

ಚೆನ್ನೈ: ಓವಿಯಾ ಲೀಕ್ಡ್ ( Oviya Leaked ) ಹ್ಯಾಶ್ಟ್ಯಾಗ್ ಹೆಸರಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ಸಂಬಂಧ ನಟಿ ಹಾಗೂ ಮಾಜಿ ಬಿಸ್ಬಾಸ್ ಸ್ಪರ್ಧಿ ಓವಿಯಾ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಖಾಸಗಿ ವಿಡಿಯೋ ನನಗೆ ಸಂಬಂಧಿಸಿದ್ದಲ್ಲ, ಅದನ್ನು ಮಾರ್ಫ್ ಮಾಡಲಾಗಿದೆ ಎಂದು ನಟಿ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರವನ್ನು ನಟಿಯ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದು, ವಿಡಿಯೋವನ್ನು ಪ್ರಸಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚೆನ್ನೈ ಪೊಲೀಸರನ್ನು ಓವಿಯಾ ಸಂಪರ್ಕಿಸಿದ್ದಾರೆ ಎಂದು ಹೇಳಿದ್ದಾರೆ.
ಅಶ್ಲೀಲ ವಿಡಿಯೋದ ಕೆಲವು ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ನಟಿಯನ್ನೇ ಹೋಲುವ ಖಾಸಗಿ ವಿಡಿಯೋ ಸಹ ಹರಿದಾಡುತ್ತಿದೆ. ಇದರೊಂದಿಗೆ ಸಿನಿಮಾದ ಹಾಟ್ ದೃಶ್ಯಗಳನ್ನೂ ಸೇರಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಕ್ಸ್ನಲ್ಲಿ ಓವಿಯಾ ಲೀಕ್ಡ್ ( Oviya Leaked ) ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು ವಿಡಿಯೋ ಸತ್ಯಾಸತ್ಯತೆಯನ್ನು ಓವಿಯಾ ಬಳಿ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಹರಿದಾಡುತ್ತಿರುವ ವೀಡಿಯೋ ಡೀಪ್ಫೇಕ್ ಎಂದು ಬಲವಾಗಿ ವಾದಿಸುತ್ತಿದ್ದಾರೆ. ಇನ್ನು ಕೆಲವರು ನಟಿಯ ಭುಜದ ಮೇಲಿರುವಂತಹ ಟ್ಯಾಟೂ, ವಿಡಿಯೋದಲ್ಲಿರುವ ಮಹಿಳೆಯ ಭುಜದಲ್ಲೂ ಇದ್ದು, ವೈರಲ್ ವಿಡಿಯೋ ಓವಿಯಾರದ್ದೇ ಎನ್ನುತ್ತಿದ್ದಾರೆ.
ನಟಿ ಓವಿಯಾ ಅವರು ಇತ್ತೀಚೆಗೆ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಇದನ್ನೇ ಕಾದು ಕುಳಿತಿದ್ದ ನೆಟ್ಟಿಗರು ಕಾಮೆಂಟ್ ಸೆಕ್ಷನ್ನಲ್ಲಿ ಬಂದು, ಅಶ್ಲೀಲ ವಿಡಿಯೋ ಬಗ್ಗೆ ಕೇಳಿದ್ದಾರೆ. ಮೇಡಂ ನಿಮ್ಮ 17 ಸೆಕೆಂಡ್ ವಿಡಿಯೋ ಲೀಕ್ ಆಗಿದೆ ಎಂದು ನೆಟ್ಟಿಗನೊಬ್ಬ ಕೇಳಿದ್ದಾನೆ. ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿರುವ ಓವಿಯಾ, ‘ಎಂಜಾಯ್’ ಎಂದಿದ್ದಾರೆ. ಅಷ್ಟೇ ಅಲ್ಲದೆ, 17 ಸೆಕೆಂಡ್ ಅಷ್ಟೇನಾ ಇನ್ನು ಉದ್ದದ ವಿಡಿಯೋ ಇಲ್ಲವೇ ಎಂದು ಮತ್ತೊಬ್ಬ ನೆಟ್ಟಿಗ ಪ್ರಶ್ನಿಸಿದ್ದು, ಇದಕ್ಕೆ ಖಾರವಾಗಿಯೇ ಉತ್ತರಿಸಿರುವ ಓವಿಯಾ, ಮುಂದಿನ ಬಾರಿ ಬ್ರೋ ಎಂದಿದ್ದಾರೆ.
ಅಂದಹಾಗೆ ಓವಿಯಾ ಅವರಿಂದ ಈ ರೀತಿಯ ಪ್ರತಿಕ್ರಿಯೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಈ ರೀತಿಯ ಯಾವುದೇ ವಿಡಿಯೋ ರಿಲೀಸ್ ಆದ ತಕ್ಷಣ ಅದು ನಾನಲ್ಲ ಎಂದು ನಿರಾಕರಿಸುತ್ತಾರೆ. ಆದರೆ, ಓವಿಯಾ ಆ ರೀತಿ ಏನನ್ನೂ ಮಾಡದೆ ನೆಟ್ಟಿಗರಿಗೆ ಪ್ರತಿಕ್ರಿಯಿಸಿದ್ದು ಹಲವರಿಗೆ ಅಚ್ಚರಿ ಮೂಡಿಸಿತು. ಆದರೆ, ಕೊನೆಗೂ ಒಂದು ನಿರ್ಧಾರಕ್ಕೆ ಬಂದಿರುವ ಓವಿಯಾ, ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿ, ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ ( Oviya ), ಅದಾದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ನಟಿಸಿದ್ದು ಕೇವಲ ಎರಡೇ ಸಿನಿಮಾ ಆದರೂ ಸೂಪರ್ ಹಿಟ್ ಕಿರಾತಕ ಸಿನಿಮಾದಿಂದಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿದ್ದಾರೆ. ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದ ಓವಿಯಾ ( Oviya Leaked ) ಇದೀಗ ಅಲ್ಲೂ ಕೂಡ ಅವಕಾಶಗಳು ಇಲ್ಲದೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಸಿನಿಮಾಗಳ ಅವಕಾಶ ಕಡಿಮೆಯಾದ ಬಳಿಕ ಓವಿಯಾ, ತಮಿಳಿನ ವಿಜಯ್ ಚಾನೆಲ್ನಲ್ಲಿ ಪ್ರಸಾರವಾದ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಜನಮನ್ನಣೆ ಗಳಿಸಿದರು. ಶೋ ಮುಗಿಸಿದ ಬಳಿಕವೂ ಓವಿಯಾ ಅವರಿಗೆ ಕೆಲ ಸಿನಿಮಾಗಳಲ್ಲಿ ಮತ್ತೆ ಅವಕಾಶಗಳು ಸಿಕ್ಕವು. ಆದರೆ, ಮತ್ತೆ ಅವಕಾಶಗಳು ಕಡಿಮೆಯಾದವು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ವಿಚಾರದಲ್ಲೂ ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ವಿವಾದಗಳಿಗೂ ಓವಿಯಾ ಹೊರತೇನಿಲ್ಲ.
ಓವಿಯಾ ಅವರು ಈ ರೀತಿ ಬೋಲ್ಡ್ ಆಗಿ ಮಾತನಾಡುವುದು ಹೊಸದೇನಲ್ಲ. ಒಂದೊಮ್ಮೆ ಸಂದರ್ಶನವೊಂದರಲ್ಲಿ ಓವಿಯಾ ಲೈಂಗಿಕ ಶಿಕ್ಷಣದ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದರು. ಲೈಂಗಿಕ ಶಿಕ್ಷಣವನ್ನು ಕಡ್ಡಾಯ ಮಾಡಬೇಕು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅನೇಕ ಆಸೆಗಳಿರುತ್ತವೆ. ಹಾಗೆಯೇ ಹಾರ್ಮೋನುಗಳು ಸಹ ಇವೆ. ಅನೇಕ ಜನರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ಅದು ಸತ್ಯವೂ ಹೌದು ಎಂದಿದ್ದರು.
ಇದೀಷ್ಟೇ ಅಲ್ಲದೆ, ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ಒವಿಯಾ ಕೊಟ್ಟ ಉತ್ತರ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಹೆಣ್ಣುಮಕ್ಕಳ ಜೀವನ ಹಾಳು ಮಾಡುವ ಬದಲು, ಹಸ್ತಮೈಥುನ ಮಾಡಿಕೊಳ್ಳುವುದೇ ಉತ್ತಮ ಅಲ್ಲವೇ ಮೇಡಂ? ಎಂದು ಅಭಿಮಾನಿಯೊಬ್ಬ ಪ್ರಶ್ನೆ ಎಸೆದಿದ್ದ. ಅದಕ್ಕೆ ಅಷ್ಟೇ ಕೂಲ್ ಆಗಿ ಮತ್ತು ಯಾವುದೇ ಸಂಕೋಚಪಟ್ಟುಕೊಳ್ಳದೇ, ‘ನೀವು ಹೇಳಿದ್ದು ಸರಿಯಾಗಿಯೇ ಇದೆ..’ ಎಂದು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ ನಿಮಗೆ ಗಂಡನ ಬಗ್ಗೆ ಏನೆಲ್ಲ ಕಲ್ಪನೆ ಇದೆ ಎಂದಿದ್ದಕ್ಕೆ, ‘ನನಗೆ ಗಂಡನ ಅವಶ್ಯಕತೆ ಇಲ್ಲ’ ಎಂದೂ ಅವರು ಉತ್ತರಿಸಿದ್ದರು. ಒವಿಯಾರ ಈ ಮಾತು ಜಾಲತಾಣದಲ್ಲಿ ವೈರಲ್ ಆಗಿ, ಬಹಳ ಚರ್ಚೆಯನ್ನು ಹುಟ್ಟುಹಾಕಿತ್ತು. ಆಗಾಗ ಒವಿಯಾರ ಈ ಮಾತು ವೈರಲ್ ಆಗುತ್ತಲೇ ಇರುತ್ತದೆ.
ನೀವಿನ್ನೂ ಮದುವೆ ಆಗಿಲ್ಲದಿರುವುದರಿಂದ ಕೆಲವು ನಿಮ್ಮನ್ನು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ಇದು ನಿಜವೇ ಎಂದು ಅಭಿಮಾನಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ್ದ ಓವಿಯಾ, ನನಗೆ ಸದಾ ಎದುರಾಗುವ ಪ್ರಶ್ನೆ ಇದು. ನಾನು ಸಲಿಂಗಕಾಮಿಯಲ್ಲ. ಓರ್ವ ನಟಿಯಾಗಿ ಇಂತಹ ವದಂತಿಗಳು ಸಾಮಾನ್ಯವಾಗಿದೆ. ಆದರೆ, ಇಂತಹ ವದಂತಿಗಳುನ್ನು ಎದುರಿಸುವುದು ಕಷ್ಟಕರ. ಆದರೂ, ಇಂತಹವುಗಳನ್ನು ನಿರ್ಲಕ್ಷಿಸುತ್ತೇನೆಂದು ಓವಿಯಾ ಹೇಳಿದ್ದರು. ಹೀಗೆ ಅಭಿಮಾನಿಗಳ ಜತೆ ಓವಿಯಾ ಮುಕ್ತವಾಗಿ ಮಾತನಾಡುತ್ತಾರೆ. (ಏಜೆನ್ಸೀಸ್)