More

    ನಿರೂಪಕರ ಬದಲು ಇಂಡಿಯಾ ಒಕ್ಕೂಟ ರಾಹುಲ್​ ಗಾಂಧಿಗೆ ಬಹಿಷ್ಕಾರ ಹಾಕಿದರೆ ಒಳಿತು: ಬಿಜೆಪಿ

    ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವನ್ನು ಸೋಲಿಸಬೇಕೆಂಬ ಗುರಿಯೊಂದಿಗೆ ಒಗ್ಗೂಡಿರುವ ವಿಪಕ್ಷಗಳು ಸಮನ್ವಯ ಸಮಿತಿಯೊಂದನ್ನು ರಚಿಸಿ ಸರಣಿ ಸಭೆಗಳನ್ನು ನಡೆಸುತ್ತಿದೆ. ಇತ್ತೀಚಿಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ 14 ಸುದ್ದಿ ನಿರೂಪಕರನ್ನು ಇಂಡಿಯಾ ಒಕ್ಕೂಟ ಬಹಿಷ್ಕರಿಸಿದೆ.

    ಇನ್ನೂ ಇಂಡಿಯಾ ಒಕ್ಕೂಟ 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸಿರುವುದನ್ನು ಖಂಡಿಸಿರುವ ಬಿಜೆಪಿ ಇದರಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಮೊದಲಿಗೆ ರಾಹುಲ್​ ಗಾಂಧಿ ಅವರನ್ನು ಬಹಿಷ್ಕರಿಸಿ ಅದರಿಂದ ನಿಮ್ಮ ಮೈತ್ರಿಕೂಟಕ್ಕೆ ಉಪಯೋಗವಾಗುತ್ತದೆ ಎಂದು ಟೀಕಿಸಿದೆ.

    sambit patra

    ಇದನ್ನೂ ಓದಿ: VIDEO| ಬೀದಿ ನಾಯಿಯನ್ನೂ ಬಿಡದ ಕಾಮಾಂಧ; ಕ್ಯಾಮೆರಾದಲ್ಲಿ ಸೆರೆಯಾಯ್ತು ಪೈಶಾಚಿಕ ಕೃತ್ಯ

    ಇಂಡಿಯಾ ಮೈತ್ರಿಕೂಟವು ಚುನಾವಣಾ ಆಯೋಗ, ನ್ಯಾಯಾಲಯವನ್ನು ಹೊರತುಪಡಿಸಿ ಉಳಿದ ಸಂಸ್ಥೆಗಳನ್ನು ಬಹಿಷ್ಕರಿಸುತ್ತಿದೆ. ಅವರೆಲ್ಲರೂ ತಮ್ಮ ಕೆಲಸಗಳನ್ನು ಚೆನ್ನಾಗಿಯೇ ಮಾಡುತ್ತಿದ್ದಾರೆ. ವಿಪಕ್ಷಗಳ ಒಕ್ಕೂಟವು ಮೊದಲಿಗೆ ರಾಹುಲ್​ ಗಾಂಧಿ ಅವರನ್ನು ಹೊರಗಿಟ್ಟರೆ ಅವರಿಗೆ ಲಾಭವಾಗುತ್ತದೆ ಎಂದು ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಹೇಳಿದ್ದಾರೆ.

    ಒಂದು ವೇಳೆ ಕಾಂಗ್ರೆಸ್​ ತನ್ನ ಸ್ವಂತ ಲಾಭಕ್ಕಾಗಿ ಯಾರನ್ನಾದರೂ ಬಹಿಷ್ಕರಿಸಬೇಕಾಗಿದ್ದರೆ ಅದು ರಾಹುಲ್​ ಗಾಂಧಿ ಹೊರತೂ ಬೇರ್ಯಾರು ಅಲ್ಲ. ನಿಮ್ಮ ನಾಯಕನಿಗೆ ಯಾವುದೇ ತರಹ ಶಕ್ತಿ ಇಲ್ಲ ಪ್ರೀತಿಯ ಬಗ್ಗೆ ಮಾತನಾಡುವ ಕಾಂಗ್ರೆಸ್​ ನಾಯಕರು ದ್ವೇಷದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಪ್ರತಿಪಕ್ಷಗಳ ಒಕ್ಕೂಟ ಪತ್ರಕರ್ತರನ್ನು ಬಹಿಷ್ಕರಿಸುವುದನ್ನು ತನ್ನ ಅಜೇಂಡಾದಲ್ಲಿ ಇರಿಸಿಕೊಂಡಿದೆ. ಈಗೆ ಆದಲ್ಲಿ ಮುಂದಿನ ದಿನಗಳಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಎಜಪಿ ವಕ್ತಾರ ಸಂಬಿತ್​ ಪಾತ್ರಾ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts