

ದೆಹಲಿ: ಪ್ರಯಾಣಿಕರಿಗೆ ಗುಣಮಟ್ಟದ ಊಟ ನೀಡುವಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಕಪಿಲ್ ದೇವ್ ಬಳಗದ 1983ರ ವಿಶ್ವವಿಕ್ರಮಕ್ಕೆ 40ರ ಸಂಭ್ರಮ
ಇತ್ತೀಚೆಗೆ, ಉತ್ತರ ಪ್ರದೇಶದ ಪ್ರಯಾಣಿಕನೊಬ್ಬ ತಮ್ಮ ಪ್ರಯಾಣದ ವೇಳೆ ವೆಜ್ ಥಾಲಿಯನ್ನು ಆರ್ಡರ್ ಮಾಡಿದ್ದಾನೆ. ಆದರೆ ಪಾರ್ಸೆಲ್ ತೆರೆದು ನೋಡಿದಾಗ ಪ್ರಯಾಣಿಕ ಶಾಕ್ ಆಗಿದ್ದಾನೆ. ಏಕೆಂದರೆ ಆತ ಆರ್ಡರ್ ಮಾಡಿದ ವೆಜ್ ಥಾಲಿಯಲ್ಲಿ ಜಿರಳೆ ಕಂಡು ಬಂದಿದೆ.
ಕೂಡಲೇ ಪ್ರಯಾಣಿಕನು ಆ ವೆಜ್ ಥಾಲಿಯ ಫೋಟೋ ತೆಗೆದು ಟ್ವಿಟ್ಟರ್ನಲ್ಲಿ, ನಾನು ಆರ್ಡರ್ ಮಾಡಿದ ಊಟದಲ್ಲಿ ಜಿರಳೆ ದೊರೆತಿದೆ. ನನಗೆ ನನ್ನ ಹಣವನ್ನು ಮರುಪಾವತಿಸಿ, ನಿಮ್ಮ ಸರ್ವಿಸ್ ಅತ್ಯಂತ ಕೆಟ್ಟದ್ದಾಗಿದೆ ಎಂದು ಕೇಟರಿಂಗ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಇದನ್ನೂ ಓದಿ: ಬೆಕ್ಕುಗಳಿಗೆ ಆಹಾರ ಹಾಕಿ ಸಾಕುತ್ತಿದ್ದ ಯುವತಿಗೆ ಹಿಗ್ಗಾಮುಗ್ಗಾ ಹೊಡೆದ ನೆರೆಮನೆಯವರು!
ಆದರೆ ಐಆರ್ಸಿಟಿಸಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ದೂರನ್ನು ದಾಖಲಿಸಲಾಗಿದೆ. ನಿಮ್ಮ ದೂರು ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ಕಳುಹಿಸಲಾಗಿದೆ ಎಂದು ಉತ್ತರ ನೀಡಿದೆ.(ಏಜೆನ್ಸೀಸ್)