More

  ಮರ ಕಡಿದ ತೋಟದ ಮಾಲೀನ ವಿರುದ್ಧ ಪ್ರಕರಣ ದಾಖಲು

  ಶನಿವಾರಸಂತೆ: ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯದೆ ತೋಟದಲ್ಲಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೋಟದ ಮಾಲೀಕ ಹಾಗೂ ಮರ ಸಾಗಣೆ ಮಾಡಲು ಸಹರಿಸಿದವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

  ಹೊಸಗುತ್ತಿ ಗ್ರಾಮದ ಆದರ್ಶ ಎಂಬುವರು ಹೊಸಳ್ಳಿಯಲ್ಲಿರುವ ತನ್ನ ತೋಟದಲ್ಲಿ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯದೆ ತೇಗ, ತಡಸಲು, ಬಿಲ್ವಾರ ಮರಗಳನ್ನು ಕಡಿದು ನಾಟಗಳನ್ನು ಸಾಗಣೆ ಮಾಡುವ ಸಲುವಾಗಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಬಳಿಯ ಕಾರ್ಗಲ್ ಗ್ರಾಮದಲ್ಲಿ ದಾಸ್ತಾನು ಮಾಡಿದ್ದರು. ಈ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅರಕಲಗೂಡು ಅರಣ್ಯ ವಲಯದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರದ ನಾಟಗಳನ್ನು ವಶಕ್ಕೆ ಪಡೆದಿದ್ದಾರೆ.

  ಹೊಸಗುತ್ತಿ ಗ್ರಾಮದ ಆದರ್ಶ, ಕೆ.ಸಿ.ಕುಮಾರ್ ಹಾಗೂ ಸಾಗಣೆಗೆ ಸಹಕರಿಸಿದ ಅರಕಲಗೂಡು ತಾಲೂಕಿನ ಮಲ್ಲಪ್ಪನಳ್ಳಿ ಗ್ರಾಮದ ಎಂ.ಪಿ.ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  ಶನಿವಾರಸಂತೆ ಆರ್‌ಎಫ್‌ಒ ಗಾನಶ್ರೀ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಎಂ.ಜೆ.ಸೂರ್ಯ, ಚಂದ್ರಪ್ಪ ಬಣ್ಣಕಾರ್, ಎಂ.ಎಸ್.ಪುನೀತ್, ಸಿಬ್ಬಂದಿ ರಮೇಶ್ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts