

ನವದೆಹಲಿ: ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕುಸ್ತಿಪಟುಗಳು ಕಳೆದ ಹಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಈಗ ಮತ್ತೊಂದು ಹಂತ ತಲುಪಿದೆ.
ಇನ್ನು ಪ್ರತಿಭಟನಾ ನಿರತ ಕುಸ್ತಿಪಟುಗಳು ಭಾನುವಾರ(ಮೇ 28)ರಂದು ಉದ್ಘಾಟನೆಗೊಂಡ ನೂತನ ಸಂಸತ್ ಭವನದ ಎದುರು ಪ್ರತಿಭಟನಾ ನಡೆಸಲು ಮುಂದಾದಾಗ ದೊಡ್ಡ ಹೈ ಡ್ರಾಮಾವೇ ನಡೆದು ಹೋಗಿದೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು ನೂತನ ಸಂಸತ್ ಭವನದ ಎದುರು ಮಹಾಪಂಚಾಯತ್ ನಡೆಸಿ ತಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಲು ಮುಂದಾಗಿದ್ದರು.
ಈ ವೇಳೆ ಪೊಲೀಸರು ಕುಸ್ತಿಪಟುಗಳು ಸ್ಥಳದೆಲ್ಲೇ ಪ್ರತಿಭಟಿಸುವಂತೆ ಸೂಚಿಸಿದ್ದಾರೆ. ಇದಕ್ಕೊಪ್ಪದ ಪ್ರತಿಭಟನಾನಿರತರು ಹಾಗೂ ಪೊಲೀಸರ ನಡುವೆ ವಾಗ್ವಾದವೇ ನಡೆದು ಹೋಯಿತು. ಬಳಿಕ ಕುಸ್ತಿಪಟುಗಳನ್ನು ವಶಕ್ಕೆ ಪಡೆದು ಬೇರೊಂದು ಸ್ಥಳಕ್ಕೆ ಪೊಲೀಸರು ಕರೆದೊಯ್ದಿದ್ದಾರೆ.