VIDEO| 'ಮನೆಗೆ ಬಾ ನೋಡ್ಕೋತೀನಿ' ಮುಂದುವರಿದ ಭಾಗ ರಿಲೀಸ್​! ಮನೆಗೆ ಬಂದ್ಮೇಲೆ ಹೀಗೆ ಮಾಡ್ತಾರಂತೆ ಜೆನೆಲಿಯಾ

jenelia
Published on

ಮುಂಬೈ: ಬಾಲಿವುಡ್​ನ ಪ್ರಸಿದ್ಧ ಸೆಲೆಬ್ರಿಟಿ ದಂಪತಿಗಳ ಪಟ್ಟಿಗೆ ಸೇರುವವರು ಜೆನೆಲಿಯಾ ಡಿಸೋಜಾ ಮತ್ತು ರಿತೀಶ್ ದೇಶ್ಮುಖ್. ಸೋಶಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟಿವ್​ ಇರುವ ಈ ದಂಪತಿಗೆ ದೊಡ್ಡ ಅಭಿಮಾನಿ ಬಳಗವಿದೆ. ಈ ದಂಪತಿಯ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್ ಆಗಿತ್ತು. ಅದರ ಮುಂದುವರಿದ ಭಾಗವನ್ನು ಸ್ವತಃ ಜೆನೆಲಿಯಾ ಇದೀಗ ಹಂಚಿಕೊಂಡಿದ್ದಾರೆ.

ಗಂಡ ಹೆಂಡತಿ ಹೊರಗೆ ಹೋದಾಗ ಯಾರಾದರೂ ಯುವತಿ ಗಂಡನೊಂದಿಗೆ ಸಲಿಗೆಯಿಂದ ವರ್ತಿಸಿದರೆ ಹೆಂಡತಿ ಯಾವ ರೀತಿ ಫೀಲ್​ ಮಾಡುತ್ತಾಳೆ ಎನ್ನುವ ವಿಡಿಯೋ ಒಂದು ಇತ್ತೀಚೆಗೆ ವೈರಲ್​ ಆಗಿತ್ತು. ಯಾವುದೋ ಕಾರ್ಯಕ್ರಮದಲ್ಲಿ ರಿತೀಶ್​ ಬಳಿ ಬಂದ ಪ್ರೀತಿ ಜಿಂತಾ ಸಲುಗೆಯಿಂದ ಮಾತನಾಡುತ್ತಾರೆ. ರಿತೀಶ್​ ಕೂಡ ಅತ್ಯಂತ ಸಲುಗೆಯಿಂದ ಆಕೆಯೊಂದಿಗೆ ಮಾತನಾಡುತ್ತಾರೆ. ಅಲ್ಲೇ ಇದ್ದ ಜೆನೆಲಿಯಾ ಅದನ್ನು ನೋಡಿ, ನಗುತ್ತಾಳಾದರೂ ಆಕೆಯ ಮನಸ್ಸಲ್ಲಿ ಬೇರೆಯದ್ದೇ ಭಾವನೆ ಇದ್ದಂತೆ ಕಾಣುತ್ತದೆ. ಗಂಡನಿಗೆ ಮನೆಗೆ ಬಾ ನೋಡಿಕೊಳ್ಳುತ್ತೇನೆ ಎಂದು ಮನಸ್ಸಲ್ಲೇ ಬೈದಂತೆ ಭಾಸವಾಗುತ್ತದೆ. ಈ ವಿಡಿಯೋ ಸಕತ್​ ವೈರಲ್​ ಆಗಿರುವುದನ್ನು ಗಮನಿಸಿರುವ ಸೆಲೆಬ್ರಿಟಿ ಜೋಡಿ ಅದರ ಮುಂದುವರಿದ ಭಾಗವನ್ನು ಹರಿಬಿಟ್ಟಿದೆ.

ಸ್ಕೇಟಿಂಗ್​ ಮಾಡಲು ಹೋಗಿ ಕೈ ಮುರಿದುಕೊಂಡಿರುವ ಜೆನೆಲಿಯಾ ಮನೆಯಲ್ಲಿ ಕ್ಲಾಸ್​ ತೆಗೆದುಕೊಂಡಿದ್ದು, ರಿತೀಶ್​ ಹೆಂಡತಿಗೆ ಹೆದರುವ ಬಗೆಯನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಈ ವಿಡಿಯೋ ಕೂಡ ವೈರಲ್​ ಲಿಸ್ಟ್​ಗೆ ಸೇರ್ಪಡೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net