More

    ಕುತೂಹಲ ಕೆರಳಿಸಿದೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ: ಸಿಎಂ ಗಾದಿಗಾಗಿ ನಾನಾ ಒತ್ತಡ

    ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಭರ್ಜರಿಯಾಗಿ ಗೆಲುವು ಸಾಧಿಸಿದ ಬೆನ್ನಿಗೇ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ಭಾರಿ ಚಟುವಟಿಕೆಗಳು ನಡೆಯಲಾರಂಭಿಸಿವೆ. ಈ ಮಧ್ಯೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಯೋಜನೆಗೊಂಡಿದ್ದು, ಕುತೂಹಲ ಕೆರಳಿಸಿದೆ.

    ರಾಜಧಾನಿಯ ಖಾಸಗಿ ಹೊಟೇಲೊಂದರಲ್ಲಿ ಶಾಸಕಾಂಗ ಸಭೆ ಆಯೋಜಿಸಲಾಗಿದ್ದು, ಹೊಟೇಲ್ ಸುತ್ತ ಭಾರಿ ಬಿಗಿಭದ್ರತೆ ಹಮ್ಮಿಕೊಳ್ಳಲಾಗಿದೆ. ಏಳು ಇನ್​ಸ್ಪೆಕ್ಟರ್​ಗಳ ನೇತೃತ್ವದಲ್ಲಿ 120ಕ್ಕೂ ಅಧಿಕ ಪೊಲೀಸರು ಭದ್ರತೆಗೆ ನಿಯೋಜಿಸಲ್ಪಟ್ಟಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಎಐಸಿಸಿ ವೀಕ್ಷಕರು ಆಗಮಿಸಲಿದ್ದು ಸಭೆ ಜರುಗಲಿದೆ.

    ಇದನ್ನೂ ಓದಿ: ದೃಷ್ಟಿ ಇಲ್ಲದಿದ್ರೂ ಶಾಲೆಗೇ ಸಿಬಿಎಸ್​ಇ ಟಾಪರ್​: ಆ್ಯಸಿಡ್​ ದಾಳಿಗೆ ಎರಡೂ ಕಣ್ಣು ಕಳೆದುಕೊಂಡ್ರೂ ಹೋಪ್ ಕಳ್ಕೊಂಡಿಲ್ಲ!

    ಇನ್ನು ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ಭಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಕೆಲವೆಡೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭಾಶಯಗಳು ಎಂದು ಅಭಿಮಾನಿಗಳು ಈಗಲೇ ಪೋಸ್ಟರ್/ಬ್ಯಾನರ್​ ಅಳವಡಿಸಿ ಸಂಭ್ರಮಿಸಲಾರಂಭಿಸಿದ್ದಾರೆ.

    ಇನ್ನೊಂದೆಡೆ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಆಗಿಸಬೇಕು ಎಂದು ಅವರ ನಿವಾಸದಲ್ಲಿ ಜಮಾಯಿಸಿದ ಅಭಿಮಾನಿಗಳು ಬೇಡಿಕೆ ವ್ಯಕ್ತಪಡಿಸಿದ್ದಾರೆ. ಜತೆಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಒಕ್ಕಲಿಗರು ಆದಿಚುಂಚನಗಿರಿ ಶಾಖಾ ಮಠದಲ್ಲೂ ಒಗ್ಗೂಡಿ ಬೇಡಿಕೆ ಇಟ್ಟಿದ್ದು, ಸಭೆಗೆ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಿದ್ದಾರೆ.

    ನಾವ್ಯಾರೂ ಪಕ್ಷಕ್ಕೆ ಅನಿವಾರ್ಯ ಅಲ್ಲ: ಮಾಜಿ ಸಚಿವ ವಿ.ಸೋಮಣ್ಣ

    ವಾಟ್ಸ್ಆ್ಯಪ್ ಮೂಲಕ ವಂಚನೆ; ಸುರಕ್ಷತೆಗಾಗಿ ನೀವು ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts