ಕೇಂದ್ರ ಬಟೆಜ್​ನಲ್ಲಿ ಬೆಂಗಳೂರಿಗೆ ಬಂಪರ್​ ಕೊಡುಗೆ

Metro 28 dec 19
Published on

ಬೆಂಗಳೂರು: 2021-22ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಬೆಂಗಳೂರಿಗೂ ಅನುದಾನ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 9ನೇ ಬಜೆಟ್ ಇದಾಗಿದ್ದು, ಕರೊನಾ ಬಳಿಕ ಆರ್ಥಿಕ ಚೇತರಿಕೆಯನ್ನ ಗಮನದಲ್ಲಿ ಇಟ್ಟುಕೊಂಡೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ.

ಬಜೆಟ್​ ಆರಂಭದಲ್ಲೇ ಅರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಎಂದು ಘೋಷಿಸಿದ ಸಚಿವೆ, ಬೆಂಗಳೂರು ಮೆಟ್ರೋಗೂ ಬಂಪರ್​ ಕೊಡುಗೆ ಕೊಟ್ಟಿದ್ದಾರೆ. ಬೆಂಗಳೂರು 2ನೇ ಹಂತದ ಮೆಟ್ರೋ ಕಾಮಗಾರಿಗೆ 14,788 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. 58.19 ಕಿಲೋ ಮೀಟರ್ ಉದ್ಧದ ಮೆಟ್ರೋ ರೈಲ್ವೆ ಮಾರ್ಗದ 2a ಮತ್ತು 2b ಹಂತಕ್ಕೆ ಅನುದಾನ ನೀಡಲಾಗಿದೆ. ಇದನ್ನೂ ಓದಿರಿ ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net