ಸ್ನೇಹಿತರ ಜತೆ ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆ ಪಾಲು; ಮುಗಿಲು ಮುಟ್ಟಿದ ಆಕ್ರಂದನ

anekal crime
Published on

ಆನೇಕಲ್: ಸ್ನೇಹಿತರ ಜತೆ ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗೋಪಿ(19) ಮೃತ ಯುವಕ. ಆನೇಕಲ್ ತಾಲೂಕಿನ ಮಹಲ್ ಚೌಡದೇನಹಳ್ಳಿ ಕೆರೆಯಲ್ಲಿ ನಡೆದ ಘಟನೆ ನಡೆದಿದೆ.

ಗೋಪಿ ತನ್ನ ಸ್ನೇಹಿತರ ಜತೆ ಚೌಡದೇನಹಳ್ಳಿ ಕೆರೆಯಲ್ಲಿ ಮೀನಿ ಹಿಡಿಯಲು ತೆರಳಿದ್ದರು. ಮೀನು ಹಿಡಿಯಲು ಹೋಗಿದ್ದ ಯುವಕ ಆಯಾ ತಪ್ಪಿ ಬಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.

ಅಗ್ನಿಶಾಮಕದಳದ ಸಿಬ್ಬಂದಿ ಮೃತ ದೇಹವನ್ನ ಮೇಲೆತ್ತಿದ್ದಾರೆ. ಮೃತ ಗೋಪಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net