ಒಂದೇ ಹಗ್ಗದಲ್ಲಿ ಕೊನೆಯಾಯ್ತು ಯೋಧನ ಪತ್ನಿ-ಪುತ್ರಿಯ ಬದುಕು: ಮಗಳೊಂದಿಗೆ ನೇಣು ಬಿಗಿದುಕೊಂಡ ತಾಯಿ!

Mahadevi
Published on

ಬೆಳಗಾವಿ: ಭಾರತದ ಸೈನ್ಯದ ಯೋಧರೊಬ್ಬರ ಪತ್ನಿ ತನ್ನ ಪುತ್ರಿಯೊಂದಿಗೆ ಒಂದೇ ಹಗ್ಗದಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದ ಮಹಾದೇವಿ ಇಂಚಲ (34), ಚಾಂದನಿ ಇಂಚಲ (7) ಆತ್ಮಹತ್ಯೆಯಿಂದ ಮೃತಪಟ್ಟವರು. ಈಕೆ ತನ್ನ ಸಹೋದರ ಹಾಗೂ ನಾದಿನಿಯ ಕಿರುಕುಳಕ್ಕೆ ಬೇಸತ್ತು ಪುತ್ರಿಯ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಯೋಧನ ಜೊತೆಗೆ ವಿವಾಹವಾಗಿದ್ದ ಮಹಾದೇವಿ, ಏಳು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ಪುತ್ರಿ ಜೊತೆಗೆ ವಾಸವಿದ್ದರು. ಇಲ್ಲಿ ಸಹೋದರ ಹಾಗೂ ನಾದಿನಿ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಬೆಳಗಾವಿಯ ಕಿತ್ತೂರು ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net