

ಇಂದೋರ್: ಮುಂಬರುವ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಸೇರಿ ಒಟ್ಟು 17 ವಿರೋಧ ಪಕ್ಷಗಳು ಒಗ್ಗಟ್ಟಾಗಿದ್ದು, ತೋಳಗಳು ಹಿಂಡು ಹಿಂಡಾಗಿ ಬೇಟೆಯಾಡುತ್ತವೆ ಎಂದು ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ನಿರ್ಗತಿಕರು, ಭಿಕ್ಷುಕರಿಗೆ ಭರ್ಜರಿ ಬಾಡೂಟ; ಮಾನವೀಯತೆ ಮೆರೆದ ನಂಜನಗೂಡಿನ ನಗರಸಭೆಯ ಮಾಜಿ ಸದಸ್ಯ ಮಂಜುನಾಥ್
ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ 9 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಇಂದೋರ್ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಇರಾನಿ, ಪ್ರತಿಪಕ್ಷಗಳ ಸಭೆಯ ಗುರಿ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಿ ಆಡಳಿತದಿಂದ ಕೆಳಗಿಳಿಸುವುದಲ್ಲ, ಬದಲಾಗಿ ದೇಶದ ಖಜಾನೆ ಮತ್ತು ಇಲ್ಲಿನ ಜನತೆ ಎಂದು ಹೇಳಿದ್ದಾರೆ.
ತೋಳಗಳು ಬೇಟೆಯಾಡಲು ಹೊರಟಾಗ ಗುಂಪು ಗುಂಪಾಗಿ ಹೊರಡುತ್ತವೆ. ಆದರೆ ಸಿಂಹವನ್ನು, ತೋಳಗಳು ಬೇಟೆಯಾಡುವುದು ಅಸಾಧ್ಯ. ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ಹೊಂದಿರುವ ಸಿಂಹವನ್ನು ತೋಳಗಳು ಹೇಗೆ ಬೇಟೆಯಾಡುತ್ತವೆ ಎಂದು ಇರಾನಿ ಹೇಳಿದ್ದಾರೆ.
ಇದನ್ನೂ ಓದಿ: ಬೆಕ್ಕುಗಳಿಗೆ ಆಹಾರ ಹಾಕಿ ಸಾಕುತ್ತಿದ್ದ ಯುವತಿಗೆ ಹಿಗ್ಗಾಮುಗ್ಗಾ ಹೊಡೆದ ನೆರೆಮನೆಯವರು!
ಪ್ರಧಾನ ಮಂತ್ರಿ ಮೋದಿ ಸರ್ಕಾರವನ್ನು ಸೋಲಿಸಲು ವಿರೋಧ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಂದಾಗಿ ಶುಕ್ರವಾರದಂದು ಸಭೆಯನ್ನು ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಇರಾನಿ ಈ ಮಾತನ್ನು ಹೇಳಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.(ಏಜೆನ್ಸೀಸ್)