ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

love case
Published on

ಮಂಗಳೂರು: ಮಂಗಳೂರಿನ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್​ನಲ್ಲಿ ಸ್ನೇಹಿತರೊಂದಿಗೆ ಕುಳಿತಿದ್ದ ಯುವತಿ ಮೇಲೆ ಆಕೆಯ ಮಾಜಿ ಲವರ್​ನ ಗ್ಯಾಂಗ್​ ದಾಳಿ ಮಾಡಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಯುವತಿಯ ಮಾಜಿ ಲವರ್​ ತ್ರಿಶೂಲ್(19), ಸಂತೋಷ್ ಪೂಜಾರಿ (19), ಡ್ಯಾನಿಶ್ ಅರೆನ್ ಡಿಕ್ರೋಸ್ (18) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ತ್ರಿಶೂಲ್​ ಜತೆ ಲವ್ ಬ್ರೇಕ್ ಆಪ್ ಮಾಡಿಕೊಂಡು ರಿಂಗ್ ವಾಪಸ್ ಕೊಟ್ಟು ಹೋಗಿದ್ದ 18 ವರ್ಷದ ಯುವತಿ ಜ.30ರಂದು ಮತ್ತೊಬ್ಬ ಯುವಕನ ಜೊತೆ ಹೋಟೆಲ್​ನಲ್ಲಿ ಬರ್ತ್​ ಡೇ ಪಾರ್ಟಿ ಮಾಡಿಕೊಳ್ಳುತ್ತಿದ್ದಳು. ಈ ವೇಳೆ ಆಕೆಯ ಜತೆಯಲ್ಲಿ ಕೆಲ ಸ್ನೇಹಿತರೂ ಇದ್ದರು. ಇದನ್ನೂ ಓದಿರಿ ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಇದೇ ವೇಳೆ ಹೋಟೆಲ್​ಗೆ ತನ್ನ ಸ್ನೇಹಿತರೊಂದಿಗೆ ನುಗ್ಗಿದ್ದ ತ್ರಿಶೂಲ್​, ಮಾಜಿ ಪ್ರೇಯಸಿ ಜೊತೆಯಿದ್ದ ಪ್ರತೀಕ್ಷ್ ಎಂಬಾತನಿಗೆ ಚೂರಿಯಿಂದ ಇರಿದಿದ್ದಾನೆ. ಪ್ರತೀಕ್ಷ್​ಗೆ ನಾಲ್ಕು ಕಡೆ ಚೂರಿಯಿಂದ ಇರಿಯಲಾಗಿದ್ದು, ಜತೆಯಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಯ ದೃಷ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತನ್ನೊಂದಿಗೆ ಲವ್​ ಬ್ರೇಕ್ ಆಪ್ ಮಾಡಿಕೊಂಡು ಮತ್ತೊಬ್ಬನೊಂದಿಗೆ ಬರ್ತ್​ ಡೇ ಪಾರ್ಟಿ ಮಾಡಿಕೊಳ್ಳುತ್ತಿರುವುದನ್ನ ಸಹಿಸದೆ ಮಾರಣಾಂತಿಕ ಹಲ್ಲೆ ಮಾಡಿದ ಭಗ್ನ ಪ್ರೇಮಿ ಇದೀಗ ಸಹಚರರೊಂದಿಗೆ ಮಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net