ನವದೆಹಲಿ: ಶಿವಮೊಗ್ಗದ ಟ್ರಯಲ್ ಬ್ಲ್ಯಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ, ಗೋಡೆ ಬರಹದ ಮೂಲ ಆರೋಪಿ ಶಿವಮೊಗ್ಗದ ಅರಾಫತ್ ಅಲಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಗುರುವಾರ ಬಂಧಿಸಿದ ಬೆನ್ನಲ್ಲೇ ಸಂಚೊಂದು ಬಹಿರಂಗಗೊಂಡಿದೆ.
ಬಂಧಿತ ಆರೋಪಿಗಳು ಮಂಗಳೂರಿನಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳವಾದ ಕದ್ರಿ ಮಂಜುನಾಥನ ದೇವಾಲಯವನ್ನು ಗುರಿಯಾಗಿಸಿದ್ದರೆಂಬ ವಿಚಾರ ತನಿಖೆ ವೇಳೆ ಹೊರಬಿದ್ದಿದೆ.
ಇದನ್ನೂ ಓದಿ: ರಾಮಚರಿತಮಾನಸ ಕೆಮಿಕಲ್ ಇದ್ದಂತೆ; ವಿವಾದಾತ್ಮಕ ಹೇಳಿಕೆ ನೀಡಿದ ಇಂಡಿಯಾ ಒಕ್ಕೂಟದ ಮತ್ತೊಬ್ಬ ನಾಯಕ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ. ಶಿವಮೊಗ್ಗದ ಟ್ರಯಲ್ ಬ್ಲ್ಯಾಸ್ಟ್, ಮಂಗಳೂರಿನ ಕುಕ್ಕರ್ ಸ್ಪೋಟ, ಗೋಡೆ ಬರಹದ ಮೂಲ ರೂವಾರಿಯಾಗಿದ್ದ. ಅರಾಫತ್ ಅಲಿ ಪ್ರಚೋದನೆಗೆ ಒಳಗಾಗಿದ್ದ ಶಾರಿಕ್ ಕುಕ್ಕರ್ ಬಾಂಬ್ ಸ್ಪೋಟಿಸಲು ಸಿದ್ದತೆ ನಡೆಸಿದ್ದ.
ಕುಕ್ಕರ್ ಬಾಂಬ್ ಸ್ಪೋಟಕ್ಕೂ ಮೊದಲು ಮಂಗಳೂರಿನಲ್ಲಿ ಉಗ್ರಕೃತ್ಯಕ್ಕೆ ಸಂಬಂಧಿಸಿದ ಗೋಡೆ ಬರಹ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಮಾಝ್ ಮುನೀರ್ ಹಾಗೂ ಯಾಸೀನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಇವರಿಗೂ ಅರಾಫತ್ ಪ್ರಚೋಧನೆ ನೀಡಿದ್ದ ಎಂದು ತಿಳಿದು ಬಂದಿದೆ. ನಂತರ ಶಿವಮೊಗ್ಗದಲ್ಲಿ ಸ್ಪೋಟಿಸುವ ಪ್ರಯೋಗ ನಡೆದಿತ್ತು. ಅಂತಿಮವಾಗಿ ಶಾರಿಕ್ ಕುಕ್ಕರ್ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದ ಎಂದು ಎನ್ಎಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.