ನಿರ್ಗತಿಕರು, ಭಿಕ್ಷುಕರಿಗೆ ಭರ್ಜರಿ ಬಾಡೂಟ; ಮಾನವೀಯತೆ ಮೆರೆದ ನಂಜನಗೂಡಿನ ನಗರಸಭೆಯ ಮಾಜಿ ಸದಸ್ಯ ಮಂಜುನಾಥ್

mysore food (1)
Published on

ಮೈಸೂರು: ನಿರ್ಗತಿಕರು ಹಾಗೂ ಭಿಕ್ಷುಕರು ಕಂಡರೂ ಕಾಣದಂತೆ ಇರುವವರ ಮಧ್ಯದಲ್ಲಿ ಕೆಲವರು ಮಾನವೀಯತೆ ಮೆರೆಯುತ್ತಾರೆ. ಹೀಗೆ ಇಲ್ಲೊಬ್ಬ ವ್ಯಕ್ತಿ ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕವಾಗಿ ಇಂದು ಸುದ್ದಿಯಲ್ಲಿದ್ದಾರೆ.

ಪ್ರತಿ ವರ್ಷದ ಆಷಾಢ ಮಾಸದಲ್ಲಿ ನಿರ್ಗತಿಗರಿಗೆ ಊಟ ಹಾಕಿಸುವ ವ್ಯಕ್ತಿ ಮಂಜುನಾಥ್. ನಂಜನಗೂಡಿನ ಮಾಜಿ ನಗರಸಭಾ ಸದಸ್ಯ ಮಂಜುನಾಥ್ ಕುಟುಂಬದ ಸದಸ್ಯರ ಜತೆ ಸೇರಿ ಬಾಡೂಟ ಆಯೋಜನೆ ಮಾಡಿದ್ದರು.

ನಂಜನಗೂಡಿನ ಪರಶುರಾಮ ದೇವಾಲಯದ ಸಮೀಪದಲ್ಲಿ ಭರ್ಜರಿ ಬಾಡೂಟದ ಜೌತಣಕೂಟವನ್ನು ಆಯೋಜಿಸಲಾಗಿತ್ತು. 300 ಜನ ಭಿಕ್ಷುಕರು ಹಾಗೂ ನಿರ್ಗತಿಕರು ಊಟ ಸೇವನೆ ಮಾಡಿದ್ದಾರೆ.

ಚಿಕ್ಕನ್ ಕಬಾಬ್, ಚಿಕ್ಕನ್ ಚಾಪ್ಸ್, ಎಗ್ ಬುರ್ಜಿ, ಪಾಯಸ, ಹಾಗೂ ಕೋಳಿ ಸಾಂಬಾರ ಊಟ ನೀಡಲಾಗಿದೆ. ಮಂಜುನಾಥ್​ ಅವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net