More

    ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಜೋಡಿ ಕೊಲೆಯಾಗಿದ್ದು, ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಅಮೃತಹಳ್ಳಿಯಲ್ಲಿ ಈ ಡಬಲ್ ಮರ್ಡರ್ ನಡೆದಿದೆ.

    ಏರೋನಿಕ್ಸ್ ಇಂಟರ್​ನೆಟ್​ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ, ಸಿಎಒ ವಿನು ಕುಮಾರ್ ಕೊಲೆಯಾದವರು. ಈ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಮೋದಿಯನ್ನು ಮೂರನೇ ಸಲ ಪ್ರಧಾನಿ ಆಗಿಸಲು ಯುವ ಬ್ರಿಗೇಡ್ ಸಜ್ಜು: ಕಾರ್ಯಕರ್ತರ ಪೂರ್ವಭಾವಿ ಸಭೆ

    ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!
    ಕೊಲೆಯಾದ ಸ್ಥಳ

    ಏರೋನಿಕ್ಸ್​ ಕಂಪನಿಯಿಂದ ಹೊರ ಬಂದ ಫೆಲಿಕ್ಸ್ ತನ್ನದೇ ಸ್ವಂತ ಕಂಪನಿ ಆರಂಭಿಸಿದ್ದ. ತನ್ನ ಉದ್ಯಮಕ್ಕೆ ಹಳೇ ಕಂಪನಿ ಎದುರಾಳಿ ಆಗಿದ್ದರಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಗೆ ಸಂಚು ಹೂಡಿದ್ದ ಫೆಲಿಕ್ಸ್, ಇಂದು ಸಂಜೆ 4 ಗಂಟೆಗೆ ಚಾಕು ಮತ್ತು ತಲ್ವಾರ್​ನಿಂದ ಫಣೀಂದ್ರ ಮತ್ತು ವಿನು ಕುಮಾರ್ ಮೇಲೆ ದಾಳಿ ಮಾಡಿ, ಕೊಲೆಗೈದಿದ್ದ. ಒಟ್ಟು ಮೂವರು ಜತೆಯಾಗಿ ಈ ಕೃತ್ಯವೆಸಗಿದ್ದು, ಒಂದು ಕೊಲೆ ತಳಮಹಡಿಯಲ್ಲಿ ಇನ್ನೊಂದು ಕೊಲೆ ಮೂರನೇ ಮಹಡಿಯಲ್ಲಿ ನಡೆದಿದೆ. ಪ್ರಕರಣದ ಬಳಿಕ ಆರೋಪಿಗಳು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಆರೋಪಿ ಫೆಲಿಕ್ಸ್ ಜೋಕರ್ ಫೆಲಿಕ್ಸ್ ಎಂದೂ ಕರೆಸಿಕೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.

    ಒಂದೇ ಹಗ್ಗದಲ್ಲಿ ಕೊನೆಯಾಯ್ತು ಯೋಧನ ಪತ್ನಿ-ಪುತ್ರಿಯ ಬದುಕು: ಮಗಳೊಂದಿಗೆ ನೇಣು ಬಿಗಿದುಕೊಂಡ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts