

ಚೆನ್ನೈ: ಓವಿಯಾ ಲೀಕ್ಡ್ ( Oviya Leaked ) ಹ್ಯಾಶ್ಟ್ಯಾಗ್ ಹೆಸರಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ಸಂಬಂಧ ನಟಿ ಹಾಗೂ ಮಾಜಿ ಬಿಸ್ಬಾಸ್ ಸ್ಪರ್ಧಿ ಓವಿಯಾ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ವಿಡಿಯೋ ಹಿಂದಿರುವ ಕೈವಾಡ ಯಾರದ್ದು ಎಂದು ತಿಳಿಸುವ ಮೂಲಕ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಮೊನ್ನೆಯಷ್ಟೇ ಓವಿಯಾ ಇ-ಮೇಲ್ ಮೂಲಕ ತ್ರಿಸ್ಸೂರ್ ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದು, ತನ್ನನ್ನು ಅವಮಾನಿಸುವಂತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ದೂರು ಬಂದ ಹಿನ್ನೆಲೆಯಲ್ಲಿ ತ್ರಿಸ್ಸೂರ್ ನಗರದ ಸೈಬರ್ ಕ್ರೈಂ ಪೊಲೀಸರು ಮೂರು ವಿಡಿಯೋಗಳನ್ನು ತೆಗೆದುಹಾಕಿದ್ದಾರೆ. ಅಲ್ಲದೆ, ವಿಡಿಯೋಗಳನ್ನು ಅಪ್ಲೋಡ್ ಮಾಡಿದವರನ್ನು ಶೀಘ್ರದಲ್ಲೇ ಪತ್ತೆ ಮಾಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಡಿಯೋ ಹರಿಬಿಟ್ಟಿರುವುದರ ಹಿಂದೆ ಓವಿಯಾ ಅವರ ಮಾಜಿ ಸ್ನೇಹಿತ ತಾರಿಕ್ ಇದ್ದಾನೆ ಎಂದು ತಮಿಳು ಮಾಧ್ಯಮಗಳು ಈಗಾಗಲೇ ವರದಿ ಮಾಡಿದ್ದವು. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಓವಿಯಾ, ಸ್ನೇಹವನ್ನು ಕೊನೆಗೊಳಿಸಿದ್ದಕ್ಕಾಗಿ ನನ್ನ ಮೇಲೆ ಸೇಡು ತೀರಿಸಿಕೊಳ್ಳವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ತಾರಿಕ್ ಇದೇ ರೀತಿ ಅನೇಕ ಮಹಿಳೆಯರ ಚಿತ್ರಗಳನ್ನು ಮಾರ್ಫ್ ಮಾಡಿದ್ದಾನೆ ಎಂದು ಓವಿಯಾ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಖಾಸಗಿ ವಿಡಿಯೋ ನನಗೆ ಸಂಬಂಧಿಸಿದ್ದಲ್ಲ, ಅದನ್ನು ಮಾರ್ಫ್ ಮಾಡಲಾಗಿದೆ ಎಂದು ನಟಿ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿಡಿಯೋವನ್ನು ಪ್ರಸಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇನ್ನು ಅಶ್ಲೀಲ ವಿಡಿಯೋದ ಕೆಲವು ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅಲ್ಲದೆ, ನಟಿಯನ್ನೇ ಹೋಲುವ ಖಾಸಗಿ ವಿಡಿಯೋ ಸಹ ಹರಿದಾಡುತ್ತಿದೆ. ಇದರೊಂದಿಗೆ ಸಿನಿಮಾದ ಹಾಟ್ ದೃಶ್ಯಗಳನ್ನೂ ಸೇರಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಕ್ಸ್ನಲ್ಲಿ ಓವಿಯಾ ಲೀಕ್ಡ್ ( Oviya Leaked ) ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು ವಿಡಿಯೋ ಸತ್ಯಾಸತ್ಯತೆಯನ್ನು ಓವಿಯಾ ಬಳಿ ಪ್ರಶ್ನಿಸಿದ್ದರು. ಅಲ್ಲದೆ, ಹರಿದಾಡುತ್ತಿರುವ ವೀಡಿಯೋ ಡೀಪ್ಫೇಕ್ ಎಂದು ಅಭಿಮಾನಿಗಳು ಬಲವಾಗಿ ವಾದಿಸಿದ್ದರು. ಇನ್ನು ಕೆಲವರು ನಟಿಯ ಭುಜದ ಮೇಲಿರುವಂತಹ ಟ್ಯಾಟೂ, ವಿಡಿಯೋದಲ್ಲಿರುವ ಮಹಿಳೆಯ ಭುಜದಲ್ಲೂ ಇದ್ದು, ವೈರಲ್ ವಿಡಿಯೋ ಓವಿಯಾರದ್ದೇ ಎನ್ನುತ್ತಿದ್ದಾರೆ.
ನಟಿ ಓವಿಯಾ ಅವರು ಇತ್ತೀಚೆಗೆ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಇದನ್ನೇ ಕಾದು ಕುಳಿತಿದ್ದ ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಬಂದು, ಅಶ್ಲೀಲ ವಿಡಿಯೋ ಬಗ್ಗೆ ಕೇಳಿದ್ದರು. ಮೇಡಂ ನಿಮ್ಮ 17 ಸೆಕೆಂಡ್ ವಿಡಿಯೋ ಲೀಕ್ ಆಗಿದೆ ಎಂದು ನೆಟ್ಟಿಗನೊಬ್ಬ ಕೇಳಿದ್ದನು. ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿದ ಓವಿಯಾ, ‘ಎಂಜಾಯ್’ ಎಂದಿದ್ದರು. ಅಷ್ಟೇ ಅಲ್ಲದೆ, 17 ಸೆಕೆಂಡ್ ಅಷ್ಟೇನಾ ಇನ್ನು ಉದ್ದದ ವಿಡಿಯೋ ಇಲ್ಲವೇ ಎಂದು ಮತ್ತೊಬ್ಬ ನೆಟ್ಟಿಗ ಪ್ರಶ್ನಿಸಿದ್ದ, ಇದಕ್ಕೆ ಖಾರವಾಗಿಯೇ ಉತ್ತರಿಸಿದ ಓವಿಯಾ, ಮುಂದಿನ ಬಾರಿ ಬ್ರೋ ಎಂದಿದ್ದರು.
ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ ( Oviya ), ಅದಾದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ನಟಿಸಿದ್ದು ಕೇವಲ ಎರಡೇ ಸಿನಿಮಾ ಆದರೂ ಸೂಪರ್ ಹಿಟ್ ಕಿರಾತಕ ಸಿನಿಮಾದಿಂದಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿದ್ದಾರೆ. ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದ ಓವಿಯಾ ( Oviya Leaked ) ಇದೀಗ ಅಲ್ಲೂ ಕೂಡ ಅವಕಾಶಗಳು ಇಲ್ಲದೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಸಿನಿಮಾಗಳ ಅವಕಾಶ ಕಡಿಮೆಯಾದ ಬಳಿಕ ಓವಿಯಾ, ತಮಿಳಿನ ವಿಜಯ್ ಚಾನೆಲ್ನಲ್ಲಿ ಪ್ರಸಾರವಾದ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಜನಮನ್ನಣೆ ಗಳಿಸಿದರು. ಶೋ ಮುಗಿಸಿದ ಬಳಿಕವೂ ಓವಿಯಾ ಅವರಿಗೆ ಕೆಲ ಸಿನಿಮಾಗಳಲ್ಲಿ ಮತ್ತೆ ಅವಕಾಶಗಳು ಸಿಕ್ಕವು. ಆದರೆ, ಮತ್ತೆ ಅವಕಾಶಗಳು ಕಡಿಮೆಯಾದವು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ವಿಚಾರದಲ್ಲೂ ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ವಿವಾದಗಳಿಗೂ ಓವಿಯಾ ಹೊರತೇನಿಲ್ಲ. (ಏಜೆನ್ಸೀಸ್)