More

    ಪ್ರೀತಿಸಿ ಕೈಕೊಟ್ಟ ಯುವಕ: ಪಾಲಕರಿಗೆ ತಿಳಿಸದೇ 1 ವಾರ ನೋವಿನಿಂದಲೇ ನರಳಿ ಪ್ರಾಣ ಬಿಟ್ಟ ಯುವತಿ

    ಮೈಸೂರು: ತನ್ನ ಪ್ರಿಯಕರ ಬೇರೊಂದು ಹುಡುಗಿಯ ಜತೆ ಸುತ್ತಾಡಿದ್ದನ್ನು ನೋಡಿ ಮನನೊಂದು, ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾಳೆ.

    ನಿಸರ್ಗ(20) ಮೃತ ಯುವತಿ. ಪ್ರಿಯಕರನಿಂದ ಮೋಸ ಹೋಗಿ, ಅದೇ ದುಃಖದಲ್ಲಿ ಜು.9ರಂದು ಇಲಿ ಪಾಷಾಣ ಸೇವಿಸಿ ನಿಸರ್ಗ, ಪಾಲಕರಿಗೂ ತಿಳಿಸದೇ ಒಂದು ವಾರ ನೋವಿನಿಂದಲೇ ನರಳಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಘಟನೆ ಕೆ.ಆರ್. ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಇದನ್ನೂ ಓದಿ: ಇತ್ತ ಹಣವೂ ಇಲ್ಲ, ಪ್ರೀತಿಯೂ ಇಲ್ಲ ಎಂದು ಹತಾಶೆಗೊಂಡು ಪ್ರಿಯಕರನಿಗೆ ಚಾಕು ಇರಿದ ಪ್ರಿಯತಮೆ!

    ಜುಲೈ 9 ರಂದು ಅನಾರೋಗ್ಯ

    ಜುಲೈ 20 ರಂದು ನಿಸರ್ಗ ಪಾಲಕರು ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ನಿಸರ್ಗ ಪಾಲಕರಿಗೆ ಇಬ್ಬರು ಮಕ್ಕಳಿದ್ದು ನಿಸರ್ಗ ಮೊದಲನೆಯವಳು. ಈಕೆ ಕೆ. ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಜುಲೈ 9 ರಂದು ನಿಸರ್ಗಳಿಗೆ ವಾಂತಿ ಬೇದಿ ಶುರುವಾಯಿತು. ಪಾಲಕರು ಆಕೆಯನ್ನು ಕೆ.ಆರ್. ನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದರು. ಆದರೆ, ಗುಣವಾಗದ ಹಿನ್ನೆಲೆಯಲ್ಲಿ ಜುಲೈ 11ರಂದು ಮತ್ತೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದಿದ್ದರು. ಜುಲೈ 12ರಂದು ನಿಸರ್ಗಗೆ ಹೊಟ್ಟೆ ನೋವು ಜಾಸ್ತಿಯಾಗಿದ್ದರಿಂದ ಮತ್ತೆ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

    ವಿಷ ಸೇವನೆ

    ಜುಲೈ 13ರಂದು ಇದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಜುಲೈ 14ರಂದು ದಾಖಲಿಸಲಾಯಿತು. ಪರೀಕ್ಷೆ ಮಾಡಿದ ವೈದ್ಯರು ಇಲಿಪಾಷಾಣ ಕುಡಿದಿರಬಹುದು ಎಂದು ತಿಳಿಸಿದರು. ಬಳಿಕ ಆಘಾತಗೊಂಡ ಪಾಲಕರು ನಿಸರ್ಗಳನ್ನು ವಿಚಾರ ಮಾಡಿದಾಗ ವಿಷ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.

    ನನಗೆ ಮೋಸ ಮಾಡಿದ

    ನಾನು ತಪ್ಪು ಮಾಡಿದೆ ಕಳೆದ 4 ವರ್ಷದಿಂದ ಸುಹಾಸ್ ರೆಡ್ಡಿ ಎಂಬುವನನ್ನು ಪ್ರೀತಿಸುತ್ತಿದ್ದೆ. ಆತನೂ ಕೂಡ ನನ್ನನ್ನು ಪ್ರೀತಿ ಮಾಡುತ್ತಿದ್ದ ಮತ್ತು ಚನ್ನಾಗಿಯೇ ಇದ್ದ. ನಾವಿಬ್ಬರೂ ಅನೇಕ ಕಡೆ ಸುತ್ತಾಡಿದೆವು. ಆತನನ್ನು ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುತ್ತಿದ್ದೆ. ಆದರೆ. ಆತ ಅನನ್ಯ ಎಂಬ ಮತ್ತೊಂದು ಹುಡುಗಿಯನ್ನು ಪ್ರೀತಿಸಿ ನನಗೆ ಮೋಸ ಮಾಡಿದ. ಅಲ್ಲದೆ, ನನ್ನ ಮುಂದೆಯೇ ಸುತ್ತಾಡಿ ನನಗೆ ಮಾನಸಿಕವಾಗಿ ಹಿಂಸೆ ನೀಡಿ ನೀನು ಇನ್ನೂ ಏಕೆ ಬದುಕಿದಿಯಾ ಸಾಯಿ ಎಂದು ಪದೇ ಪದೇ ಹೇಳುತ್ತಿದ್ದರು.

    ಸಾಯುವಂತೆ ಪ್ರೇರಣೆ

    ಅವರಿಬ್ಬರ ವರ್ತನೆಯಿಂದ ಮನನೊಂದು ಪ್ರೀತಿಯ ವಿಚಾರವನ್ನು ಅನನ್ಯಳ ತಂದೆ ಗೋಪಾಲಕೃಷ್ಣ ಅವರಿಗೂ ತಿಳಿಸಿದೆ. ಆದರೆ, ಅವರು ನನಗೆ ಬಾಯಿಗೆ ಬಂದಂತೆ ನಿಂದಿಸಿ, ಸಾಯಿ ಎಂದರು. ಬಳಿಕ ಸುಹಾಸ್‌ ರೆಡ್ಡಿ ತಂದೆ ಬಾಬುರೆಡ್ಡಿ, ತಾಯಿ ರೂಪ ಅವರಿಗೂ ನಮ್ಮ ಪ್ರೀತಿಯ ವಿಚಾರವನ್ನು ತಿಳಿಸಿದೆ. ಅವರು ಸಹ ನನಗೆ ಬಾಯಿಗೆ ಬಂದಂತೆ ಬೈಯ್ದು ಅವಮಾನ ಮಾಡಿದರು. ಯಾರೂ ಕೂಡ ಸಹ ನನ್ನ ಸಹಾಯಕ್ಕೆ ಬರಲಿಲ್ಲ, ಎಲ್ಲರೂ ನನ್ನನ್ನು ನಿಂದಿಸಿ ಪದೇಪದೆ ಸಾಯಿ ಎಂದು ಪ್ರೇರಣೆ ನೀಡಿದ್ದರಿಂದ ನಾನು ಮನೆಯಲ್ಲಿದ್ದ ಇಲಿಪಾಷಾಣವನ್ನು ಸೇವಿಸಿದೆ ಮತ್ತು ಭಯದಿಂದ ಮನೆಯಲ್ಲಿ ಈ ವಿಚಾರವನ್ನು ಯಾರಿಗೂ ತಿಳಸಲಿಲ್ಲ ಎಂದು ಸಾಯುವ ಮುನ್ನ ನಿಸರ್ಗ ಹೇಳಿದ್ದಾಳೆ.

    ಇದನ್ನೂ ಓದಿ: ಅಕ್ಕಿ ಬರ, ವಿಶ್ವಕ್ಕೆ ಆಹಾರ ಗರ: ಅಕ್ಕಿ ರಫ್ತು ನಿಷೇಧಿಸಿದ ಭಾರತ; ಹಣದುಬ್ಬರ, ಬೆಲೆ ಏರಿಕೆ ಕಳವಳ

    ಡೆತ್​ನೋಟ್ ಬರೆದು ನನ್ನ ಬಾಗ್​ನಲ್ಲಿಟ್ಟಿದ್ದೇನೆ. ನನ್ನ ಸಾವಿಗೆ ಸುಹಾಸ್ ರೆಡ್ಡಿ, ಅನನ್ಯ, ಗೋಪಾಲಕೃಷ್ಣ, ಬಾಬು ರೆಡ್ಡಿ, ರೂಪ ಅವರು ಕಾರಣ ಎಂದು ನಿಸರ್ಗ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಜುಲೈ 20 ರಂದು ಮದ್ಯಾಹ್ನ 3 ಗಂಟೆ ಚಿಕಿತ್ಸೆ ಫಲಕಾರಿಯಾಗದೇ ನಿಸರ್ಗ ಮೃತಪಟ್ಟಿದ್ದಾಳೆ.

    ಐವರ ವಿರುದ್ಧ ಎಫ್​ಐಆರ್​

    ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಸುಹಾಸ್ ರೆಡ್ಡಿ, ಅನ್ಯನ ಪೋಷಕರು ಸೇರಿದಂತೆ 5 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ನಿಸರ್ಗ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸುಹಾಸ್ ರೆಡ್ಡಿ ಎಸ್ಕೇಪ್ ಆಗಿದ್ದಾರೆ. ತಲೆಮರಿಸಿಕೊಂಡಿರುವ ಸುಹಾಸ್ ರೆಡ್ಡಿ ಬಂಧನಕ್ಕೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)

    ಗಟ್ಟಿ ದನಿಯಲ್ಲಿ ಅಬ್ಬರಿಸಿದರೆ ಸುಳ್ಳು ಸತ್ಯವಾಗುವುದಿಲ್ಲ: ಸಿಎಂ ಸಿದ್ದುಗೆ ಮಾಜಿ ಸಿಎಂ ಎಚ್​ಡಿಕೆ ತಿರುಗೇಟು

    ‘ಕಂಗುವ’ ಚಿತ್ರದ ವಿಡಿಯೋ ಝಲಕ್ ರಿಲೀಸ್​​​; ನಟ ಸೂರ್ಯಗೆ ಜನ್ಮದಿನದ ಶುಭಾಶಯ ತಿಳಿಸಿದ ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts