ಗಂಡನನ್ನು ಮಂಚಕ್ಕೆ ಕಟ್ಟಿ, ಬೆತ್ತಲೆಗೊಳಿಸಿ ಪತ್ನಿಯಿಂದ ವಿಕೃತಿ! ಭಯಾನಕ ವಿಡಿಯೋ ಬಹಿರಂಗ

Woman torture (1)
Published on

ಲಖನೌ: ಗಂಡನನ್ನು ಹಾಸಿಗೆಯಲ್ಲಿ ಕಟ್ಟಿಹಾಕಿ, ಬೆತ್ತಲೆಗೊಳಿಸಿ ಆತನ ಖಾಸಗಿ ಅಂಗವನ್ನು ಸಿಗರೇಟ್​ನಿಂದ ಸುಟ್ಟು, ವಿಕೃತಿ ಮೆರೆದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಉತ್ತರ ಪ್ರದೇಶ ಪೊಲೀಸರು ಬಂಧನ ಮಾಡಿದ್ದಾರೆ. ಇದೀಗ ಆರೋಪಿ ಮಹಿಳೆಯ ಭಯಾನಕ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.

ವಿಡಿಯೋದಲ್ಲಿ ಏನಿದೆ? ಜೀನ್ಸ್​ ಪ್ಯಾಂಟ್​ ಮತ್ತು ಟೀಶರ್ಟ್​ ಧರಿಸಿರುವ ಮಹಿಳೆ, ತನ್ನ ಗಂಡನನ್ನು ಬೆತ್ತಲೆಗೊಳಿಸಿ, ಎರಡೂ ಕೈಗಳು ಮತ್ತು ಕಾಲುಗಳನ್ನು ಮಂಚಕ್ಕೆ ಕಟ್ಟಿ, ಆತನ ಮೇಲೆ ಕುಳಿತು ಹಲ್ಲೆ ಮಾಡುವ ಮೂಲಕ ಚಿತ್ರಹಿಂಸೆ ನೀಡುತ್ತಾಳೆ. ಪಾನ್​ ಮಸಾಲ ಹಾಕಿಕೊಳ್ಳುವುದಲ್ಲದೆ, ಸಿಗರೇಟ್​ ಸೇದುತ್ತಾ ಅದರಿಂದ ಗಂಡನ ಖಾಸಗಿ ಅಂಗವನ್ನು ಸುಡುವ ಮೂಲಕ ವಿಕೃತಿ ಮೆರೆಯುತ್ತಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ.

ಏನಿದು ಪ್ರಕರಣ?

ಬಂಧಿತಳನ್ನು ಮೆಹೆರ್​ ಜಹಾನ್​ ಎಂದು ಗುರುತಿಸಲಾಗಿದೆ. ಈಕೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಸಿಯೋಹರಾ ಚಕ್ ಮಹಮೂದ್ ಸಾನಿ ಗ್ರಾಮದ ನಿವಾಸಿ. ಸಂತ್ರಸ್ತ ಗಂಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪತ್ನಿಯ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಮನ್ನನ್​​ ಸೈದಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ರಹಸ್ಯವಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ ಮೂಲಕ ಪತ್ನಿಯ ದೌರ್ಜನ್ಯ ಬಯಲಾಗಿದೆ. 2023ರ ನವೆಂಬರ್ 17ರಂದು ಮುಸ್ಲಿಂ ಪದ್ಧತಿಯಂತೆ ಇಬ್ಬರೂ ವಿವಾಹವಾದರು. ಮದುವೆಯ ನಂತರ ತನ್ನ ಪತ್ನಿ ಮದ್ಯ, ಸಿಗರೇಟು ಸೇವನೆ ಮಾಡುತ್ತಿರುವುದು ಪತ್ತೆಯಾಗಿದೆ. ಇದನ್ನು ಪತಿ ವಿರೋಧಿಸಿದಾಗ, ಮೆಹೆರ್ ಜಗಳವಾಡಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ ಕೊಲ್ಲಲು ಪ್ರಯತ್ನಿಸಿದಳು ಎನ್ನಲಾಗಿದೆ.

ಕುಡಿದ ಅಮಲಿನಲ್ಲಿ ಪತಿ ಮನ್ನನ್​ಗೆ ಮೆಹೆರ್ ಹಲವು ಬಾರಿ ಕಿರುಕುಳ ನೀಡಿದ್ದಾಳೆ. ಪತ್ನಿಯ ಮುಖವಾಡವನ್ನು ಎಲ್ಲರ ಎದರು ಬಿಚ್ಚಿಡಬೇಕೆಂಬ ಉದ್ದೇಶದಿಂದಲೇ ಮನ್ನನ್ ಸೈದಿಯ ರಹಸ್ಯವಾಗಿ ಮನೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಏಪ್ರಿಲ್ 29 ಮತ್ತು 24ರಂದು ಮೆಹೆರ್, ತನ್ನ ಪತಿಗೆ ಡ್ರಗ್ಸ್ ನೀಡಿ ಎರಡೂ ಕೈಗಳನ್ನು ಕಟ್ಟಿ ತನ್ನ ಗಂಡನ ಖಾಸಗಿ ಅಂಗವನ್ನು ಸಿಗರೇಟಿನಿಂದ ಸುಟ್ಟಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹೆರ್​ ಕೃತ್ಯ ಇಷ್ಟಕ್ಕೆ ನಿಲ್ಲುವುದಿಲ್ಲ, ತನ್ನ ಬಳಿಯಿದ್ದ ಚಾಕುವಿನಿಂದ ಪತಿಯ ಮೇಲೆ ಅನೇಕ ಬಾರಿ ಹಲ್ಲೆ ಮಾಡಿದ್ದಾಳೆ. ನೋವಿನಿಂದ ಪತಿ ಕಿರುಚಿಕೊಂಡರೂ ಬಿಡದ ಮೆಹೆರ್ ಗಂಡನನ್ನು ಕ್ರೂರವಾಗಿ ನಡೆಸಿಕೊಂಡು ಗಾಯಗೊಳಿಸಿದ್ದಾಳೆ. ಸದ್ಯ ಮನ್ನನ್ ಅವರ ಕುಟುಂಬ ಸದಸ್ಯರು ಮೆಹೆರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net