ಒಂದು ದಿನ ಕಳೆದ ಮೇಲೆ ಗೊತ್ತಾಯ್ತು ಜೋಡಿ ಕೊಲೆ!; ದಂಪತಿಯನ್ನು ಕೊಚ್ಚಿ ಬರ್ಬರ ಹತ್ಯೆ

Police (1)
ಪೊಲೀಸರಿಂದ ಪರಿಶೀಲನೆ
Published on

ಚಿಕ್ಕೋಡಿ: ಗಂಡ ಹೆಂಡತಿ ಇಬ್ಬರನ್ನೂ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಘಟನೆ ನಡೆದ ಒಂದು ದಿನದ ನಂತರ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ಭೀಕರ ಕೊಲೆ ನಿನ್ನೆ ನಡೆದಿದೆ.

ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಗಜೇಂದ್ರ ವಣ್ಣೂರೆ (60) ಹಾಗೂ ಅವರ ಪತ್ನಿ ದ್ರಾಕ್ಷಾಯಿಣಿ ವಣ್ಣೂರೆ (48) ಕೊಲೆಗೀಡಾಗಿದ್ದಾರೆ. ಇವರ ಸ್ವಂತ ಮನೆಯಲ್ಲೇ ಈ ಬರ್ಬರ ಹತ್ಯೆ ನಡೆದಿದೆ.

ನಿನ್ನೆಯಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ತೆಗೆಸಿ ನೋಡಿದಾಗ ಮನೆಯೊಳಗೆ ಜೊಡಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ರವಾನೆ ಮಾಡಲಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆಗಳು ನಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net