VVS Laxman: ವಿಶ್ವದಾದ್ಯಂತ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಇನ್ನು ನಮ್ಮ ದೇಶದಲ್ಲಿ ಕ್ರಿಕೆಟ್ ಮೇಲೆ ಇರುವಷ್ಟು ಪ್ರೀತಿ ಬೇರೆ ಯಾವ ದೇಶದಲ್ಲೂ ಇಲ್ಲ. ಟೀಮ್ ಇಂಡಿಯಾದ ಯಾವುದೇ ಪಂದ್ಯವಿದ್ದರೆ ಸಾಕು ರಜೆ ಹಾಕಿ ಪಂದ್ಯ ವೀಕ್ಷಣೆ ಮಾಡಲು ಹೋಗುತ್ತಾರೆ. ವಿದೇಶಗಳಿಗೆ ಹೋಗಿ ಪಂದ್ಯ ವೀಕ್ಷಣೆ ಮಾಡಿದ ಉದಾಹರಣೆಗಳೂ ಇವೆ. ಅದರಲ್ಲೂ ಕ್ರಿಕೆಟಿಗರನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಸ್ಫೂರ್ತಿಯಾಗಿ ತೆಗೆದುಕೊಂಡು ಜೀವನದಲ್ಲಿ ಬೆಳೆಯಲು ಇಷ್ಟಪಡುತ್ತಾರೆ. ತಮ್ಮ ನೆಚ್ಚಿನ ಕ್ರಿಕೆಟಿಗರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಅನೇಕ ದಿಗ್ಗಜ ಆಟಗಾರರಿದ್ದಾರೆ. ಅವರಲ್ಲಿ ಒಬ್ಬರು ವಿವಿಎಸ್ ಲಕ್ಷ್ಮಣ್ ( VVS Laxman ). ಅವರು ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಸೃಷ್ಟಿಸಿದ್ದಾರೆ.
ಇದೀಗ ಈ ದಿಗ್ಗಜ ಆಟಗಾರನ ಮಗಳ ಫೋಟೋವೊಂದು ವೈರಲ್ ಆಗಿದೆ. ನಾಯಕಿಯರನ್ನೂ ಮೀರಿದ ತನ್ನ ಸೌಂದರ್ಯದಿಂದ ವಿವಿಎಸ್ ಲಕ್ಷ್ಮಣ್ ಮಗಳು ನೆಟ್ಟಿಗರ ಮನ ಕದಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳ ಮಕ್ಕಳನ್ನು ಆಟೋಮ್ಯಾಟಿಕ್ ಆಗಿ ಸಾಕಷ್ಟು ಮಂದಿ ಫಾಲೋ ಮಾಡುತ್ತಾರೆ. ಆದರೆ, ಕ್ರಿಕೆಟಿಗರ ಮಕ್ಕಳಿಗೆ ಅಷ್ಟೊಂದು ಮನ್ನಣೆ ಸಿಗುವುದಿಲ್ಲ. ಆದರೂ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾರಾ ಕೂಡ ತನ್ನ ಸೌಂದರ್ಯದಿಂದಲೇ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ವಿವಿಎಸ್ ಲಕ್ಷ್ಮಣ್ ಪುತ್ರಿ ಅಚಿಂತ್ಯ ಕೂಡ ಅದೇ ರೇಂಜ್ನಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ವಿವಿಎಸ್ ಲಕ್ಷ್ಮಣ್ ಅವರು ಬ್ರಹ್ಮೋತ್ಸವದ ನಿಮಿತ್ತ ತಮ್ಮ ಕುಟುಂಬ ಸಮೇತ ತಿರುಮಲಕ್ಕೆ ಭೇಟಿ ನೀಡಿದ್ದರು.
ಲಕ್ಷ್ಮಣ್ ಅವರು ವೆಂಕಟೇಶ್ವರ ಸ್ವಾಮಿಯ ಭಕ್ತ. 15 ಲಕ್ಷ ರೂ. ಖರ್ಚು ಮಾಡಿ ದೇವಸ್ಥಾನದಲ್ಲಿ ಒಂದು ದಿನದ ಹೂವಿನ ಅಲಂಕಾರ ಮಾಡಿಸಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಣ್ ಅವರು ತಮ್ಮ ಕುಟುಂಬದೊಂದಿಗೆ ಫೋಟೋಗಳನ್ನು ತೆಗೆಸಿಕೊಂಡರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಆ ಫೋಟೋಗಳಲ್ಲಿ ಲಕ್ಷ್ಮಣ್ ಅವರ ಮಗಳು ಅಚಿಂತ್ಯಾ ಎಲ್ಲರ ಗಮನ ಸೆಳೆದಿದ್ದಾರೆ.
ಅಚಿಂತ್ಯಾರ ಬೆರಗುಗೊಳಿಸುವ ಸೌಂದರ್ಯದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವ ಹೀರೋಯಿನ್ಗೂ ಕಮ್ಮಿ ಇಲ್ಲ ಎಂದು ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ. ಅಂದಹಾಗೆ ವಿವಿಎಸ್ ಲಕ್ಷ್ಮಣ್ ಅವರು ತಮ್ಮ 15 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿಜಯವಾಡ ಮೂಲದ ಖ್ಯಾತ ವೈದ್ಯರಾದ ಡಾ.ಶಾಂತಾರಾಮ್ ಮತ್ತು ಡಾ.ಸತ್ಯಭಾಮಾ, ಲಕ್ಷ್ಮಣ್ ಅವರ ಪಾಲಕರು. ಲಕ್ಷ್ಮಣ್ 2004ರಲ್ಲಿ ಗುಂಟೂರಿನ ಜಿಆರ್ ಶೈಲಜಾ ಅವರನ್ನು ವಿವಾಹವಾದರು. ಅವರಿಗೆ ಸರ್ವಜಿತ್ ಎಂಬ ಮಗ ಮತ್ತು ಅಚಿಂತ್ಯ ಎಂಬ ಮಗಳು ಇದ್ದಾರೆ. (ಏಜೆನ್ಸೀಸ್)
ಬಿಗ್ಬಾಸ್ ಮನೆಯಲ್ಲಿ ಲೇಡೀಸ್ ಬಾತ್ರೂಮ್ ಇಣುಕಿ ನೋಡಿದ ಪುರುಷ ಸ್ಪರ್ಧಿ! ನಂತರ ನಡೆದಿದ್ದಿಷ್ಟು… Bigg Boss
ನ್ಯಾಯಮೂರ್ತಿ ಸಂಜೀವ್ ಖನ್ನಾ ಸುಪ್ರೀಂಕೋರ್ಟ್ನ ಮುಂದಿನ ಸಿಜೆಐ: ಡಿ.ವೈ. ಚಂದ್ರಚೂಡ್ ಶಿಫಾರಸು | Sanjiv Khanna