PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

Li jiaqi Lipstick king
Published on

ಬೀಜಿಂಗ್​: ಲಿಪ್​ಸ್ಟಿಕ್ ಅಂದರೆ ಸಾಕು ಬಹುತೇಕ ಹೆಣ್ಮಕ್ಕಳ ಕಿವಿ ನೆಟ್ಟಗಾಗಿ, ಕಂಗಳು ಚುರುಕಾಗಿ, ಅದರಗಳೂ ಕಾತರದಿಂದ ಕನ್ನಡಿ ಕಡೆಗೆ ನೋಡಲಾರಂಭಿಸುತ್ತವೆ! ಅಂಥದ್ರಲ್ಲಿ ಚಾಕೊಲೇಟ್ ಬಾಯ್ ಅಂತಹ ಯುವಕನೊಬ್ಬ ಹೆಣ್ಮಕ್ಕಳ ಮನಸ್ಸಿಗೆ ಹಿಡಿಸುವಂತೆ ಲಿಪ್​ಸ್ಟಿಕ್ ಮಾರಾಟಕ್ಕೆ ಇಳಿದ್ರೆ ಕೇಳಬೇಕಾ ಮತ್ತೆ! ಈತ ದಿನವೊಂದರಲ್ಲಿ ಲಿಪ್​ಸ್ಟಿಕ್ ವಹಿವಾಟು ಬರೋಬ್ಬರಿ 1,100 ಕೋಟಿ ರೂಪಾಯಿಗೂ ಅಧಿಕ!

ಚೀನಾದಲ್ಲಿ ಈತ ಲಿಪ್​ಸ್ಟಿಕ್ ಕಿಂಗ್ ಎಂದೇ ಜನಪ್ರಿಯ. ಹೆಸರು ಲಿ ಜಿಯಾಕಿ. ವಯಸ್ಸು 27 ವರ್ಷ. ಚೀನಾದ ಅತ್ಯುತ್ತಮ ಲಿಪ್​ಸ್ಟಿಕ್ ಸೇಲ್ಸ್​ಮ್ಯಾನ್. ಚೀನಾದ ಟಿಕ್​ಟಾಕ್​ನಲ್ಲಿ ಈತನ ಬೆಂಬಲಿಗರ ಸಂಖ್ಯೆ 4 ಕೋಟಿ!. ಚೀನಾದಲ್ಲಿ ಜನಪ್ರಿಯವಾಗಿರುವ 11.11 ಅಥವಾ ಸಿಂಗಲ್ಸ್​ ಡೇ ಎಂಬ ವಾರ್ಷಿಕ ಷಾಪಿಂಗ್ ಫೆಸ್ಟಿವಲ್​ನಲ್ಲಿ ಒಂದೇ ದಿನ 1,102 ಕೋಟಿ ರೂಪಾಯಿ ಮೌಲ್ಯದ ಲಿಪ್​ಸ್ಟಿಕ್ ಮಾರಾಟ ಮಾಡಿದ ದಾಖಲೆ ಈತನದ್ದು. ಟೋಬೋ ಎಂಬ ಸಾಮಾಜಿಕ ಜಾಲತಾಣದಲ್ಲಿ ಲಿಪ್​ಸ್ಟಿಕ್​ ಮಾರಾಟದ ನೇರ ಪ್ರಸಾರದಲ್ಲಿ ಈತನೇ ಮಾಡೆಲ್​. ಈತ ಷೋ ನೋಡುವುದಕ್ಕೆ 3.6 ಕೋಟಿ ವೀಕ್ಷಕರು ಲಾಗಿನ್ ಆಗ್ತಾರೆ.

2019ರಲ್ಲಿ ಲಿ ಜಿಯಾಕಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದು ಕೂಡ ಲಿಪ್​ಸ್ಟಿಕ್ ಮೂಲಕವೇ. ಕೇವಲ 30 ಸೆಕೆಂಡ್​ನಲ್ಲಿ ನಾಲ್ವರು ಮಾಡೆಲ್​ಗಳ ಲಿಪ್​ಸ್ಟಿಕ್​ ಹಚ್ಚುವ ಮೂಲಕ ಈ ದಾಖಲೆ ನಿರ್ಮಿಸಿದ್ದ. ಇದೇ ರೀತಿ ಏಳು ಗಂಟೆಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈತ 380 ವಿವಿಧ ಲಿಪ್​ಸ್ಟಿಕ್​ ಸ್ವತಃ ಬಳಸಿ ತೋರಿಸಿ ದಾಖಲೆ ನಿರ್ಮಿಸಿದ್ದ. ಅಷ್ಟೊಂದು ಲಿಪ್​ಸ್ಟಿಕ್​ ಅನ್ನು ತನ್ನ ತುಟಿಗೆ ಮೆತ್ತಿಕೊಂಡು ಪ್ರದರ್ಶನ ನೀಡುವುದು ತ್ರಾಸದ ಕೆಲಸ. ತುಟಿಯ ಆರೋಗ್ಯ ಹಾಳಾಗಬಹುದು. ಆದರೆ ತನಗೆ ಹಾಗಾಗಿಲ್ಲ. ತನ್ನದು ಉಕ್ಕಿನ ತುಟಿ ಎಂದೂ ಆತ ಹೇಳಿಕೊಳ್ಳುತ್ತಾನೆ!

2018ರಲ್ಲಿ ನಡೆದ ಸಿಂಗಲ್ಸ್​ ಶಾಪಿಂಗ್ ಫೆಸ್ಟಿವಲ್​​ನಲ್ಲಿ ಅಲಿಬಾಬಾ ಗ್ರೂಪ್​ನ ಸಹ ಸಂಸ್ಥಾಪಕ ಜಾಕ್​ ಮಾ ಕೂಡ ಲಿ ಜಿಯಾಕಿ ಜತೆಗೆ ಲಿಪ್​ಸ್ಟಿಕ್ ಮಾರಾಟಕ್ಕೆ ಕುಳಿತಿದ್ದರು. ಆ ಎರಡು ಗಂಟೆ ಹೊತ್ತಿನ ಷೋ ನಲ್ಲಿ ಲಿ ಜಿಯಾಕಿ 1,000 ಲಿಪ್​ಸ್ಟಿಕ್​ ಮಾರಾಟ ಮಾಡಿದರೆ ಜಾಕ್​ ಮಾ ಮಾರಾಟ ಮಾಡಿದ್ದು ಕೇವಲ 10!. ಅಂದ ಹಾಗೆ, ಲಿ ಜಿಯಾಕಿ ತನ್ನ ಷೋದಲ್ಲಿ ಪದೇ ಪದೇ ಹೇಳುವ ಮಾತು ಹೆಣ್ಮಕ್ಕಳಿಗೂ ಪ್ರಿಯವಾದುದೇ - oh my god~ BUY! BUY! BUY!.. (ಏಜೆನ್ಸೀಸ್)

Li jiaqi Lipstick king 8
Li jiaqi Lipstick king 9
Li jiaqi Lipstick king 10
Li jiaqi Lipstick king and Jack ma

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net