ಸಿನಿಮಾ

ಕಲಬುರಗಿ | ಸಾವಿಗೆ ಶರಣಾದ ಹೆಡ್​ ಕಾನ್ಸ್​​​​ಸ್ಟೇಬಲ್

ಕಲಬುರಗಿ: ನೇಣು ಬಿಗಿದುಕೊಂಡು ಹೆಡ್ ಕಾನ್​ಸ್ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಡಿಎಆರ್ ಹೆಡ್ ಕ್ವಾರ್ಟರ್ಸ್​ನಲ್ಲಿ ನಡೆದಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಗ್ರಾಮದ ನಿವಾಸಿ ಪಾಂಡುರಂಗ (47) ಆತ್ಮಹತ್ಯೆಗೆ ಶರಣಾಗಿರುವ ಹೆಡ್ ಕಾನ್​​​ಸ್ಟೇಬಲ್.

ಪಾಂಡುರಂಗ ನಿನ್ನೆ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಹೆಚ್ಚಿನ ಶೆಖೆಯ ವಾತಾವರಣ ಇದ್ದುದರಿಂದ ಮಕ್ಕಳಿಬ್ಬರು ಮನೆಯ ಮೇಲ್ಛಾವಣಿಯಲ್ಲಿ ಮಲಗಿದ್ದರು. ಗಂಡ-ಹೆಂಡತಿ ಮಾತ್ರ ಮನೆಯ ಬೆಡ್​ರೂಮ್​ನಲ್ಲಿ ಮಲಗಿದ್ದರು. ಆದರೆ ಪಾಂಡುರಂಗ ನುಸುಕಿನ ಜಾವ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಂಡುರಂಗ ಅತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದು ಬಹಿರಂಗವಾಗಿಲ್ಲ. ಈ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Posts

ಲೈಫ್‌ಸ್ಟೈಲ್