More

  ಉಗ್ರರೊಂದಿಗೆ ಮುಂದುವರೆದ ಗುಂಡಿನ ಕಾಳಗ; ಮತ್ತೊಬ್ಬ ಯೋಧ ಹುತಾತ್ಮ

  ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರ ನಡುವಿನ ಗುಂಡಿನ ಕಾಳಗ ಮುಂದುವರೆದಿದ್ದು, ಶುಕ್ರವಾರ ಭಾರತೀಯ ಸೇನೆಯ ಮತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ.

  ಜಮ್ಮು-ಕಾಶ್ಮೀರದ ಅನಂತ್​ ನಾಗ್​ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಯೋಧ ಕಣ್ಮರೆಯಾಗಿದ್ದರು. ಬುಧವಾರ ಭದ್ರತಾಪಡೆಗಳು ಹಾಗೂ ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ಸೇನೆಯ ಕರ್ನಲ್​, ಮೇಜರ್​, ಪೊಲೀಸ್​ ವಿಶೇಷಾಧಿಕಾರಿ, ಅಧಿಕಾರಿ ಹಾಗೂ ಯೋಧ ಹುತಾತ್ಮರಾಗಿದ್ದರು.

  ಇದನ್ನೂ ಓದಿ: ಬಿಜೆಪಿ ವತಿಯಿಂದ ಕಾವೇರಿ ಜಲಾನಯನ ತಾಲೂಕುಗಳಲ್ಲಿ ಕಾವೇರಿ ರಕ್ಷಣಾ ಯಾತ್ರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

  ಬುಧವಾರ ಸಂಜೆ ಆರಂಭವಾದ ಎನ್‌ಕೌಂಟರ್ ಮೂರನೇ ದಿನಕ್ಕೆ ( ಶುಕ್ರವಾರ ) ಕಾಲಿಟ್ಟಿದೆ. ಅನಂತ್‌ನಾಗ್‌ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರ ಸ್ಥಳವನ್ನು ಗುರುತಿಸಲು ಸೇನೆಯು ಇದೀಗ ಡ್ರೋನ್‌ಗಳನ್ನು ಬಳಸುತ್ತಿದೆ.

  ಈ ಕುರಿತು ಪ್ರತಿಕ್ರಿಯಿಸಿರುವ ಭದ್ರತಾ ಪಡೆಯ ಅಧಿಕಾರಿಗಳು ಅನಂತನಾಗ್ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಯೋಧ ಪ್ರಾಣ ಕಳೆದುಕೊಂಡಿದ್ದಾರೆ. ಅವರು ನಿನ್ನೆಯಿಂದ ನಾಪತ್ತೆಯಾಗಿದ್ದರು. ಅನಂತನಾಗ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಜಂಟಿ ಭದ್ರತಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರು ತಪ್ಪಿಸಿಕೊಂಡಿದ್ದರು. ಪಡೆಗಳು ಡ್ರೋನ್‌ಗಳನ್ನು ಬಳಸಿಕೊಂಡು ಶಂಕಿತ ಭಯೋತ್ಪಾದಕರ ಅಡಗುತಾಣಗಳ ಮೇಲೆ ಗ್ರೆನೇಡ್‌ಗಳನ್ನು ಹಾಕುತ್ತಿವೆ ಎಂದು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts