More

    ಒಳ ಉಡುಪಿನಲ್ಲಿ 1.69 ಕೋಟಿ ರೂ. ಮೌಲ್ಯದ ವಜ್ರಗಳ ಕಳ್ಳ ಸಾಗಣೆ; ಆರೋಪಿ ಅರೆಸ್ಟ್​

    ಮಂಗಳೂರು: ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳ್ಳಸಾಗಣೆಯಾಗುತ್ತಿದ್ದ 1.69 ಕೋಟಿ ರೂಪಾಯಿ ಮೌಲ್ಯದ 306.21 ಕ್ಯಾರೆಟ್​ ವಜ್ರಗಳನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಬೆಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ 1.69 ಕೋಟಿ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ಧಾರೆ.

    ಇದನ್ನೂ ಓದಿ: ಸ್ನೇಹಿತರ ಜತೆ ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆ ಪಾಲು; ಮುಗಿಲು ಮುಟ್ಟಿದ ಆಕ್ರಂದನ

    ಒಳ ಉಡುಪಿನಲ್ಲಿಟ್ಟು ಸಾಗಾಣೆ

    ಮೇ 25ರಂದು ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ವ್ಯಕ್ತಿ ಒಬ್ಬರು ಒಳಉಡುಪಿನಲ್ಲಿ ವಜ್ರಗಳನ್ನು ಪೊಟ್ಟಣ್ಣದಲ್ಲಿಟ್ಟು ಸಾಗಿಸುತ್ತಿರುವುದು ಕಂಡು ಬಂದಿದೆ. ಈ ವೇಳೆ CISF ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಳ್ಳಸಾಗಾಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ಎರಡು ಪೊಟ್ಟಣ್ಣಗಳನ್ನು ತೆರೆದು ಪರಿಶೀಲಿಸಿದಾಗ ಅದರೊಳಗೆ 13 ಸಣ್ಣ ಪ್ಯಾಕೆಟ್​ಗಳು ಇರುವುದು ಕಂಡು ಬಂದಿದೆ. ಕಾಸರಗೋಡು ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts