More

    ಕಾಶ್ಮೀರದ ಸಮಸ್ಯೆ ಬಗ್ಗೆ ಚೀನಾ ಮಾತನಾಡುತ್ತಿರುವುದು ಬಿಜೆಪಿ ಕೊಡುಗೆ: ಮೆಹಬೂಬ ಮುಫ್ತಿ

    ಬೆಂಗಳೂರು: ಕೆಲವು ವರ್ಷಗಳಿಂದ ಕೋಮು ಆಧಾರಿಯ ರಾಜಕೀಯ ನಡೆಯುತ್ತಿತ್ತು. ಇದೀಗ ಚುನಾವಣೆಯಲ್ಲಿ ಕೋಮುವಾದದ ಶಕ್ತಿಗಳಿಗೆ ಸೋಲುಣಿಸಿದ್ದಕ್ಕೆ ಕರ್ನಾಟಕದ ಜನತೆಗೆ ಶುಭಾಶಯ. ಯಾರಿಗೆ ರಾಷ್ಟ್ರದ ಸಾರ್ವಭೌಮತೆಯಲ್ಲಿ ನಂಬಿಕೆ ಇದೆಯೋ, ಯಾರಿಗೆ ಸಂವಿಧಾನದಲ್ಲಿ ನಂಬಿಕೆ ಇದೆಯೋ, ಅವರನ್ನು ಗೆಲ್ಲಿಸಿದ್ದೀರಿ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದರು.

    ಪ್ರೆಸ್​ಕ್ಲಬ್​ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮೆಹಬೂಬ ಮುಫ್ತಿ ಮಾತನಾಡುತ್ತಾ, ಕರ್ನಾಟಕದಲ್ಲಿ ನಡೆಯುತ್ತಿದ್ದ ಕೋಮು ಆಧಾರಿತ ರಾಜಕೀಯವನ್ನು ಮೆಟ್ಟಿ ನಿಲ್ಲುವಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಸದ್ಯ ಕರ್ನಾಟಕ ದೇಶಕ್ಕೆ ಒಟ್ಟಾಗಿ ಇರುವ ಭಾರತದ ಬಗ್ಗೆ ಭರವಸೆಯನ್ನ ನೀಡಿದ್ದಾರೆ. ಈಡೀ ದೇಶ ಕೋಮ ದ್ವೇಷದಿಂದ ಬಳಲುತ್ತಿದೆ ಎಂದು ಹೇಳಿದರು.

    ಇದನ್ನೂ ಓದಿ: ಹಂಗಾಮಿ ಸ್ಪೀಕರ್​ ಆಗಿ ಕಾಂಗ್ರೆಸ್​ನ ಹಿರಿಯ ನಾಯಕ ಆರ್.ವಿ ದೇಶಪಾಂಡೆ ನೇಮಕ

    ಬಿಜೆಪಿ ವಿರೋಧ ಪಕ್ಷಗಳನ್ನು ಉಳಿಸುತ್ತಿಲ್ಲ!

    ಬಿಜೆಪಿ ಸರ್ಕಾರ ದೇಶದ ಯಾವುದೇ ವಿರೋಧಪಕ್ಷಗಳನ್ನು ಉಳಿಸುತ್ತಿಲ್ಲ. ಸರ್ಕಾರಗಳನ್ನು ಹೈಜಾಕ್ ಮಾಡುವ ಕೆಲಸ ಮಾಡುತ್ತಾ ಬರುತ್ತಿದೆ. ಯಾವುದೇ ರೀತಿಯಾದ್ರು ಸರಿ ಸರ್ಕಾರವನ್ನು ಅವರ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಾರೆ. ಆದರೆ ಕಾಂಗ್ರೆಸ್ ರಾಜ್ಯದ ಜನರಿಗೆ ಭರವಸೆ ನೀಡಿದೆ. ಇದಕ್ಕೆ ರಾಹುಲ್ ಗಾಂಧಿ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆ ಇದಕ್ಕೊಂದು ಬುನಾದಿ ಹಾಕಿತ್ತು. ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತದೆ ಎಂಬ ಭರವಸೆ ನನಗಿದೆ ಎಂದು ಮುಫ್ತಿ ವಿಶ್ವಾಸ ವ್ಯಕ್ತಪಡಿಸಿದರು.

    ನನ್ನ ಪಾಸ್​ಪೋರ್ಟ್ ಕಿತ್ತುಕೊಂಡಿದ್ದರು!

    ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದಾಗ ನನ್ನ ಪಾಸ್​ಪೋರ್ಟ್ ಕಿತ್ತುಕೊಂಡಿದ್ದರು. ನನ್ನ ಮಗಳಿಗೆ ಇನ್ನೂ ಪಾಸ್ ಪೋರ್ಟ್ ಸಿಕ್ಕಿಲ್ಲ. ಈ ರೀತಿ ಕೇಂದ್ರ ಸರ್ಕಾರ ಪರಿಸ್ಥಿತಿ ತಂದೊಡ್ಡಿದೆ. ಕಾಶ್ಮೀರದಲ್ಲಿ ಜಿ20 ನಡೆಯಲಿದೆ. ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಅಲ್ಲಿ ಎಲ್ಲವೂ ಸರಿಯಿಲ್ಲ. ಹಲವು ಮನೆಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ವಚ್ಚವಾಗಿ ಓಡಾಡುವ ಅವಕಾಶವನ್ನು ಕಿತ್ತುಕೊಂಡಿದ್ದಾರೆ. ಕಾಶ್ಮೀರ ಸಮಸ್ಯೆ ಬಗ್ಗೆ ಈ ಹಿಂದೆ ಪಾಕಿಸ್ತಾನ ಮಾತ್ರ ಮಾತಾಡುತ್ತಿತ್ತು. ಈಗ ಚೀನಾವೂ ಸಹ ಮಾತನಾಡುತ್ತಿದೆ. ಇದು ಬಿಜೆಪಿಯ ಕೊಡುಗೆ. ಅಷ್ಟರ ಮಟ್ಟಿಗೆ ಜಮ್ಮು ಮತ್ತು ಕಾಶ್ಮೀರವನ್ನು ಬಿಜೆಪಿ ಸರ್ಕಾರ ದುರ್ಬಲ ಮಾಡಿದೆ ಎಂದು ಮೆಹಬೂಬ ಮುಫ್ತಿ ಕಿಡಿಕಾರಿದರು.

    ಇದನ್ನೂ ಓದಿ: ಕಲಬುರಗಿ | ಸಾವಿಗೆ ಶರಣಾದ ಹೆಡ್​ ಕಾನ್ಸ್​​​​ಸ್ಟೇಬಲ್

    ಬಡತನದ ನಡುವೆ ಸಂಸತ್ ಭವನ ಉದ್ಘಾಟಿಸುತ್ತಿದ್ದೇವೆ!

    2024ರಲ್ಲೂ ಬಿಜೆಪಿ ಸರ್ಕಾರವನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ ನಮಗೆ ಈ ದೇಶದಲ್ಲಿ ಉಳಿಸಲು ಏನೂ ಇರುವುದಿಲ್ಲ. ಅಷ್ಟರಮಟ್ಟಿಗೆ ಬಿಜೆಪಿಯವರು ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತಿದ್ದಾರೆ. ದೇಶದ ಜಿಡಿಪಿ ಬಾಂಗ್ಲಾದೇಶಕ್ಕಿಂತ ಕೆಳಗೆ ಹೋಗುತ್ತಿದೆ. ಬಡತನದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಾವು ಮಾತ್ರ ನೂತನ ಸಂಸತ್ ಭವನ ಉದ್ಘಾಟನೆ ಮಾಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts