ಎಂಫಿಲ್​ಗೆ ಸೇರದಂತೆ ಯುಜಿಸಿ ಸೂಚನೆ; ಈ ಶೈಕ್ಷಣಿಕ ವರ್ಷದಿಂದಲೇ ಪದವಿ ಸ್ಥಗಿತ

UGC
Published on

ನವದೆಹಲಿ: ವಿದ್ಯಾರ್ಥಿಗಳು ಮಾಸ್ಟರ್​ ಆಫ್​ ಫಿಲಾಸಫಿ (ಎಂಫಿಲ್​) ಪದವಿಗೆ ಪ್ರವೇಶ ಪಡೆಯಬಾರದು ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿದೆ. ಎಂಫಿಲ್​ ಪದವಿಯನ್ನು 2023-24ರ ಶೈಕ್ಷಣಿಕ ವರ್ಷದಿಂದಲೇ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಯುಜಿಸಿ ಈ ಮಾಹಿತಿ ನೀಡಿದೆ.

ಎಂಫಿಲ್​ ಎನ್ನುವುದು ಮಾನ್ಯತೆ ಪಡೆದ ಪದವಿಯಲ್ಲ, ಅದು ಎರಡು ವರ್ಷಗಳ ಸ್ನಾತಕೋತ್ತರ ಶೈಕ್ಷಣಿಕ ಅಧ್ಯಯನ ಕೋರ್ಸ್​ ಆಗಿದ್ದು, ಅದು ಪಿಎಚ್​ಡಿ ಕಾರ್ಯಕ್ರಮಕ್ಕೆ ತಾತ್ಕಾಲಿಕ ದಾಖಲಾತಿ ಆಗಿಯೂ ಬಳಕೆಗೆ ಬರುತ್ತದೆ. ಆದಾಗ್ಯೂ ಯುಜಿಸಿ ಈ ಕೋರ್ಸ್​ ಸ್ಥಗಿತಗೊಳಿಸಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸದಂತೆ ಎಲ್ಲ ವಿಶ್ವವಿದ್ಯಾಲಯಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ಯುಜಿಸಿ ಡಿ. 26ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಿದೆ.

ಕೆಲವು ವಿಶ್ವವಿದ್ಯಾಲಯಗಳು ಈ ಕೋರ್ಸ್​ಗೆ ಹೊಸದಾಗಿ ಅರ್ಜಿ ಆಹ್ವಾನಿಸಿದ್ದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಕೋರ್ಸ್​ ಮುಂದುವರಿಸದಿರಲು ನಿರ್ಧರಿಸಲಾಗಿತ್ತು ಎಂದೂ ಯುಜಿಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net