ಇತ್ತ ಹಣವೂ ಇಲ್ಲ, ಪ್ರೀತಿಯೂ ಇಲ್ಲ ಎಂದು ಹತಾಶೆಗೊಂಡು ಪ್ರಿಯಕರನಿಗೆ ಚಾಕು ಇರಿದ ಪ್ರಿಯತಮೆ!

WhatsApp Image 2023-07-23 at 9.04.30 AM
Published on

ಬೆಂಗಳೂರು: ತನ್ನ ಪ್ರೇಯಸಿಯಿಂದ ಅಂತರ ಕಾಯ್ದುಕೊಳ್ಳಲು ಮುಂದಾದ ಪ್ರಿಯಕರನ ವರ್ತನೆಗೆ ಬೇಸತ್ತು, ಆತನಿಗೆ ಚಾಕುವಿನಿಂದ ಇರಿದ ಪ್ರೇಯಸಿಯನ್ನು ಇದೀಗ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ಸಂಭವಿಸಿದ್ದು, ಇಬ್ಬರು ಪ್ರೇಮಿಗಳು ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಪ್ರೇಯಸಿಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ ಪ್ರಿಯಕರನ ವರ್ತನೆ ಕಂಡು ರೊಚ್ಚಿಗೆದ್ದ ಪ್ರಿಯತಮೆ, ಆತನ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾಳೆ. ಪ್ರಿಯಕರ ಜಂಟಿ ದಾಸ್ ಎಂದು ಗುರುತಿಸಲಾಗಿದ್ದು, ಸದ್ಯ ಆತನ ಸ್ಥಿತಿ ಗಂಭೀರವಾಗಿದೆ.

ಘಟನೆಯ ವಿವರ: ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ ಅಸ್ಸಾಂ ಮೂಲದವರಾಗಿದ್ದು, ಇಬ್ಬರು ಬೆಂಗಳೂರಿನ ವಿವೇಕನಗರದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಿಯಕರ ಜಂಟಿ ದಾಸ್ ಸೆಕ್ಯೂರಿಟಿ ಆಗಿ ಕೆಲಸ ನಿರ್ವಹಿಸಿದರೆ, ಆರೋಪಿ ಮಹಿಳೆ ಡೇ ಕೇರ್​ನಲ್ಲಿ ಆಯಾ ಆಗಿ ಉದ್ಯೋಗ ಮಾಡುತ್ತಿದ್ದಳು ಎನ್ನಲಾಗಿದೆ. ಬರೂತಿ ಎಂಬ ಮಹಿಳೆಗೆ ಈ ಮೊದಲೇ ಮದುವೆಯಾಗಿತ್ತು. ತನ್ನ ಬಳಿ ಸಾಕಷ್ಟು ಹಣ ಪಡೆದು ಇತ್ತ ಹಿಂದಿರುಗಿಸದೆ, ಪ್ರೀತಿಸದೆ ದೂರ ಉಳಿಯುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಬೇಸತ್ತು, ಪ್ರಿಯಕರನಿಗೆ ಚಾಕುವಿನಿಂದ ಇರಿದಿದ್ದಾಳೆ.

ಘಟನೆಯಲ್ಲಿ ಪ್ರಿಯಕರ ಜಂಟಿ ದಾಸ್ ಸ್ಥಿತಿ ಗಂಭೀರವಾಗಿದ್ದು, ಗಾಯಾಳು ದಾಸ್​ಗೆ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ವೇಳೆ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net