

Little Finger : ಇಂದು ಎಲ್ಲೇ ಹೋದರೂ, ಯಾವುದೇ ಮನೆಯಲ್ಲಿ ನೋಡಿದರೂ ಮಕ್ಕಳಿಂದ ಹಿಡಿದು ದೊಡ್ಡವರ ಕೈಯಲ್ಲೂ ಕಾಣಸಿಗುವ ಸಾಮಾನ್ಯ ವಸ್ತುವೆಂದರೆ ಅದು ಸ್ಮಾರ್ಟ್‌ಫೋನ್. ಆದರೆ, ಸ್ಮಾರ್ಟ್ಫೋನ್ನಿಂದಾಗುವ ಕೆಲವು ಸಮಸ್ಯೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಅವುಗಳಲ್ಲಿ ಒಂದು ಸ್ಮಾರ್ಟ್‌ಫೋನ್ ಫಿಂಗರ್ ಅಥವಾ ಐಫೋನ್ ಫಿಂಗರ್ ಎಂಬ ಆರೋಗ್ಯ ಸ್ಥಿತಿ. ಇದು ಸಾಮಾನ್ಯ ದೈಹಿಕ ಕಾಯಿಲೆಗಳು ಅಥವಾ ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಉಂಟಾಗುವ ತೊಂದರೆಗಳನ್ನು ವಿವರಿಸಲು ಬಳಸುವ ಪದವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್ ಫೋನ್‌ಗಳಂತಹ ಸಾಧನಗಳ ಬಳಕೆ ಹೆಚ್ಚಾಗಿರುವುದರಿಂದ ಈ ಸ್ಥಿತಿಯು ಹೆಚ್ಚು ಸಾಮಾನ್ಯವಾಗಿದೆ. ಅತಿಯಾದ ಸ್ಮಾರ್ಟ್ ಫೋನ್ ಬಳಕೆ ಬೆರಳುಗಳ ಆಕಾರದಲ್ಲಿ ಬದಲಾವಣೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಐಫೋನ್ ಫಿಂಗರ್ ಎಂದು ಕರೆಯಲ್ಪಡುವ ಈ ವಿಚಿತ್ರ ಸಮಸ್ಯೆ ನಮ್ಮ ಬೆರಳುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವೀಗ ನೋಡೋಣ.
ಟಿಕ್ಟಾಕ್ನಲ್ಲಿ ಹಂಚಿಕೊಂಡ ಟಿಜೆ ಶೋನ ಮಾರ್ಚ್ ಸಂಚಿಕೆಯಲ್ಲಿ ನವ್ಲಿಯಾ ಎಂಬುವರು ಇದರ ಬಗ್ಗೆ ಚರ್ಚಿಸಿದ್ದಾರೆ. ನೀವು ಸ್ಮಾರ್ಟ್ ಫೋನ್‌ಗಳನ್ನು ಹಿಡಿದಿಟ್ಟುಕೊಳ್ಳುವ ರೀತಿಯು ನಿಮ್ಮ ಕಿರುಬೆರಳಿನ ಮೇಲೆ ಭಾರವನ್ನು ಉಂಟುಮಾಡುತ್ತದೆ. ಇದು ಕಿರುಬೆರಳಿನ ಆಕಾರದಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ ಎಂದು ನವ್ಲಿಯಾ ಹೇಳಿದ್ದಾರೆ.
ಇನ್ನು ಆಕ್ಯುಪೇಷನಲ್ ಥೆರಪಿಸ್ಟ್ ಆಂಡ್ರ್ಯೂ ಬ್ಯಾಕೆನ್ ಪ್ರಕಾರ, ಐಫೋನ್ ಬೆರಳು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಈ ರೋಗವನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ ಎನ್ನುತ್ತಾರೆ. ಆದರೆ, ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಕ್ಯುಬಿಟಲ್ ಟನಲ್ ಸಿಂಡ್ರೋಮ್ ಮತ್ತು ಕಾರ್ಪಲ್ ಟನಲ್ ಸಿಂಡ್ರೋಮ್ ಬರಬಹುದು ಎಂದು ಹೇಳುತ್ತಾರೆ.
ಫೋನ್ ಅನ್ನು ನಿರಂತರವಾಗಿ ಬಳಸುವುದರಿಂದ ಕೈ ಮತ್ತು ಬೆರಳುಗಳಲ್ಲಿ ಮರಗಟ್ಟುವಿಕೆ ಮತ್ತು ನೋವು ಉಂಟಾಗುತ್ತದೆ. ನಿರಂತರ ಸ್ಮಾರ್ಟ್ ಫೋನ್ ಬಳಕೆ ಸ್ನಾಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇದು ಕ್ಲಿನೋಡಾಕ್ಟಿಲಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಕಿರುಬೆರಳಿನ ತುದಿಯು ಉಂಗುರದ ಬೆರಳಿನ ಹತ್ತಿರ ಬಾಗಿದ ಸ್ಥಿತಿ ಇದು. ಆದರೆ, ಇವು ಸ್ಮಾರ್ಟ್ ಫೋನ್ ಬಳಕೆಗೆ ನೇರವಾಗಿ ಸಂಬಂಧಿಸಿಲ್ಲ ಎನ್ನುತ್ತಾರೆ ತಜ್ಞರು.
ನೀವು ಕೆಲವು ವಿಷಯಗಳತ್ತ ಗಮನ ಹರಿಸಿದರೆ, ಸ್ಮಾರ್ಟ್‌ಫೋನ್ ಅನ್ನು ಫಿಂಗರ್ ರೆಸಿಸ್ಟೆಂಟ್ ಮಾಡಬಹುದು. ಕಿರುಬೆರಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪಾಪ್ ಸಾಕೆಟ್‌ಗಳನ್ನು ಬಳಸಬಹುದು. ಫೋನ್ ಬಳಕೆಯನ್ನು ಕಡಿಮೆ ಮಾಡುವುದು ಅತ್ಯಂತ ಉತ್ತಮ ಮಾರ್ಗವಾಗಿದೆ. ಈ ಬಗ್ಗೆ ಎಚ್ಚರವಹಿಸುವುದು ತುಂಬಾನೇ ಮುಖ್ಯ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.