More

    ಕೇಂದ್ರ ಬಜೆಟ್​: 2ನೇ ಮಹಾಯುದ್ಧದಂತೆ ಕರೊನಾ ಬಿಕ್ಕಟ್ಟು…

    ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭದಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕರೊನಾವನ್ನು 2ನೇ ಮಹಾಯುದ್ದಕ್ಕೆ ಹೋಲಿಸಿದರು. ಕರೊನಾದಿಂದಾಗಿ ಆರ್ಥಿಕಮಟ್ಟ ಕುಸಿದಿದ್ದು, ಭಾರತದ ಆರ್ಥಿಕತೆಗೆ ಈ ಬಜೆಟ್​ ಮುನ್ನುಡಿ ಆಗಲಿದೆ ಎಂದರು.

    ಕೋವಿಡ್​ ನಿರ್ವಹಣೆಗಾಗಿ ಶೇ.13 ಹಣ ವಿನಿಯೋಗಿಸಲಾಗಿದೆ. ಕರೊನಾ ವಿರುದ್ಧ ಹೋರಾಟ ಮುಂದುವರಿಯಲಿದೆ. ಶೀಘ್ರದಲ್ಲೇ ಇನ್ನೆರಡು ವ್ಯಾಕ್ಸಿನ್​ ಬರಲಿದೆ ಎಂದ ಸಚಿವೆ, ವ್ಯಾಕ್ಸಿನ್​ ಕಂಡುಹಿಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದರು. ಕರೊನಾಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಕರೊನಾ ಬಿಕ್ಕಟ್ಟನ್ನು ವಿಶ್ವದಲ್ಲೇ ಭಾರತ ಸಮರ್ಥವಾಗಿ ನಿಭಾಯಿಸಿದೆ ಎಂದ ಸಚಿವೆ, ಭಾರತದ ಮೇಲೆ ವಿಶ್ವದ ಭರವಸೆ ಹೆಚ್ಚಿದೆ ಎಂದರು.
    ಕರೊನಾದಿಂದಾಗಿ ಬಹುತೇಕರು ಮನೆಯಲ್ಲೇ ಇದ್ದರು. ಲಾಕ್​ಡೌನ್​ ವೇಳೆ ಹಲವು ಪ್ಯಾಕೇಜ್​ ಘೋಷಣೆ ಮಾಡಲಾಯಿತು. ಏಪ್ರಿಲ್​ನಲ್ಲಿ ಮತ್ತೆರಡು ಕರೊನಾ ಲಸಿಕೆ ಮಾರುಕಟ್ಟೆಗೆ ಬರಲಿವೆ. ಎಲ್ಲರ ಸಹಕಾರದಿಂದಾಗಿ ಕರೊನಾ ವಿರುದ್ಧ ಗೆಲುವು ಸಾಧಿಸಿದ್ದೇವೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ಎಂದರು. ಇದನ್ನೂ ಓದಿರಿ ಸಾಂಪ್ರದಾಯಿಕ “ಬಹಿ ಖಾತಾ” ಪದ್ಧತಿಗೆ ಗುಡ್​ ಬೈ: ಬಜೆಟ್​ ಮಂಡನೆಗೆ ಡಿಜಿಟಲ್​ ಸ್ಪರ್ಶ!

    ದೇಶದಲ್ಲಿ ಏಕೀಕೃತ ಆರೋಗ್ಯ ವ್ಯವಸ್ಥೆ ಜಾರಿಯಾಗಲಿದ್ದು, ಎಲ್ಲ ಜಿಲ್ಲೆಗಳಲ್ಲೂ ಆರೋಗ್ಯ ಟೆಸ್ಟ್​ ಲ್ಯಾಬ್​ ಸ್ಥಾಪನೆಗೆ ಒತ್ತು ನೀಡಲಾಗುವುದು. 20 ಮೆಟ್ರೋ ಪಾಲಿಟಿನ್​ ಸಿಟಿಗಳಲ್ಲಿ ಅತ್ಯುನ್ನತ ಆರೋಗ್ಯ ಸೇವೆ, ಸಾರ್ವಜನಿಕರ ಆರೋಗ್ಯ ಕಾಪಾಡುವುದು ನಮ್ಮ ಆದ್ಯತೆ ಎಂದರು.

    ಒಟ್ಟಾರೆ ಬಜೆಟ್​ ಆರಂಭದಲ್ಲೇ ಆರೋಗ್ಯದ ಬಗ್ಗೆ ಪ್ರಸ್ತಾಪಿಸಿದ್ದು, ಆರೋಗ್ಯ ಕ್ಷೇತ್ರಕ್ಕೆ ಈ ಭಾರಿ ಹೆಚ್ಚು ಮನ್ನಣೆ ಸಿಕ್ಕಂತಾಗಿದೆ. ಕರೊನಾ ಸೋಂಕು ತೀವ್ರವಾಗಿ ಕಾಡಿದ ಬಳಿಕ ಆರೋಗ್ಯವೇ ಭಾಗ್ಯ ಎಂಬ ಮಂತ್ರ ಜಪಿಸುತ್ತಿರುವುದು ಆಶಾದಾಯಕ ಬೆಳವಣಿಗೆ.

    ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

    ಸಾಂಪ್ರದಾಯಿಕ “ಬಹಿ ಖಾತಾ” ಪದ್ಧತಿಗೆ ಗುಡ್​ ಬೈ: ಬಜೆಟ್​ ಮಂಡನೆಗೆ ಡಿಜಿಟಲ್​ ಸ್ಪರ್ಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts