ಮಿಲ್ಕ್‌ಶೇಕ್ vs ಫ್ರೂಟ್​ ಜ್ಯೂಸ್: ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಉಪಯುಕ್ತ ಮಾಹಿತಿ | Milkshake vs Fruit Juice

Milkshake vs Fruit Juice
Published on

Milkshake vs Fruit Juice: ಮಿಲ್ಕ್‌ಶೇಕ್ ಮತ್ತು ಫ್ರೂಟ್​ ಜ್ಯೂಸ್ ( ಹಣ್ಣಿನ ರಸ )​ ಈ ಎರಡರಲ್ಲಿ ಒಂದನ್ನು ಆಯ್ಕೆಮಾಡುವಾಗ ಅನೇಕ ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ, ಎರಡೂ ಆಯ್ಕೆಗಳು ಬಹಳಷ್ಟು ರುಚಿ ಮತ್ತು ಪೋಷಕಾಂಶಗಳನ್ನು ಹೊಂದಿರುತ್ತವೆ. ವಾಸ್ತವವಾಗಿ, ಮಿಲ್ಕ್​ಶೇಕ್ ಮತ್ತು ಫ್ರೂಟ್​ ಜ್ಯೂಸ್​ ಎರಡನ್ನೂ ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

ಮಿಲ್ಕ್​ಶೇಕ್, ಕ್ಯಾಲ್ಸಿಯಂ ಮತ್ತು ಪ್ರೊಟೀನ್‌ಗಳನ್ನು ಒದಗಿಸಿದರೆ, ಫ್ರೂಟ್​ ಜ್ಯೂಸ್​, ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಅಂತಿಮವಾಗಿ, ಎರಡರ ನಡುವಿನ ಆಯ್ಕೆಯು ನಿಮ್ಮ ವೈಯಕ್ತಿಕ ಆದ್ಯತೆಗಳು ಮತ್ತು ಆಹಾರದ ಅಗತ್ಯಗಳನ್ನು ಅವಲಂಬಿಸಿರುತ್ತದೆ. ಆದರೆ, ನಿಮ್ಮ ಆರೋಗ್ಯಕ್ಕೆ ನಿಜವಾಗಿಯೂ ಯಾವುದು ಒಳ್ಳೆಯದು? ಅವುಗಳ ಪ್ರಯೋಜನಗಳು ಏನು ಎಂಬುದನ್ನು ನಾವೀಗ ನೋಡೋಣ.

ಮಿಲ್ಕ್‌ಶೇಕ್​​ ಮತ್ತು ಫ್ರೂಟ್​ ಜ್ಯೂಸ್​ ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಮಿಲ್ಸ್​ಶೇಕ್‌ಗಳು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಇದು ಅತ್ಯಗತ್ಯ. ಇದು ಗಮನಾರ್ಹ ಪ್ರಮಾಣದ ಪ್ರೋಟೀನ್ ಸಹ ಒದಗಿಸುತ್ತದೆ. ಇದು ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ. ಮತ್ತೊಂದೆಡೆ ಫ್ರೂಟ್​ ಜ್ಯೂಸ್​, ವಿಟಮಿನ್​ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಫ್ರೂಟ್​ ಜ್ಯೂಸ್​ ತ್ವರಿತ ಶಕ್ತಿ ವರ್ಧಕವಾಗಿದೆ.

ಮಿಲ್ಕ್‌ಶೇಕ್‌ಗಳನ್ನು ಸಾಮಾನ್ಯವಾಗಿ ಹಾಲು, ಐಸ್ ಕ್ರೀಮ್, ಚಾಕೊಲೇಟ್ ಅಥವಾ ವೆನಿಲ್ಲಾದಂತಹ ವಿವಿಧ ರುಚಿಯೊಂದಿಗೆ ತಯಾರಿಸಲಾಗುತ್ತದೆ. ಕಡಿಮೆ ಕೊಬ್ಬಿನ ಹಾಲು ಮತ್ತು ತಾಜಾ ಹಣ್ಣುಗಳೊಂದಿಗೆ ತಯಾರಿಸಿದರೆ ಆ ಮಿಲ್ಕ್​ಶೇಕ್ ಉತ್ತಮವಾಗಿರುತ್ತದೆ. ಇದು ಪೌಷ್ಟಿಕಾಂಶದ ಆಯ್ಕೆಯಾಗಿದೆ. ಡಯೆಟ್ ಮಾಡುವವರಿಗೆ ಹೆಚ್ಚುವರಿ ಪೋಷಕಾಂಶಗಳನ್ನು ಒದಗಿಸಲು ಮಿಲ್ಕ್ ಶೇಕ್ ಉತ್ತಮ ಮಾರ್ಗವಾಗಿದೆ.

ಹಣ್ಣುಗಳಿಂದ ದ್ರವವನ್ನು ಹೊರತೆಗೆಯುವ ಮೂಲಕ ಫ್ರೂಟ್​ ಜ್ಯೂಸ್​ ತಯಾರಿಸಲಾಗುತ್ತದೆ. ತಾಜಾ ಅಥವಾ ಪ್ಯಾಕೇಜ್ ಆಗಿರಬಹುದು. ಸಂಪೂರ್ಣ ಹಣ್ಣನ್ನು ತಿನ್ನದೆ ವಿಟಮಿನ್​ಗಳು ಮತ್ತು ಖನಿಜಗಳ ಪ್ರಮಾಣವನ್ನು ಪಡೆಯಲು ಅನುಕೂಲಕರ ಮಾರ್ಗವಾಗಿದೆ. ಆದಾಗ್ಯೂ, ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಸಕ್ಕರೆಯನ್ನು ಸೇರಿಸದ ಶೇ. 100% ಫ್ರೂಟ್​ ಜ್ಯೂಸ್​ ಆಯ್ಕೆ ಮಾಡುವುದು ಮುಖ್ಯವಾಗಿದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net