ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

love case
Published on

ಹಾಸನ: ಪ್ರಿಯಕರನಿಂದ ಕರೆ ಬಂತೆಂದು ರಾತ್ರೋರಾತ್ರಿ ಮನೆಯಿಂದ ಹೊರ ಹೋದ ಅಪ್ರಾಪ್ತೆ ಮರುದಿನ ಬೆಳಗ್ಗೆ ಶವವಾಗಿ ಪತ್ತೆಯಾದ ಘಟನೆ ಹೊಳೆನರಸೀಪುರ ಕೆರಗೋಡು ಗ್ರಾಮದಲ್ಲಿ ಸಂಭವಿಸಿದೆ.

ಜ.26ರ ಮಧ್ಯರಾತ್ರಿ ಮನೆಯಿಂದ ಎದ್ದು ಹೋದ 16 ವರ್ಷದ ಬಾಲಕಿ, ಜ.27ರ ಬೆಳಗಿನ ಜಾವ ಗ್ರಾಮ ಸಮೀಪದ ಅಂಕವಳ್ಳಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಪ್ರಕರಣದ ಬೆನ್ನತ್ತಿದ ಹೊಳೆನರಸೀಪುರ ಪೊಲೀಸರು ಬಾಲಕಿ ಸಾವಿನ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿರಿ ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

16 ವರ್ಷದ ಬಾಲಕಿ ಜತೆ ಕೆರಗೋಡು ಗ್ರಾಮದ ಯೋಗೇಶ್(23) ಪ್ರೀತಿಯ ನಾಟಕವಾಡಿದ್ದ. ಆಟವಾಡುತ್ತ ಓದಿಕೊಂಡಿರಬೇಕಿದ್ದ ಬಾಲಕಿಯನ್ನ ಪ್ರೇಮಪಾಶಕ್ಕೆ ಸಿಲುಕಿಸಿದ ಯೋಗೇಶ್​, ಮದುವೆ ಆಗುವುದಾಗಿ ನಂಬಿಸಿದ್ದ.

ಜ.26ರಂದು ಬಾಲಕಿಯನ್ನ ಪುಸಲಾಯಿಸಿ ಮನೆಯಿಂದ ಹೊರಗೆ ಕರೆಸಿಕೊಂಡಿದ್ದ ಆತ, ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದ. ಬಳಿಕ ಮದುವೆ ಆಗುವಂತೆ ಬಾಲಕಿ ಒತ್ತಾಯಿಸಿದ್ದಕ್ಕೆ ಆತ, ಈಗಲೇ ಮದುವೆ ಬೇಡ. ನಿನಗೆ ಮದುವೆ ವಯಸ್ಸು ಆಗಲಿ ಎಂದಿದ್ದ. ಇದರಿಂದ ಮನನೊಂದ ಬಾಲಕಿ, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿ ಯೋಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net