ಕುಡಿಬೇಡ ಎಂದಿದ್ದಕ್ಕೆ ಟಾಯ್ಲೆಟ್​ ಕ್ಲೀನರ್​​ ಸೇವಿಸಿ ಪ್ರಾಣ ಬಿಟ್ಟ!

Toilet Cleaner
Published on

ಜೈಪುರ: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಗೆ ಪತ್ನಿ ಬೈದ ಪರಿಣಾಮ ಆತ ಟಾಯ್ಲೆಟ್​ ಕ್ಲೀನರ್​ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಭರತ್​ಪುರ ಜಿಲ್ಲೆಯ ಕುಮ್ಹೆರ್​​ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು ಮೃತ ದುರ್ದೈವಿಯನ್ನು ವಿನೋದ್​ ಎಂದು ಗುರುತಿಸಲಾಗಿದೆ.

ಮದ್ಯ ವ್ಯಸನಿಯಾಗಿದ್ದ ವಿನೋದ್​ ಹಾಗೂ ಆತನ ಪತ್ನಿ ನಡುವೆ ಪ್ರತಿನಿತ್ಯ ಗಲಾಡಟೆಯಾಗುತ್ತಿತ್ತು. ಕುಡಿತ ಬಿಡುವಂತೆ ಆಕೆ ಹಲವು ಭಾರೀ ಒತ್ತಾಯಿಸಿದ್ದಳು. ಇದೇ ವಿಚಾರವಾಗಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದು ಬಂದಿದೆ.

Death symbolic photo

ಶನಿವಾರ ಕುಡಿತದ ವಿಚಾರವಾಗಿ ಆತನ ಪತ್ನಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದು ದಂಪತಿಗಳ ನಡುವೆ ವಾಗ್ವಾದ ಶುರುವಾಗಿದೆ. ಈ ವೇಳ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವಿನೋದ್​ ರೂಂ ಬಾಗಿಲು ಹಾಕಿಕೊಂಡಿದ್ಧಾನೆ.

ಇದಾದ ಕೆಲ ಕ್ಷಣಗಳ ಬಳಿಕ ಟಾಯ್ಲೆಟ್​ ಕ್ಲೀನರ್​ ಸೇವಿಸಿ ವಿನೋದ್​ ಜೋರಾಗಿ ಕೂಗಲು ಶುರು ಮಾಡಿದ್ದಾನೆ. ಕುಟುಂಬಸ್ಥರು ಆತನನ್ನು ತಕ್ಷಣವೇ ಆತನನ್ನು ಕರೆದುಕೊಮಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ, ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್​ ಅಧಿಕಾರಿಗಳು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net