More

    #TTDForSale ಟ್ವಿಟರ್​ನಲ್ಲಿ ಟ್ರೆಂಡಿಂಗ್​: ಅನುಪಯುಕ್ತ ಆಸ್ತಿ ಮಾರಾಟಕ್ಕೆ ಟಿಟಿಡಿ ತೀರ್ಮಾನ

    ತಿರುಪತಿ: ದೇಶದ ಅತಿಶ್ರೀಮಂತ ದೇವಸ್ಥಾನವಾಗಿರುವ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ 100 ಕೋಟಿ ರೂಪಾಯಿ ಸಂಗ್ರಹಿಸುವುದಕ್ಕಾಗಿ ಕಾಟೇಜ್ ಡೊನೇಷನ್ ಸ್ಕೀಮ್​ ಮೂಲಕ ನಿಧಿ ಸಂಗ್ರಹಿಸುವುದರ ಜತೆಗೆ ತನ್ನ ಸ್ವಾಧೀನ ಇರುವ ಅನುಪಯುಕ್ತ ಆಸ್ತಿಗಳನ್ನು ಮಾರಾಟ ಮಾಡಿ ತೀರ್ಮಾನ ತೆಗೆದುಕೊಂಡಿದೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಶನಿವಾರ ಸಂಜೆ #TTDForSale ಎಂಬ ಹ್ಯಾಷ್ ಟ್ಯಾಗ್​ನಲ್ಲಿ ಟ್ರೆಂಡ್ ಆಗಿದೆ.

    ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅಂದಿನಿಂದ ಟಿಟಿಡಿ ವಿಚಾರವಾಗಿ ಅವರ ಸರ್ಕಾರದ ನಿರ್ಧಾರಗಳು ಸಕಾರಣವಾಗಿಯೇ ಟೀಕೆಗೊಳಗಾಗುತ್ತಿವೆ. ಈಗ ಟಿಟಿಡಿಯ ಆಸ್ತಿ ಮಾರಾಟದ ವಿಚಾರ ಟೀಕೆಗೆ ಒಳಗಾಗಿದೆ. ಟಿಟಿಡಿ ಮಂಡಳಿ ಏಪ್ರಿಲ್ 30 ರಂದು ನಡೆಸಿದ ಸಭೆಯಲ್ಲಿ ಈ ತೀರ್ಮಾನವಾಗಿದ್ದು, ಇದಕ್ಕೆ ಸಂಬಂಧಿಸಿ ಅನುಪಯುಕ್ತ ಎಂದು ಮಂಡಳಿ ಪರಿಗಣಿಸಿರುವ 23 ಆಸ್ತಿಗಳನ್ನು ಗುರುತಿಸಿ ನಡಾವಳಿಯಲ್ಲಿ ಉಲ್ಲೇಖಿಸಿದೆ. ಈ ಪ್ರೊಸೀಡಿಂಗ್ಸ್ ನಡಾವಳಿ ಪತ್ರದ ಕೊನೆಯಲ್ಲಿ ಎಸ್ಟೇಟ್ ಆಫೀಸರ್ ವಿ.ದೇವೇಂದ್ರ ರೆಡ್ಡಿ ಹೆಸರಿದೆ.

    ಇದನ್ನೂ ಓದಿ: ತಿರುಪತಿ ದೇವಾಲಯಕ್ಕೆ 400 ಕೋಟಿ ರೂ. ನಷ್ಟ!

    ಮಂಡಳಿ ಗುರುತಿಸಿರುವ ಅನುಪಯುಕ್ತ ಆಸ್ತಿ ಮಾರಾಟದ ಪ್ರಸ್ತಾವನೆ ತಿರುಮಲದಲ್ಲಿ ಫೆಬ್ರವರಿ 29ರಂದು ನಡೆದ ಬಜೆಟ್ ಮೀಟಿಂಗ್​ನಲ್ಲೇ ಮಂಡಿಸಲ್ಪಟ್ಟಿದೆ. ಟಿಟಿಡಿ ದಾಖಲೆಗಳ ಪ್ರಕಾರ 2015ರ ಜುಲೈ 28ರಂದೇ ಮಂಡಳಿಯ ಅಂದಿನ ಸಮಿತಿ ಈ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿ ಉಪಸಮಿತಿ ರಚಿಸಿತ್ತು. ಮಾರಾಟಕ್ಕೆ ಸಂಬಂಧಿಸಿದ ಸಾಧಕ ಬಾಧಕ ತೀರ್ಮಾನಿಸಿ ನಿರ್ಣಯ ತೆಗೆದುಕೊಳ್ಳಲು ಅನುವಾಗುವಂತೆ ವರದಿ ಸಲ್ಲಿಸಲು ಸೂಚಿಸಿತ್ತು.

    ಈ ಉಪಸಮಿತಿಯ ವರದಿಯಲ್ಲಿ ದೇಶಾದ್ಯಂತ ಟಿಟಿಡಿ ಸ್ವಾಧೀನ ಇರುವ ಗೃಹ ಸೈಟ್​ಗಳು, ಕೃಷಿ ಜಮೀನು, ಕಟ್ಟಡಗಳು ಸೇರಿ 50ಕ್ಕೂ ಹೆಚ್ಚು ಅನುಪಯುಕ್ತ ಆಸ್ತಿಗಳನ್ನು ಗುರುತಿಸಿತ್ತು. ಸಾರ್ವಜನಿಕ ಹರಾಜು ಹಾಕಿ ವಿಲೇವಾರಿ ಮಾಡಬಹುದು ಎಂದೂ ಶಿಫಾರಸು ಮಾಡಿತ್ತು. ಮುಂದೆ 2018ರ ಮಾರ್ಚ್ 28ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಆಸ್ತಿಗಳನ್ನು ವರ್ಗೀಕರಣ ಮಾಡಿ ವಿಲೇವಾರಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದರಂತೆ ನಾಲ್ಕು ಕೆಟಗರಿಗಳನ್ನು ಮಾಡಲಾಗಿದ್ದು, ಕೆಲವನ್ನು ಆಯಾ ಜಿಲ್ಲಾಧಿಕಾರಿಗಳ ಮೂಲಕ ಹರಾಜು ಹಾಕಿಸಲು ನಿರ್ಧರಿಸಿತ್ತು ಎಂದು ಕೆಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

    ಇದನ್ನೂ ಓದಿ: ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ

    ಮೂಲಗಳ ಪ್ರಕಾರ, ತಮಿಳುನಾಡಿನ ಕೊಯಮತ್ತೂರು, ತಿರುವಣ್ಣಾಮಲೈ, ವೆಲ್ಲೂರು ಜಿಲ್ಲೆಗಳಲ್ಲಿ ಇರುವ ಮೂರು ಆಸ್ತಿಗಳಿಗೆ ಕಾನೂನು ಅಡಚಣೆಗಳಿರುವ ಕಾರಣ ಇವು ಮೊದಲನೇ ಕೆಟಗರಿಯಲ್ಲಿದ್ದರೂ ಮಾರಾಟ ಮಾಡಲಾಗದು. ಇನ್ನುಳಿದಂತೆ 17 ಆಸ್ತಿಗಳು ಆಂಧ್ರಪ್ರದೇಶ ವಿವಿಧ ಗ್ರಾಮೀಣ ಭಾಗಗಳಲ್ಲಿ ಇವೆ. ಇವುಗಳನ್ನು ಆಯಾ ಜಿಲ್ಲಾಧಿಕಾರಿಗಳ ಮೂಲಕ ಹರಾಜು ಹಾಕಿಸಬಹುದು. ಇನ್ನುಳಿದ 9 ಆಸ್ತಿಗಳು ಆಂಧ್ರಪ್ರದೇಸ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಒಡಿಶಾಗಳಲ್ಲಿವೆ. ಇವುಗಳನ್ನು ವಿಶಾಖಪಟ್ಟಣಂನ ಎಂಎಸ್​ಟಿಸಿ ಲಿಮಿಟೆಡ್ ಮೂಲಕ ಹರಾಜು ಹಾಕಲು ಮಂಡಳಿ ತೀರ್ಮಾನಿಸಿತ್ತು.

    ಇದನ್ನೂ ಓದಿ: ಕ್ವಾರಂಟೈನ್​ನಲ್ಲಿದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋದವನನ್ನು ಹುಡುಕುತ್ತಿದ್ದಾರೆ ಪೊಲೀಸರು!

    ಸದ್ಯ ಮಾರಾಟಕ್ಕೆ ಗುರುತಿಸಿರುವ 23 ಇತರೆ ಆಸ್ತಿಗಳನ್ನು ಟಿಟಿಡಿಯೇ ತನ್ನದೇ ತಂಡಗಳ ಮೂಲಕ ಹರಾಜು ಹಾಕಲು ತೀರ್ಮಾನಿಸಿರುವಂಥದ್ದು. ಇದನ್ನು ಟಿಟಿಡಿಯ ಎಸ್ಟೇಟ್​ ಆಫೀಸರ್ ಮಾರ್ಗದರ್ಶನದಲ್ಲಿ ಮಾಡಲು ಮಂಡಳಿ ತೀರ್ಮಾನಿಸಿದೆ. ಈ ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನಿಯಮಗಳನ್ನು ಪಾಲಿಸಲು ಮಂಡಳಿ ಪ್ರಯತ್ನಿಸಿದೆ ಎಂದು ಟಿಟಿಡಿ ಉನ್ನತ ಮೂಲಗಳು ಸ್ಪಷ್ಟೀಕರಣ ನೀಡವೆಯಾದರೂ, ತೀರ್ಮಾನ ಸಾರ್ವತ್ರಿಕವಾಗಿ ಟೀಕೆಗೆ ಒಳಗಾಗಿದೆ. (ಏಜೆನ್ಸೀಸ್)

    PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts