

ನವದೆಹಲಿ: ಮಹಾಮಾರಿ ಕರೊನಾದಿಂದ ಹಳಿತಪ್ಪಿರುವ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಆಶಾದಾಯಕ ಎನಿಸಿರುವ 2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಾಗದ ರಹಿತ ಬಜೆಟ್ ಮಂಡಿಸುವ ಮೂಲಕ ಬಜೆಟ್ಗೆ ಡಿಜಿಟಲ್ ಸ್ಪರ್ಶ ನೀಡಿದ್ದಾರೆ. ಆರ್ಥಿಕ ತಜ್ಞರ ಚರ್ಚೆಯನ್ನು ಒಳಗೊಂಡಂತೆ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ದಿಗ್ವಿಜಯ 24X7 ನ್ಯೂಸ್ನಲ್ಲಿ ವೀಕ್ಷಿಸಬಹುದಾಗಿದೆ.