಸ್ಟಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದೆ.

2.17 ನಿಮೀಷದ ಈ ಟ್ರೈಲರ್​ನಲ್ಲಿ ಪುನೀತ್ ರಾಜ್​ಕುಮಾರ್​ ಅವರನ್ನು ಮಾಸ್ ಆಗಿ ತೋರಿಸಲಾಗಿದ್ದು, ಪುನೀತ್​ ಅಭಿಮಾನಿಗಳನ್ನು ಈ ಸಿನಿಮಾ ತುದಿಗಾಲ ಮೇಲೆ ನಿಲ್ಲಿಸಿದೆ. ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರ ತಂಡ ಟ್ರೈಲರ್ ಲಾಂಚ್ ಮಾಡಿತು. ಟ್ರೈಲರ್ ಬಿಡುಗಡೆಯಾದ 2.30 ಗಂಟೆಯಲ್ಲಿ 3.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಕಂಡಿದೆ.

ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾ ಖ್ಯಾತಿಯ ಸಂತೋಷ್ ಆನಂದ ರಾಮ್ ಅವರು ಈ ಸಿನಿಮಾ ನಿರ್ದೇಶಿಸಿದ್ದು, ಪುನೀತ್ ಸೇರಿದಂತೆ ತಮಿಳಿನ ಶಯೇಷಾ, ಧನಂಜಯ್, ಪ್ರಕಾಶ್ ರಾಜ್, ಸಾಯಿ ಕುಮಾರ್, ಅವಿನಾಶ್, ಅಚ್ಯುತ್ ರಾವ್, ರಂಗಾಯಣ ರಘು ಸೇರಿದಂತೆ ಬಹುದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ. ವಿಜಯ್ ಕಿರಂಗದೂರು ಅವರು ಸಿನಿಮಾ ನಿರ್ಮಿಸಿದ್ದಾರೆ.

ಶಿಕ್ಷಣದ ಖಾಸಗೀಕರಣದಿಂದ ಸಮಾಜದಲ್ಲಿ ಕಂದಕ ಉಂಟಾಗುತ್ತಿದೆ ಎಂಬ ಒಂದು ಸಾಮಾಜಿಕ ಅಂಶವನ್ನು ಇಟ್ಟುಕೊಂಡು ಯುವರತ್ನ ಏಪ್ರೀಲ್ 1 ರಂದು ತೆರೆಗೆ ಬರಲು ಸಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net