More

    ಹಬ್ಬದ ಹಿನ್ನೆಲೆ ಮಾಂಸ ಮಾರಾಟ ನಿಷೇಧ; ನಿಯಮ ಉಲ್ಲಂಘಿಸಿದ್ರೆ 1000 ರೂ. ದಂಡ

    ಸಿಕ್ಕಿಂ: ಟಿಬೆಟಿಯನ್ ಜನರು ಅನುಸರಿಸುವ ಬೌದ್ಧ ಕ್ಯಾಲೆಂಡರ್‌ನಲ್ಲಿ ಪವಿತ್ರ ತಿಂಗಳು ಸಾಗಾ ದಾವಾ ಪ್ರಾರಂಭವಾಗಿದೆ.  ಈ ಹಿನ್ನೆಲೆಯಲ್ಲಿ ಸಿಕ್ಕಿಂನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

    ‘ಸಾಗಾ ದಾವಾ’ ಆಚರಣೆ ಹಿನ್ನೆಲೆ ಪ್ರಾಣಿ ಹತ್ಯೆಯನ್ನು ನಿಷೇಧಿಸಿರುವುದರಿಂದ ಸಿಕ್ಕಿಂನಲ್ಲಿನ ಎಲ್ಲಾ ಮಾಂಸದ ಅಂಗಡಿಗಳು ಮೇ 27ರಿಂದ ಜೂನ್​ 4ರ ವರೆಗೆ ಮುಚ್ಚುವಂತೆ ಸಿಕ್ಕಿಂ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಹಿಂದೂ ಯುವಕ-ಮುಸ್ಲಿಂ ಯುವತಿ ಊಟಕ್ಕೆ ಹೋಗಿ ಬರುವ ವೇಳೆ ಅಮಾನುಷವಾಗಿ ಹಲ್ಲೆ: ರಕ್ಷಿಸಲು ಬಂದ ದಾರಿಹೋಕರಿಗೆ ಚೂರಿ ಇರಿತ

    ಕೆಲ ದಿನಗಳ ಕಾಲ ಮಾಂಸ ಮಾರಾಟಕ್ಕೆ ಸಿಕ್ಕಿಂ ಸರ್ಕಾರ ನಿಷೇಧ ಹೇರಿದೆ. ಮದುವೆ ಸಮಾರಂಭ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮೃಗಾಲಯದಲ್ಲಿ ಇಡುವ ಪ್ರಾಣಿಗಳಿಗೆ ಮಾತ್ರ ಹೊರಗಿನಿಂದ ಮಾಂಸ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಮೀನು ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಯಾವುದೇ ವ್ಯಾಪಾರಿಗಳು ಮತ್ತು ಜನಸಾಮಾನ್ಯರು ಈ ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದರೆ ಅವರಿಗೆ 1000 ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

    ಈ ನಿರ್ಧಾರವನ್ನು ಸಿಕ್ಕಿಂ ಸರ್ಕಾರ ಮೇ 27ರಿಂದ ಜಾರಿಗೆ ತಂದಿದೆ. ರಾಜ್ಯದ ಟಿಬೆಟಿಯನ್ ಜನರು ಈ ಬೌದ್ಧ ಕ್ಯಾಲೆಂಡರ್ ಅನ್ನು ಅನುಸರಿಸುತ್ತಾರೆ. ಹೀಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

    10 ವರ್ಷ ಹಿಂದೆಯೇ ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts