More

    ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ಒಕ್ಕಲಿಗ ಸ್ವಾಮೀಜಿಗಳ ಒಕ್ಕೊರಲ ಒತ್ತಾಯ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಪ್ರಸ್ತಕ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ವಿಜೇತರಾಗಿರುವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂಬುದಾಗಿ ಒಕ್ಕಲಿಗ ಸಮುದಾಯ ಆಗ್ರಹಿಸುತ್ತಿದೆ. ಇದೇ ವಿಚಾರವಾಗಿ ಒಕ್ಕಲಿಗ ಸ್ವಾಮೀಜಿಗಳೂ ಸಭೆ ಸೇರಿದ್ದು ಒಕ್ಕೊರಲಿಂದ ಒತ್ತಾಯಿಸಿ ಒತ್ತಡ ಹೇರಲಾರಂಭಿಸಿದ್ದಾರೆ.

    ವಿಜಯನಗರದಲ್ಲಿರುವ ಆದಿಚುಂಚನಗಿರಿಯ ಶಾಖಾ ಮಠದಲ್ಲಿ ಒಕ್ಕಲಿಗ ಸಮುದಾಯದ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿಯವರ ನೇತೃತ್ವದಲ್ಲಿ ಒಕ್ಕಲಿಗರ ಮುಖಂಡರು ಸಭೆ ಸೇರಿದ್ದು, ಡಿ.ಕೆ.ಶಿವಕುಮಾರ್ ಅವರನ್ನೇ ಸಿಎಂ ಆಗಿಸಬೇಕು ಎಂಬ ನಿಟ್ಟಿನಲ್ಲಿ ಒತ್ತಾಯಿಸುವ ಕಾರ್ಯತಂತ್ರ ನಡೆಯುತ್ತಿದೆ.

    ಇದನ್ನೂ ಓದಿ: ಕುತೂಹಲ ಕೆರಳಿಸಿದೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ: ಸಿಎಂ ಗಾದಿಗಾಗಿ ನಾನಾ ಒತ್ತಡ

    ಕಳೆದ ಬಾರಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ವಿಚಾರವಾಗಿ ಸಮುದಾಯ ಬೆಂಬಲಿಸಿತ್ತು. ಡಿ.ಕೆ.ಶಿವಕುಮಾರ್​ ಕೂಡ ಅನೇಕ‌ ಸಭೆ-ಸಮಾರಂಭದಲ್ಲಿ ನನ್ನ ಕೈಗೆ ಒಮ್ಮೆ ಪೆನ್ನು ಕೊಟ್ಟು‌ ನೋಡಿ ಎಂದು ಹೇಳಿದ್ದರು. ಎಸ್.ಎಂ.ಕೃಷ್ಣ, ಸದಾನಂದಗೌಡ ಎಲ್ಲರಿಗೂ ಕೆಲವು ತಿಂಗಳ ಆಡಳಿತ ಸಿಕ್ಕಿದ್ದರೆ ಹೆಚ್ಚು ಎಂದ ನಂಜಾವಧೂತ ಸ್ವಾಮೀಜಿ, ಇವತ್ತು ರಾಷ್ಟ್ರಕ್ಕೆ‌ ಮಾದರಿಯಾಗುವ ಆಡಳಿತ ಕೊಟ್ಟಿದ್ದರೆ ಅದು ಒಕ್ಕಲಿಗ ಸಮುದಾಯ ಎಂದರು.

    ಹಿಂದೆ ಕುಮಾರಸ್ವಾಮಿ ಕೂಡ ಯಾವುದೇ ತೆರಿಗೆ ಹೇರದೆ ‌ಸಾಲ ಮನ್ನಾ ಮಾಡಿದ್ದರು. ಕೆಂಗಲ್ ಹನುಮಂತಯ್ಯ ಏಕೀಕರಣಕ್ಕಾಗಿ ಹೋರಾಡಿದ್ದರು. ಬೆಂಗಳೂರು ಅಭಿವೃದ್ಧಿಗೆ ಕಾವೇರಿ ನೀರು ಕೊಟ್ಟವರು ಎಚ್​.ಡಿ.ದೇವೇಗೌಡರು ಎಂದು ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಶಿವಕುಮಾರ್ ಅವರ ಪರಿಸ್ಥಿತಿ ‌ನೀವೆಲ್ಲ ನೋಡಿದ್ದೀರಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಸಮಯದಲ್ಲಿ ಕಾರ್ಯಕರ್ತರ ರೀತಿ ಅವರು ಕೆಲಸ ಮಾಡಿದ್ದರು. ಅವರು ಏನೆಲ್ಲ ನೋವು ಅನುಭವಿಸಿದ್ದರು ಎನ್ನುವುದೂ ನಿಮಗೆಲ್ಲ ಗೊತ್ತಿದೆ. ಅಷ್ಟು‌ ನೋವು ಬೇರೆ ಯಾರಿಗಾದರೂ ಕೊಟ್ಟಿದ್ದರೆ ಅವರು ಭೂಮಿ‌ ಮೇಲೆ‌ ಇರುತ್ತಿರಲಿಲ್ಲ ಎನ್ನುತ್ತ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬ ಆಗ್ರಹವನ್ನು ನಂಜಾವಧೂತ ಸ್ವಾಮೀಜಿ ವ್ಯಕ್ತಪಡಿಸಿದರು.

    ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಬೇಕು ಎಂದು ಶಾಸಕಾಂಗ ಸಭೆಯಲ್ಲಿ ನಾವು ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರ ಬಳಿ ನಾವು ಕೇಳಿಕೊಳ್ಳುತ್ತೇವೆ. ಅವರ ದುಡಿಮೆಗೆ ಒಂದು ಅವಕಾಶ ಮಾಡಿಕೊಡಿ ಎಂದು ಪ್ರೀತಿಯಿಂದ ಆಗ್ರಹಿಸುತ್ತೇವೆ. ಸಿದ್ದರಾಮಯ್ಯ- ಖರ್ಗೆ ಅವರ ಮಾರ್ಗದರ್ಶನವಿರಲಿ, ಎಲ್ಲ ಸಮುದಾಯದವರನ್ನು ಡಿಕೆಶಿ ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರೆ. ಅವರು ನೊಂದಿರುವ ಮನುಷ್ಯ, ಅವರಿಗೆ ಒಂದು ನ್ಯಾಯೋಚಿತ ಅವಕಾಶ ಮಾಡಿಕೊಡಿ. ನಾಳೆ ಲಕ್ಷಾಂತರ ಜನರೊಂದಿಗೆ ಮನವಿ ಮಾಡಿಕೊಳ್ಳುವ ಜತೆಗೆ ಸಂಭ್ರಮಾಚರಣೆ ಮಾಡಲಿದ್ದೇವೆ‌‌‌‌ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಇವತ್ತಿನದ್ದು ಬ್ಯಾನರ್‌ ಇಲ್ಲದ ಕಾರ್ಯಕ್ರಮ. ಪ್ರತಿಯೊಬ್ಬರ ಹೃದಯದಲ್ಲಿ ಅಚ್ಚೊತ್ತಿರುವ ಕಾರ್ಯಕ್ರಮಕ್ಕೆ ಬ್ಯಾನರ್ ಬೇಕಿಲ್ಲ. ಎಲ್ಲ ಮಾನದಂಡದೊಂದಿಗೆ ಅರ್ಹರಾಗಿರುವವರು ಡಿ.ಕೆ.ಶಿವಕುಮಾರ್. ಅವರು ಪಕ್ಷವನ್ನು ಮುನ್ನಡೆಸಿದ್ದಾರೆ, ಅವರಿಗೆ ಸಿಎಂ ಸ್ಥಾನ ಕೊಡಬೇಕು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

    ನಾವ್ಯಾರೂ ಪಕ್ಷಕ್ಕೆ ಅನಿವಾರ್ಯ ಅಲ್ಲ: ಮಾಜಿ ಸಚಿವ ವಿ.ಸೋಮಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts