More

    ಗ್ಯಾರಂಟಿ ಕೊಡ್ತೀವಿ ಆದರೆ, ಕಂಡಿಷನ್ ಅಪ್ಲೈ ಆಗುತ್ತೆ: ಸತೀಶ್​ ಜಾರಕಿಹೊಳಿ

    ಬೆಳಗಾವಿ: ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಕಾಂಗ್ರೆಸ್​ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಿತ್ತು.

    ಈಗಾಗಲೇ ಗ್ಯಾರಂಟಿಗಳ ಅನುಷ್ಠಾನದ ವಿಚಾರವಾಗಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಸಚಿವ ಸತೀಶ್​ ಜಾರಕಿಹೊಳಿ ಹೊಸ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ಗ್ಯಾರಂಟಿ ಕೊಡಲು ಆಗುವುದಿಲ್ಲ

    ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಸತೀಶ್​ ಆದಾಯ ತೆರಿಗೆಕಟ್ಟುವವರಿಗೆ, ಸರ್ಕಾರಿ ನೌಕರರಿಗೆ ಗ್ಯಾರಂಟಿ ಕೊಡಲು ಆಗುವುದಿಲ್ಲ. ಕೆಲವರು ನಮಗೆ ಗ್ಯಾರಂಟಿ ಬೇಡ ಎಂದು ಹೇಳಿದ್ದಾರೆ.

    ಕೆಲವರು ಬೇಡ ಎಂದು ಸಾರಾ ಸಾಗಟವಾಗಿ ತಿರಸ್ಕಾರ ಮಾಡುತ್ತಿಲ್ಲ ಬೇಡಾ ಅಂದವರಿಗೂ ಸರ್ಕಾರ ರೂಲ್ಸ್ ಮಾಡಬೇಕು ಅಲ್ವಾ ಎಂದಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಇದರ ಸಂಪೂರ್ಣ ಮಾಹಿತಿ ಹೊರ ಬರುತ್ತದೆ ಎಂದು ತಿಳಿಸಿದ್ದಾರೆ.

    ಗ್ಯಾರಂಟಿ ಕೊಡ್ತೀವಿ ಆದರೆ, ಕಂಡಿಷನ್ ಅಪ್ಲೈ ಆಗುತ್ತೆ: ಸತೀಶ್​ ಜಾರಕಿಹೊಳಿ

    ಮುಖ್ಯ ವಾಹಿನಿಗೆ ತರಬೇಕು

    ಇನ್ನು ರಾಜ್ಯದ ಕೆಲವು ಭಾಗಗಳಲ್ಲಿ ಜನರು ವಿದ್ಯುತ್​ ಬಿಲ್​ ಪಾವತಿಸಲು ನಿರಾಕರಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ ಕೆಲವು ಕಡೆಗಳಲ್ಲಿ ಮೀಟರ್ ಗಳಲ್ಲಿ ನೇರವಾಗಿ ವಿದ್ಯುತ್ ತಗೊಂಡಿದ್ದಾರೆ ಇವೆಲ್ಲವನ್ನೂ ನೋಡಬೇಕಾಗುತ್ತೆ, ಮೊದಲು ಮೀಟರ್ ಹಾಕಿ ಮುಖ್ಯ ವಾಹಿನಿಗೆ ತರಬೇಕು.

    ಇದನ್ನೂ ಓದಿ: ನೂತನ ಸಂಸತ್ ಭವನದ ಹೊರಗೆ ಪ್ರತಿಭಟನೆಗೆ ಯತ್ನ; ಕುಸ್ತಿಪಟುಗಳು ಪೊಲೀಸ್​ ವಶಕ್ಕೆ

    ಗೃಹಜ್ಯೋತಿ ಯೋಜನೆಯಿಂದ ಒಂದೇ ಕುಟುಂಬದಲ್ಲಿ ಎರಡು ಮನೆ ಆಗಬಹುದು ಅದನ್ನ ಹೇಗೆ ಕಂಡು ಹಿಡಿಯಬೇಕು ಎಂಬುದರ ಕುರಿತು ಚರ್ಚೆಯಾಗುತ್ತಿದೆ. ಶೀಘ್ರದಲ್ಲೇ ಅಧಿಕಾರಿಗಳಿಂದ ವರದಿ ಪಡೆದ ನಂತರ ತಿಳಿಸಲಾಗುವುದು ಎಂದು ಹೇಳಿದ್ದಾರೆ.

    ಕೊಡುವುದು ನಮ್ಮ ಜವಾಬ್ದಾರಿ

    ನಾವು ಗ್ಯಾರಂಟಿ ಕೊಡುವುದಿಲ್ಲ ಅಂತಾ ಹೇಳುವುದಿಲ್ಲ ಇಂತಹ ದೊಡ್ಡ ಅಮೌಂಟ್ ಕೊಡಲು ಯಾರು ಎನೂ ಎಂದು ಹುಡಕಬೇಕಾಗುತ್ತೆ. ಸುಮ್ನೆ ಕೊಡಲು ಆಗುವುದಿಲ್ಲ ಆಶ್ವಾಸನೆ ಕೊಟ್ಟಿದ್ದೇವೆ ನಿಭಾಯಿಸುತ್ತೇವೆ.

    ಗ್ಯಾರಂಟಿ ಕೊಡುವುದು ನಮ್ಮ ಜವಾಬ್ದಾರಿ, ಇನ್ನೂ ಬಹಳ ದಿನ ಇದೆ ಸ್ವಲ್ಪ ತಡ ಆಗಬಹುದು ಆದ್ರೇ ಖಂಡಿತ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸರ್ವೇ ಮಾಡ್ತಿದ್ದೇವೆ, ಸರ್ಕಾರದಲ್ಲೂ ಲಿಸ್ಟ್ ಇದೆ ಅದನ್ನ ಹೇಗೆ ಜಾರಿಗೆ ತರಬೇಕು ಅನ್ನೋದು ಪ್ರಶ್ನೆಯಾಗಿದೆ. ಗ್ಯಾರಂಟಿ ಕೊಡ್ತೀವಿ ಆದರೆ, ಕಂಡಿಷನ್ ಅಪ್ಲೈ ಆಗುತ್ತೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts