More

    ಉದ್ಯೋಗದಾತ ಇಂಟರ್​ವ್ಯೂ ಮಾಡಲು ತಡವಾಗಿ ಬಂದ ಎಂದು ಎದ್ದು ಹೋದ ಭೂಪ! ಈತ ಮಾಡಿದ್ದು ಸರಿಯೋ ತಪ್ಪೋ?

    ನವದೆಹಲಿ: ವ್ಯಾಪಾರ ಜಗತ್ತಿನಲ್ಲಿ ಪ್ರತಿಯೊಬ್ಬರೂ ಜನರು ಸಮಯಕ್ಕೆ ಬರಬೇಕೆಂದು ನಿರೀಕ್ಷಿಸುತ್ತಾರೆ. ಆದಾಗ್ಯೂ, ಅಧಿಕಾರ ಸ್ಥಾನದಲ್ಲಿರುವ ಕೆಲವರು ನಿಯಮಗಳಿಂದ ವಿನಾಯಿತಿ ಪಡೆದಿದ್ದಾರೆ ಎಂದು ನಂಬಿರುತ್ತಾರೆ.

    ಇದನ್ನೂ ಓದಿ:ಉದ್ಯೋಗ ಮೇಳದಲ್ಲಿ 22 ಮಂದಿಗೆ ಕೆಲಸ 

    ಉದ್ಯೋಗಕ್ಕಾಗಿ ಸಂದರ್ಶನಕ್ಕೆಂದು ಹೋದ ವ್ಯಕ್ತಿಯೊಬ್ಬ, ಇದೇ ರೀತಿ ಉದ್ಯೋಗದಾತರಿಂದ ಆಲಸ್ಯದ ವರ್ತನೆಯನ್ನು ಕಂಡು ಎದ್ದು ಹೋಗಿದ್ದಾರೆ. ಅಷ್ಟೇ ಮಾಡದೇ, ನಂತರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಜನರು ಇವರ ಚಿಂತನೆಯನ್ನು ಮೆಚ್ಚಿಕೊಂಡಿದ್ದು, ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

    “ನಾನು ಇಂದು 2:30 ಕ್ಕೆ ಸಂಭಾವ್ಯ ಕಚೇರಿಗೆ ಬಂದಿದ್ದೆ. ನಾನು ಮುಂಭಾಗದ ಲಾಬಿಯಲ್ಲಿ ನಿರ್ದೇಶಕರನ್ನು ಭೇಟಿಯಾಗಬೇಕಿತ್ತು. ಆದರೆ ಅಲ್ಲಿದ್ದ ಉದ್ಯೋಗಿ “ಕೇಲವೇ ನಿಮಿಷಗಳಲ್ಲಿ” ಬರುತ್ತಾರೆ ಎಂದು ನನಗೆ ತಿಳಿಸಿದರು.

    I walked out of my interview today
    by u/Mauve_Unicorn in antiwork

    ಇದನ್ನೂ ಓದಿ: ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!

    ಆದರೆ, 2:45ಕ್ಕೂ ಸಂದರ್ಶಕ ಬರದೇ ಇದ್ದ ಕಾರಣ , ನಾನು ಹೊರನಡೆದು ಹೊರಟೆ. 15 ನಿಮಿಷಗಳು. ನಮ್ಮ ಉದ್ಯಮ ಹೇಗಿದೆ ಎನ್ನುವುದು ನನಗೆ ತಿಳಿದಿದೆ. ಕೆಲವು ನಿಮಿಷಗಳಿಗಿಂತ ಹೆಚ್ಚು ಹೊತ್ತು ಕಾಯಲು ನನಗೆ ಯಾವುದೇ ಕಾರಣಗಳಿಲ್ಲ. ಹೀಗೆ ಮಾಡುವ ಮೂಲಕ ಈ ಕಂಪನಿಯು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಹೇಗೆಂದರೆ, ಹೆಚ್ಚು ಹೊತ್ತು ಕಾಯುವ ಅಭ್ಯರ್ಥಿಯು ಉದ್ಯೋಗಕ್ಕಾಗಿ ಹತಾಶನಾಗಿದ್ದಾನೆ ಎಂದರ್ಥ. ಇದು ಅವರಿಗೆ ಖಚಿತವಾದ ಮೇಲೆ ಉದ್ಯೋಗಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ” ಎಂದು ಬರೆದಿದ್ದಾರೆ.

    ಈ ವಿಚಾರವನ್ನು ಒಪ್ಪುವ ಕಾಮೆಂಟ್​ಗಳೇ ಹೆಚ್ಚು ಬಂದಿದ್ದು, ಕೆಲವರು ಮಾತ್ರ ಈ ನಡೆಯನ್ನು ವಿರೋಧಿಸಿದ್ದಾರೆ. ಅದರೊಂದಿಗೆ ಅನೇಕರು ತಮ್ಮ ತಮ್ಮ ಕೆಟ್ಟ ಅನುಭವಗಳನ್ನು ಈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts