ಕುಡಿದ ನಶೆಯಲ್ಲಿ ಪತ್ನಿಗೆ ಚುಂಬನ; ಮಹಿಳೆ ಮಾಡಿದ್ದನ್ನು ಗಂಡ ಈ ಜನ್ಮದಲ್ಲಿ ಮರೆಯಲಾರ!

kiss
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಅದನ್ನೂ ಮೀರಿ ಕೆಲವೊಮ್ಮೆ ನಶೆ ಇತರ ದುಶ್ಪರಿಣಾಮಗಳನ್ನು ಬೀರುತ್ತದೆ. ಇದೇ ರೀತಿಯ ಆಘಾತಕಾರಿ ಘಟನೆ ಮುನ್ನೆಲೆಗೆ ಬಂದಿದೆ. ಒಬ್ಬ ವ್ಯಕ್ತಿ ಮದ್ಯಪಾನ ಮಾಡಿದ್ದಾರೆ. ಈತ ನಶೆಯಲ್ಲಿ ತನ್ನ ಹೆಂಡತಿಯನ್ನು ಚುಂಬಿಸಲು ಹೋಗಿದ್ದಾನೆ. ಆದರೆ ಈತ, ತನ್ನ ಹೆಂಡತಿಗೆ ಕಿಸ್​ ಕೊಟ್ಟಿದ್ದೇ ಘೋರ ದುರಂತಕ್ಕೆ ಕಾರಣವಾಗಿದೆ. ಈ ಪತಿರಾಯ ತನ್ನ ಜನ್ಮದಲ್ಲಿ ಈ ಘಟನೆಯನ್ನು ಮರೆಯಲಾರ. ಅಂತಹ ಭಯಾನಕ ಘಟನೆ ಇದು...

ಈ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ. ಈ ದಂಪತಿ, ಮದ್ಯಪಾನ ಮಾಡುತ್ತಿದ್ದರು. ಇಬ್ಬರೂ ರೋಮ್ಯಾನ್ಸ್​ ಮಾಡಲು ಹತ್ತಿರವಾಗಿದ್ದಾರೆ. ಈ ಸಂದರ್ಭ ಪತಿ, ತನ್ನ ಪತ್ನಿಗೆ ಚುಂಬಿಸಿದ್ದಾನೆ.

ಈ ಸಂದರ್ಭದಲ್ಲಿ ಪತ್ನಿ, ಗಂಡನ ನಾಲಗೆ ಕಚ್ಚಿದ್ದು ಇನ್ನೇನು ತುಂಡೇ ಆಗಿ ಬಿಡುತ್ತದೋ ಏನೋ ಎನ್ನುವ ಹಂತಕ್ಕೆ ಪರಿಸ್ಥಿತಿ ಹೋಗಿತ್ತು. ಪತಿಯ ನಾಲಿಗೆಯಿಂದ ಧಾರಾಕಾರವಾಗಿ ರಕ್ತ ಹರಿಯಲು ಪ್ರಾರಂಭಿಸಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಅಸಲಿಗೆ ಆದದ್ದೇನು?

ಈ ವ್ಯಕ್ತಿಯು ತನ್ನ ಹೆಂಡತಿಯನ್ನು ಚುಂಬಿಸಲು ಹೋದಾಗ, ಅವನು ಕುಡಿದಿದ್ದರಿಂದ ಆಕೆ ವಿರೋಧಿಸಿದ್ದಳು. ಆದರೆ ಪತಿ ಏನನ್ನೂ ಕೇಳದೇ, ಮುಂದುರೆದಿದ್ದಾನೆ. ಆತ ಆಕೆಯನ್ನು ಬಲವಂತವಾಗಿ ಚುಂಬಿಸಿದ್ದಾನೆ. ಆಗ ಹೆಂಡತಿ ಎಲ್ಲಿಂದ ಪಿತ್ತ ನೆತ್ತಿಗೇರಿತ್ತೋ, ಆಕೆ ಪತಿಯ ನಾಲಿಗೆಯನ್ನು ರಕ್ತ ಹರಿಯುವವರೆಗೂ ಕಚ್ಚಿದ್ದಾಳೆ. ಮದ್ಯಪಾನ ಅಪಾಯಕಾರಿ ಎನ್ನುವುದಕ್ಕೆ ಈ ಕಾರಣವನ್ನೂ ಇನ್ನುಮುಂದೆ ಸೇರಿಸಬಹುದೋ ಏನೋ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net