ಬೆಕ್ಕುಗಳಿಗೆ ಆಹಾರ ಹಾಕಿ ಸಾಕುತ್ತಿದ್ದ ಯುವತಿಗೆ ಹಿಗ್ಗಾಮುಗ್ಗಾ ಹೊಡೆದ ನೆರೆಮನೆಯವರು!

cat
ಸಾಂಧರ್ಬಿಕ ಚಿತ್ರ
Published on

ಮುಂಬೈ: ಮೂಖಪ್ರಾಣಿಗಳು ಹಸಿವಾದರೆ ಬಾಯಿಬಿಟ್ಟು ಕೇಳಲಾರವು. ಹೀಗಾಗಿ ಪ್ರಾಣಿ ಪ್ರೇಮಿಗಳು ಆಹಾರ ನೀಡಿ ಮಾನವೀಯತೆ ಮೆರೆಯುತ್ತಾರೆ. ಹೀಗೆ ಬೆಕ್ಕುಗಳಿಗೆ ಆಹಾರ ಹಾಕಿ ಸಾಕುತ್ತಿದ್ದ ಯುವತಿ ಮೇಲೆ ಅಕ್ಕ ಪಕ್ಕದ ಮನೆಯವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ.

ಭುಲೇಶ್ವರ್ ಎಂಬಲ್ಲಿ ಸಿಮ್ರಿನ್ ಶುಕ್ಲಾ ಎಂಬ 23 ವರ್ಷ ಯುವತಿ ಬೆಕ್ಕಿನ ಪ್ರೇಮಿಯಾಗಿದ್ದು, ಬೆಕ್ಕುಗಳಿಗ ಆಹಾರ ನೀಡುತ್ತಿದ್ದರು. ಇದೇ ಕಾರಣಕ್ಕೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು,ಆಕೆಯ ಕೈಗಳಿಗೆ ವೈದ್ಯರು 32 ಹೊಲಿಗೆ ಹಾಕಿದ್ದಾರೆ.

ಬೆಕ್ಕುಗಳ ಪ್ರೇಮಿಯಾಗಿರುವ ಸಿಮ್ರಿನ್ ಅವರು ಬೆಕ್ಕುಗಳಿಗೆ ಆಹಾರ ನೀಡುತ್ತಾರೆ. ಬೆಕ್ಕುಗಳಿಗೆ ಆಹಾರ ನೀಡೋದು ಏಕೆ ಎಂದು ಸಿಮ್ರಿನ್‌ಗೆ  ಪ್ರಶ್ನಿಸುವಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಯ್ತು. ಇದೇ ಕಾರಣಕ್ಕಾಗಿ 40 ವರ್ಷ ವಯಸ್ಸಿನ ರಾಜಕುಮಾರ್ ಮಿಶ್ರಾ ಎಂಬುವರು ತಮ್ಮ ಕುಟುಂಬಸ್ಥರ ಜತೆಗೆ ಸಿಮ್ರಿನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮುಂಬೈನ ವಿ. ಪಿ. ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಸಿಮ್ರಿನ್‌ನ 14 ವರ್ಷದ ಸಹೋದರನ ಮೇಲೂ ಅದೇ ನೆರೆಹೊರೆಯವರು ಪ್ರಾಣಿಗಳಿಗೆ ಆಹಾರ ನೀಡುವ ವಿಷಯದಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಾಯಗೊಂಡಿರುವ ಸಿಮ್ರಿನ್ ಮಾತನಾಡಿ, ನನ್ನ ಮೇಲೆ ಕೆಟ್ಟದಾಗಿ ಹಲ್ಲೆ ನಡೆಸಲಾಯಿತು, ಅದಕ್ಕಾಗಿ ನನ್ನ ತೋಳಿಗೆ ಹೊಲಿಗೆ ಹಾಕಿದ್ದಾರೆ. ಬೆಕ್ಕುಗಳಿಗೆ ಆಹಾರ ನೀಡುತ್ತಿರುವುದಕ್ಕಾಗಿ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net