VIDEO VIRAL | ಹಾಡಹಗಲೇ ಕೆಲಸದಾಕೆಯ ಜಡೆ ಹಿಡಿದು ಕಾಲಿನಿಂದ ಒದ್ದ ಚೀನಾದ ರಾಯಭಾರಿಯ ಪತ್ನಿ!

chinese woma
Published on

ನವದೆಹಲಿ: ಚೀನಾದ ರಾಯಭಾರಿಯ ಪತ್ನಿ ತನ್ನ ಪಾಕಿಸ್ತಾನಿ ಸೇವಕಿಯನ್ನು ಥಳಿಸುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 'ಘರ್ ಕೆ ಕಲೇಶ್' ಎಂಬ ಹ್ಯಾಂಡಲ್ ಮೂಲಕ ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು, ಇದು ನಂತರ ವೈರಲ್ ಆಗಲು ಪ್ರಾರಂಭಿಸಿತು.

ಈ ವೀಡಿಯೋದಲ್ಲಿ, ಮಹಿಳೆ ತನ್ನ ಸೇವಕಿಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡುವುದನ್ನು ನೋಡಬಹುದು. ಕೆಲಸದಾಕೆ ಎಷ್ಟೇ ಬೇಡಿಕೊಂಡರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಚೀನೀ ಮಹಿಳೆ, ಆಕೆಯನ್ನು ಕ್ರೂರವಾಗಿ ಥಳಿಸುತ್ತಾ ಕಪಾಳಕ್ಕೆ ಹೊಡೆಯುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.

ಅನೇಕರು ಈ ಚೀನಿ ಮಹಿಳೆಯನ್ನು ಥಳಿಸುವುದರಿಂದ ತಡೆಯಲು ಪ್ರಯತ್ನಿಸಿದರೂ ಆಕೆ ಮಾತ್ರ ನಿಲ್ಲುತ್ತಿಲ್ಲ. ಆಕೆ ಎಷ್ಟು ಕ್ರೂರಿ ಎಂದರೆ, ಕೆಲಸದಾಕೆಯ ಜಡೆ ಹಿಡಿದು ಹೊಟ್ಟೆಗೆ ಒದ್ದಿರುವುದನ್ನೂ ವಿಡಿಯೋದಲ್ಲಿ ಕಾಣಬಹುದು. ಈ ಥಳಿತಕ್ಕೆ ಸ್ಪಷ್ಟ ಕಾರಣ ಮಾತ್ರ ತಿಳಿದುಬಂದಿಲ್ಲ.

ಅಪ್‌ಲೋಡ್ ಮಾಡಿದ ನಂತರ, ವೀಡಿಯೊ 86 ಸಾವಿರಕ್ಕೂ ವೀಕ್ಷಣೆಗಳನ್ನು ಗಳಿಸಿದೆ. "ಶಿಕ್ಷಣ ನಡವಳಿಕೆಯನ್ನು ಮಾರ್ಪಾಡು ಮಾಡಬೇಕು. ಈ ರೀತಿ ಹುಚ್ಚು ನಡವಳಿಕೆ ಮಾಡಬಾರದು" ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಮಹಿಳೆ ತನ್ನ ಸೇವಕಿಯನ್ನು ಏಕೆ ಹೊಡೆಯುತ್ತಿದ್ದಾಳೆ ಎಂದು ಅನೇಕ ಜನರು ಕೇಳುವುದನ್ನು ಕಾಣಬಹುದು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net