More

    ಅಮೆರಿಕದ ಎಫ್​ಡಿಎನಿಂದ ಬಂದಿತು ಸಂತಸದ ಸುದ್ದಿ: ಫಾರ್ಮಾ ಕಂಪನಿ ಷೇರು ಬೆಲೆ 2 ದಿನಗಳಲ್ಲಿಯೇ 40% ಏರಿಕೆ

    ಮುಂಬೈ: ಬಿರುಗಾಳಿ ರೀತಿಯ ಮಾರುಕಟ್ಟೆಯ ಉತ್ಕರ್ಷದ ನಡುವೆ, ಹೂಡಿಕೆದಾರರು ಔಷಧೀಯ ಕಂಪನಿ ಮೆಡಿಕಾಮೆನ್ ಬಯೋಟೆಕ್ ಲಿಮಿಟೆಡ್‌ನ ಷೇರುಗಳ ಮೇಲೆ ಮುಗಿಬಿದ್ದರು. ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ ಈ ಷೇರು ಶೇಕಡಾ 20 ಏರಿಕೆ ಕಂಡಿತು. ಈ ಮೂಲಕ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗಿ, 583 ರೂ.ಗೆ ತಲುಪಿತು.

    ಈ ಸ್ಟಾಕ್‌ ರಾಕೆಟ್​ನಂತೆ ವೇಗವಾಗಿ ಏರುತ್ತಿರುವುದು ಇದು ಸತತ ಎರಡನೇ ದಿನವಾಗಿದೆ. ಈ ಸ್ಟಾಕ್ ಕೇವಲ ಎರಡು ವಹಿವಾಟಿನ ದಿನಗಳಲ್ಲಿ ಅಂದಾಜು 40 ಪ್ರತಿಶತ ಹೆಚ್ಚಳವಾಗಿದೆ.

    ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (US FDA) ಏಪ್ರಿಲ್ 17 ರಿಂದ ಏಪ್ರಿಲ್ 26 ರವರೆಗೆ ಹರಿದ್ವಾರದಲ್ಲಿ ತನ್ನ ಆಂಕೊಲಾಜಿ ಸೂತ್ರೀಕರಣ ಸೌಲಭ್ಯವನ್ನು (oncology formulation facility) ಪರಿಶೀಲಿಸಿದೆ ಎಂದು ಏಪ್ರಿಲ್ 26 ರಂದು, ಮೆಡಿಕಾಮೆನ್ ಬಯೋಟೆಕ್ ಲಿಮಿಟೆಡ್ (Medicamen biotech Ltd) ಕಂಪನಿ ತಿಳಿಸಿದೆ.

    ಈ ತಪಾಸಣೆಯ ನಂತರ ಸಕಾರಾತ್ಮಕ ವರದಿ ಬರುವ ನಿರೀಕ್ಷೆಯಿದೆ. ಎಫ್​ಡಿಎಗೆ ಔಪಚಾರಿಕ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ಈ ಕುರಿತು ವರದಿಯನ್ನು ನಿರೀಕ್ಷಿಸಲಾಗಿದೆ. ಅಮೆರಿಕದ ಡಿಪಾರ್ಟ್​ಮೆಂಟ್ ಆಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್​ನ ಸಂಸ್ಥೆಯಾಗಿದೆ ಎಫ್​ಡಿಎ.

    ಸ್ಮಾಲ್‌ಕ್ಯಾಪ್, ಮಿಡ್‌ಕ್ಯಾಪ್ ಷೇರುಗಳಿಗೆ ಸಂಬಂಧಿಸಿದಂತೆ ಸೆಬಿ ನೀಡಿದ ಎಚ್ಚರಿಕೆಯಿಂದಾಗಿ ಮೆಡಿಕಾಮೆನ್ ಬಯೋಟೆಕ್ ಲಿಮಿಟೆಡ್ ಷೇರುಗಳಲ್ಲಿ ಈ ಹಿಂದೆ ದೊಡ್ಡ ಕುಸಿತ ಕಂಡುಬಂದಿತ್ತು. ಮಾರಾಟದ ಕಾರಣ, ಷೇರುಗಳ ಬೆಲೆ ಮಾರ್ಚ್ 24 ರಂದು 52 ವಾರಗಳ ಕನಿಷ್ಠ ಬೆಲೆಯಾದ 367 ರೂ.ಗೆ ಕುಸಿದಿತ್ತು. ಇದರ ನಂತರ, ಇದು ಇಲ್ಲಿಯವರೆಗೆ ಅಂದಾಜು 58 ಪ್ರತಿಶತದಷ್ಟು ಜಿಗಿದಿದೆ. ಚೇತರಿಕೆಯ ಹೊರತಾಗಿಯೂ, ಈ ಷೇರುಗಳ ಬೆಲೆ ಇನ್ನೂ ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾದ 903 ರೂ. ದರಕ್ಕಿಂತ ಶೇಕಡಾ 35 ರಷ್ಟು ಕಡಿಮೆ ಇದೆ.

    ಮೆಡಿಕಾಮೆನ್ ಬಯೋಟೆಕ್ ಲಿಮಿಟೆಡ್‌ನಲ್ಲಿ ಶೇಕಡಾ 43.21 ಪಾಲನ್ನು ಪ್ರವರ್ತಕರು ಹೊಂದಿದ್ದಾರೆ. ಇದೇ ಸಮಯದಲ್ಲಿ, ಸಾರ್ವಜನಿಕ ಷೇರುದಾರರು ಕಂಪನಿಯಲ್ಲಿ ಶೇಕಡಾ 56.79 ಪಾಲನ್ನು ಹೊಂದಿದ್ದಾರೆ. ಪ್ರವರ್ತಕ ಶಿವಾಲಿಕ್ ರಸಾಯನ್ ಲಿಮಿಟೆಡ್ 54,66,095 ಷೇರುಗಳನ್ನು ಹೊಂದಿದೆ.

    ಈಜಿಪ್ಟಿನ ಪಿರಮಿಡ್​ ಮುಂದೆ ಕುಸ್ತಿಪಟುವನ್ನು ಮದುವೆಯಾದ ಟೆಕ್ ಬಿಲಿಯನೇರ್ ಅಂಕುರ್ ಜೈನ್

    26 ಕೋಟಿ ಪ್ರಯಾಣಿಕರಿಗೆ ಆತಿಥ್ಯ ಸಾಮರ್ಥ್ಯ: ದುಬೈನಲ್ಲಿ ತಲೆಎತ್ತಲಿರುವ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ ವೈಶಿಷ್ಟ್ಯಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts