ಪತ್ನಿ ಹತ್ಯೆಗೈದ ಮೂರು ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ಪತಿ..

confession
Published on

ಕೊಲ್ಕತಾ: ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳ ಅಸ್ಥಿಪಂಜರ ಸೆಪ್ಟಿಕ್​ ಟ್ಯಾಂಕ್​ನಲ್ಲಿ ದೊರೆತಿರುವ ಘಟನೆ ಪಶ್ಚಿಮ ಬಂಗಾಳದ ಕೊಲ್ಕತಾದಲ್ಲಿ ನಡೆದಿದೆ.

ಮಾರ್ಚ್ 2020ರಲ್ಲಿ ತುಂಪಾ ಮಂಡಲ್ ಎಂಬ ಮಹಿಳೆ ನಾಪತ್ತೆಯಾಗಿದ್ದರು. ಈ ಕುರಿತು ಆಕೆಯ ತಂದೆ ಲಕ್ಷ್ಮಣ್ ಹಲ್ಡರ್ ಸ್ಥಳೀಯ ಪೊಲೀಸರಿಗೆ ನಾಪತ್ತೆ ದೂರು ಸಲ್ಲಿಸಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು. 2020ರ ಏಪ್ರಿಲ್​ನಲ್ಲಿ ಮೃತ ಮಹಿಳೆಯ ಪತಿ ಬೊಂಬಲ್ ಮಂಡಲ್​ನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿತ್ತು.

ಇದನ್ನೂ ಓದಿ: ಟಗರು ಕಾಳಗದ ಚಾಂಪಿಯನ್ 7 ಸ್ಟಾರ್ ಸುಲ್ತಾನ್ ಕುರ್ಬಾನಿಗೆ ಭಾರೀ ವಿರೋಧ: ಮಾಲೀಕ ಹೇಳಿದ್ದಿಷ್ಟು….

ಆದರೆ, ಸ್ಥಳೀಯ ಪೊಲೀಸರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿ ಬೊಂಬಲ್​ಗೆ ಜಾಮೀನು ಮಂಜೂರು ಮಾಡಿತ್ತು. ನಂತರ ಈ ಪ್ರಕರಣವನ್ನು ಮಹಿಳೆಯಯ ತಂದೆ ಮನವಿಯ ಮೇರೆಗೆ ಕೋಲ್ಕತ್ತಾ ಹೈಕೋರ್ಟ್​ ಸಿಐಡಿಗೆ ಹಸ್ತಾಂತರಿಸಿತ್ತು.

ಹೈಕೋರ್ಟ್ ಆದೇಶದ ಮೇರೆಗೆ ಸಿಐಡಿ ಕಳೆದ ಜೂನ್ 13ರಂದು ಘಟನೆಯ ತನಿಖೆಯನ್ನು ವಹಿಸಿಕೊಂಡಿದ್ದು, ಆರೋಪಿಯನ್ನು ಮತ್ತೆ ತನಿಖೆಗೆ ಒಳಪಡಿಸಿದಾಗ 2020ರಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ತನ್ನ ಹೆಂಡತಿಯನ್ನು ಕೊಂದು ನಂತರ ಶವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶೇಖರಿಸಿಟ್ಟಿರುವುದಾಗಿ ಹೇಳಿದ್ದಾನೆ.

ಇದನ್ನೂ ಓದಿ: ನಾಯಕಿಯಾದರು ಕಣ್ಣಿನ ಡಾಕ್ಟರ್; ‘ಇತ್ಯಾದಿ’ ಚಿತ್ರದ ಮೂಲಕ ಡಾ. ಸೌಮ್ಯ ಚಿತ್ರರಂಗಕ್ಕೆ ಎಂಟ್ರಿ

ಆರೋಪಿಗಳು ಬಹಿರಂಗಪಡಿಸಿದ ಸ್ಥಳದಲ್ಲಿ ಸಿಐಡಿ ಸೆಪ್ಟಿಕ್ ಟ್ಯಾಂಕ್ ಪರಿಶೀಲಿಸಿದಾಗ ಮೃತ ಮಹಿಳೆಯ ಅಸ್ಥಿಪಂಜರ ಮತ್ತು ಆಭರಣಗಳು ಪತ್ತೆಯಾಗಿವೆ. ಆರೋಪಿ ಭೋಂಬಲ್ ತಲೆದಿಂಬಿನಿಂದ ಉಸಿರುಗಟ್ಟಿಸಿ ಆಕೆಯನ್ನು ಕೊಂದಿದ್ದು, ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂಬ ಶಂಕೆಯಿಂದ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.(ಎಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net