ಸ್ವಚ್ಛ ಭಾರತಕ್ಕೆ ವಿಶ್ವ ಬ್ಯಾಂಕ್ ಮೆಚ್ಚುಗೆ

World Bank
Published on

ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನವು ಶೌಚಗೃಹವನ್ನು ಸುರಕ್ಷಿತವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಯಲು ಬಹಿರ್ದೆಸೆ ಕಡಿಮೆಗೊಳಿಸಿದೆ ಎಂದು ವಿಶ್ವ ಬ್ಯಾಂಕ್ ಶ್ಲಾಘಿಸಿದೆ.

ಈಗಾಗಲೇ ಶೌಚಗೃಹ ಹೊಂದಿರುವ ಮನೆಗಳ ಜನರು ಬಯಲು ಬಹಿರ್ದೆಸೆಗೆ ಹೋಗುವ ಪ್ರಮಾಣ ಕಡಿಮೆಯಾಗಿದೆ. ಆದರೆ, ಮನೆಗಳಲ್ಲಿ ಶೌಚಗೃಹ ಹೊಂದಿರದ ಕುಟುಂಬಗಳಲ್ಲಿ ಈ ಅಭಿಯಾನ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ವಿಶ್ವಬ್ಯಾಂಕ್​ನ ಸಂಶೋಧನಾ ವರದಿಯೊಂದು ತಿಳಿಸಿದೆ.

ನೈರ್ಮಲ್ಯ ಸಾಧನೆಯ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವದ ಕಾರ್ಯಕ್ರಮವಾದ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಪ್ರದೇಶದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ತೀಕ್ಷ್ಣ ಮೌಲ್ಯಮಾಪನ ಮಾಡಿರುವ ಬ್ಯಾಂಕ್, ಬಹಳಷ್ಟು ಕುಟುಂಬಗಳು ಶೌಚಗೃಹಕ್ಕೆ ಇನ್ನಷ್ಟೆ ಹೊಂದಿಕೊಳ್ಳಬೇಕಿದೆ ಹಾಗೂ ಇನ್ನೂ ಅನೇಕ ಮನೆಗಳಲ್ಲಿ ಶೌಚಗೃಹಗಳ ನಿರ್ಮಾಣ ಹಂತದಲ್ಲಿವೆ ಎಂದು ತಿಳಿಸಿದೆ. ಸ್ವಚ್ಛ ಭಾರತ ಅಭಿಯಾನ ವಯಸ್ಕರಲ್ಲಿ ಕೈತೊಳೆಯುವ ಮಹತ್ವದ ಅರಿವು ಮೂಡಿಸುವಲ್ಲಿಯೂ ತನ್ನದೇ ಆದ ಪಾತ್ರ ವಹಿಸಿರುವುದನ್ನು ವರದಿ ಉಲ್ಲೇಖಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net