

ಚೆನ್ನೈ: ಖ್ಯಾತ ನಟಿ ಓವಿಯಾ ( Actress Oviya ) ಅವರದ್ದು ಎನ್ನಲಾದ ಖಾಸಗಿ ವಿಡಿಯೋ ( Oviya Leaked ) ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು, ಮೊನ್ನೆಯಿಂದ (ಅ.12) ಸಾಮಾಜಿಕ ಜಾಲತಾಣದಲ್ಲಿ ಇದೇ ವಿಚಾರ ಭಾರಿ ಚರ್ಚೆಯಾಗುತ್ತಿದೆ. #OviyaLeaked ಎಂಬ ಹ್ಯಾಶ್ಟ್ಯಾಗ್ ಕೂಡ ಎಕ್ಸ್ನಲ್ಲಿ ಟ್ರೆಂಡ್ ಆಗಿತ್ತು. ಈ ಬಗ್ಗೆ ಓವಿಯಾ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ವಿಚಾರವಾಗಿ ಇದೀಗ ನಟ ಹಾಗೂ ನಿರ್ದೇಶಕ ರಾಹುಲ್ ರವೀಂದ್ರನ್ ಮಾಡಿರುವ ಟ್ವೀಟ್ ನೆಟ್ಟಿಗರ ಗಮನ ಸೆಳೆದಿದೆ.
ರಾಹುಲ್ ರವೀಂದ್ರನ್ ಅವರು ಗಾಯಕಿ, ಡಬ್ಬಿಂಗ್ ಕಲಾವಿದೆ ಹಾಗೂ ಮಹಿಳಾ ಪರ ಹೋರಾಟಗಾರ್ತಿ ಚಿನ್ಮಯಿ ಶ್ರೀಪಾದ ಅವರ ಪತಿ. ತಮ್ಮ ಪತ್ನಿಯಂತೆ ರಾಹುಲ್ ರವೀಂದ್ರನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ರಾಹುಲ್ ಮಾಡುವ ಪ್ರತಿಯೊಂದು ಟ್ವೀಟ್‌ಗಳು ಮತ್ತು ಕಾಮೆಂಟ್‌ಗಳು ಎಲ್ಲರನ್ನೂ ಯೋಚಿಸುವಂತೆ ಮಾಡುತ್ತವೆ. ಜಾಲತಾಣದಲ್ಲಿ ನಡೆಯುವ ಯಾವುದೇ ನಕಾರಾತ್ಮಕತೆ ಮತ್ತು ಟ್ರೋಲಿಂಗ್‌ಗೆ ರಾಹುಲ್ ಕೂಲ್ ಆಗಿಯೇ ಪ್ರತಿಕ್ರಿಯಿಸುತ್ತಾರೆ. ಯಾರಾದರೂ ತಮ್ಮ ಪತ್ನಿ ಚಿನ್ಮಯಿ ಅವರನ್ನು ನಿಂದಿಸಿ ಟ್ವೀಟ್ ಮಾಡಿದರು ಕೂಡ ನಯವಾಗಿಯೇ ಉತ್ತರ ನೀಡುತ್ತಾರೆ. ಇದೇ ವೇಳೆ ರಾಹುಲ್ ರವೀಂದ್ರನ್ ಅವರ ಇತ್ತೀಚಿನ ಟ್ವೀಟ್ ಓದುಗರನ್ನು ಚಿಂತನೆಗೆ ದೂಡುತ್ತದೆ.
ಸದ್ಯ ಎಕ್ಸ್ನಲ್ಲಿ ಓವಿಯಾ ಅವರ ಲೀಕ್ ವಿಡಿಯೋ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಓವಿಯಾ ಅವರ 17 ಸೆಕೆಂಡ್ ಪ್ರೈವೇಟ್ ವಿಡಿಯೋ ಲೀಕ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಆದರೆ, ಇದು ಒರಿಜಿನಲ್ ವಿಡಿಯೊವೇ? ಅಥವಾ ಡೀಪ್‌ಫೇಕ್ ವಿಡಿಯೋನಾ? ಎಂಬ ಗೊಂದಲವೂ ಇದೆ. ಈ ನಡುವೆ ರಾಹುಲ್ ರವೀಂದ್ರನ್ ಟ್ವೀಟ್ ವೈರಲ್ ಆಗುತ್ತಿದೆ. ನಾನು ಯಾವುದನ್ನು ನಿರ್ಣಯಿಸದೆ, ನನಗೆ ಅನಿಸಿದ್ದನ್ನು ಹೇಳುತ್ತೇನೆ. ನಾನು ಸ್ನಾತಕೋತ್ತರ ಪದವಿ ಮಾಡುತ್ತಿರುವಾಗ ಸ್ನೇಹಿತನ ಮೂಲಕ ನಟಿಯೊಬ್ಬಳ ಲೀಕ್ ವಿಡಿಯೋ ನೋಡಿದೆ. ಆರಂಭದಲ್ಲಿ ನಾನು ಕೂಡ ಉತ್ಸುಕನಾಗಿದ್ದೆ. ಆದರೆ, ವಿಡಿಯೋ ನೋಡಲು ಶುರು ಮಾಡಿದಾಗ, ಏನೋ ತಪ್ಪಾಗಿದೆ ಎಂದು ಅನಿಸಿತು. ತನ್ನ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಅವಳಿಗೆ ಗೊತ್ತಿರಲಿಲ್ಲ. ಇದು ಅರಿವಾದಾಗ ಆ ವಿಡಿಯೋ ವೀಕ್ಷಣೆ ಮಾಡಲು ಅಹಿತಕರವಾಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ವಿಡಿಯೋ ನೋಡುವುದನ್ನು ನಿಲ್ಲಿಸಿದೆ. ನಾನು ಲೀಕ್ ಆದ ವಿಡಿಯೋವನ್ನು ನೋಡಿದ್ದು ಅದೇ ಕೊನೆ. ಮತ್ತೆ ಎಂದಿಗೂ ನೋಡಬಾರದು ಮನಸ್ಸು ಮಾಡಿದೆ. ಸಂತ್ರಸ್ತೆ ಎಷ್ಟು ನೋವು ಅನುಭವಿಸುತ್ತಾರೆ ಮತ್ತು ಅದು ಯಾವ ರೀತಿಯ ಮಾನಸಿಕ ಆಘಾತವನ್ನು ಉಂಟುಮಾಡುತ್ತದೆ ಎಂಬುದು ನಮಗೆ ತಿಳಿದಿಲ್ಲ. ನಮಗೆ ಸೋರಿಕೆಯಾದ ವಿಡಿಯೋಗಳು ಅಗತ್ಯವಿಲ್ಲ. ಗೌಪ್ಯತೆ ಮೇಲಿನ ಭಯಾನಕ ಆಕ್ರಮಣದ ಮೂಲಕ ಹೋಗಬೇಕಾದ ಪ್ರತಿಯೊಬ್ಬ ಸಂತ್ರಸ್ತೆಯರಿಗೂ ಸಾಕಷ್ಟು ಶಕ್ತಿ ಸಿಗಲಿ ಎಂದು ರಾಹುಲ್ ಬರೆದುಕೊಂಡಿದ್ದಾರೆ. ರಾಹುಲ್ ಎಲ್ಲಿಯೂ ಓವಿಯಾ ಹೆಸರನ್ನು ಉಲ್ಲೇಖಿಸದಿದ್ದರೂ ಓವಿಯಾ ಪ್ರಕರಣದ ಬಗ್ಗೆ ಪರೋಕ್ಷವಾಗಿ ಮಾತನಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ನೆಟ್ಟಿಗರು ನಿಮ್ಮ ಮಾತುಗಳು ಸತ್ಯ ಸರ್ ಎಂದು ರಾಹುಲ್ ಪರ ಮಾತನಾಡುತ್ತಿದ್ದಾರೆ.
ಸದ್ಯ ಎಲ್ಲರ ಪ್ರಶ್ನೆಯಲ್ಲಿರುವ ಓವಿಯಾ ವಿಡಿಯೋ ಎಕ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಅಲ್ಲಿನ ಬಳಕೆದಾರರು ಸ್ಕ್ರೀನ್‌ಶಾಟ್‌ಗಳು ಮತ್ತು ಕ್ಲಿಪ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿರುವ ಮಹಿಳೆಯ ತೋಳಿನ ಮೇಲೆ ನಟಿ ಓವಿಯಾ ತೋಳಿನ ಮೇಲಿರುವ ರೀತಿಯಲ್ಲೇ ಟ್ಯಾಟೂ ಇದೆ. ಹೀಗಾಗಿ ವಿಡಿಯೋದಲ್ಲಿರುವುದು ನಿಜವಾಗಿಯೂ ಓವಿಯಾ ಅವರೇ ಎಂದು ಕೆಲವರು ನಂಬಿದ್ದಾರೆ. ಆದಾಗ್ಯೂ, ಡೀಪ್‌ಫೇಕ್ ತಂತ್ರಜ್ಞಾನವು ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅಂತಹ ದೃಶ್ಯಗಳನ್ನು ಸುಲಭವಾಗಿ ರಚಿಸಬಹುದು. ಹೀಗಾಗಿ ಇದು ಡೀಪ್‌ಫೇಕ್ ವಿಡಿಯೋ ಎಂದು ಕೆಲವರು ವಾದಿಸುತ್ತಿದ್ದಾರೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಓವಿಯಾರನ್ನು ಇನ್ಸ್ಟಾಗ್ರಾಂನಲ್ಲಿ ಪ್ರಶ್ನೆ ಮಾಡಿದ್ದಾರೆ. ಖಾಸಗಿ ವಿಡಿಯೋ ಲೀಕ್ ಆಗಿರುವುದು ನಿಜಾನಾ? ಇದೊಂದು ಡೀಪ್‌ಫೇಕ್ ವಿಡಿಯೋನಾ? ಎಂದು ಪ್ರಶ್ನಿಸುತ್ತಿದ್ದಾರೆ. ಕೆಲ ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೆ ಓವಿಯಾ ಅಂತೂ ತುಂಬಾ ಖಾರವಾಗಿಯೇ ಉತ್ತರ ನೀಡಿದ್ದಾರೆ.
ನಟಿ ಓವಿಯಾ ಅವರು ನಿನ್ನೆ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ನೆಟ್ಟಿಗನೊಬ್ಬ, ಮೇಡಂ ನಿಮ್ಮ 17 ಸೆಕೆಂಡ್ ವಿಡಿಯೋ ಲೀಕ್ ಆಗಿದೆ ಎಂದಿದ್ದಾನೆ. ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿರುವ ಓವಿಯಾ, ‘ಎಂಜಾಯ್’ ಎಂದಿದ್ದಾರೆ. ಅಷ್ಟೇ ಅಲ್ಲದೆ, 17 ಸೆಕೆಂಡ್ ಅಷ್ಟೇನಾ ಇನ್ನು ಉದ್ದದ ವಿಡಿಯೋ ಇಲ್ಲವೇ ಎಂದು ಮತ್ತೊಬ್ಬ ನೆಟ್ಟಿಗ ಪ್ರಶ್ನಿಸಿದ್ದು, ಇದಕ್ಕೆ ಖಾರವಾಗಿಯೇ ಉತ್ತರಿಸಿರುವ ಓವಿಯಾ, ‘ಮುಂದಿನ ಬಾರಿ ಬ್ರೋ’ ಎಂದಿದ್ದಾರೆ. ಇನ್ನೊಬ್ಬ ವಿಡಿಯೋ ಲಿಂಕ್ ಕಳುಹಿಸಿ ಎಂದು ಓವಿಯಾರನ್ನೇ ಕೇಳಿದ್ದಾನೆ.
ಅಂದಹಾಗೆ ಓವಿಯಾ ಅವರಿಂದ ಈ ರೀತಿಯ ಪ್ರತಿಕ್ರಿಯೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಈ ರೀತಿಯ ಯಾವುದೇ ವಿಡಿಯೋ ರಿಲೀಸ್ ಆದ ತಕ್ಷಣ ಅದು ನಾನಲ್ಲ ಎಂದು ನಿರಾಕರಿಸುತ್ತಾರೆ. ಆದರೆ, ಓವಿಯಾ ಆ ರೀತಿ ಏನನ್ನೂ ಮಾಡದೆ ನೆಟ್ಟಿಗರಿಗೆ ಪ್ರತಿಕ್ರಿಯಿಸಿದ್ದು ಹಲವರಿಗೆ ಅಚ್ಚರಿ ಮೂಡಿಸಿದೆ. ಅಂತೆಯೇ ಇಬ್ಬರ ವೈಯಕ್ತಿಕ ಖಾಸಗಿ ವಿಚಾರವನ್ನು ಗುಟ್ಟಾಗಿ ವಿಡಿಯೋ ಮಾಡಿ ಇಂಟರ್ನೆಟ್ನಲ್ಲಿ ಹರಿಬಿಟ್ಟಿರುವುದು ದುಷ್ಕೃತ್ಯ ಎಂದು ಅರ್ಥ ಮಾಡಿಕೊಂಡಿರುವ ನೆಟ್ಟಿಗರು ಓವಿಯಾಗೆ ಬೆಂಬಲವಾಗಿ ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)